ವೃತ್ತಿಪರತೆ ಮತ್ತೊಮ್ಮೆ ಸಾಬೀತು 'ಕಾಬಿಲ್ ಹೃತಿಕ್'

ಮುಂಬೈ,ಅ.18: ಬಾಲಿವುಡ್ ನಟ ಹೃತಿಕ್ ರೋಷನ್ ಪಕ್ಕಾ ವೃತ್ತಿಪರ ನಟ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ‘ಕಬಾಲಿ’ ಚಿತ್ರದ ಶೂಟಿಂಗ್‌ನ್ನು ಅವರು ಕೇವಲ 77 ದಿನಗಳಲ್ಲಿ....ಅಂದರೆ ನಿಗದಿತ ವೇಳಾಪಟ್ಟಿಗಿಂತ 11 ದಿನಗಳ ಮೊದಲೇ ಪೂರ್ಣ ಗೊಳಿಸಿದ್ದಾರೆ.
ನಿರ್ಮಾಪಕ ರಾಕೇಶ್ ರೋಷನ್ ಅವರು 88 ದಿನಗಳಲ್ಲಿ ಚಿತ್ರವನ್ನು ಪೂರ್ಣ ಗೊಳಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ನಿರ್ದೇಶಕ ಸಂಜಯ್ ಗುಪ್ತಾ ಅವರು ನಿಗದಿತ ಅವಧಿಗೆ ಮುನ್ನವೇ ಚಿತ್ರವನ್ನು ಮುಗಿಸಿದ್ದಾರೆ.
ಅವಸರಿಸುವ ಅಗತ್ಯವಿಲ್ಲ.‘ಕಬಾಲಿ ’ಚಿತ್ರಕ್ಕಾಗಿ ನಿಮಗೆ ಅಗತ್ಯವಿರುವಷ್ಟು ಸಮಯ ತೆಗದುಕೊಳ್ಳಿ ಎಂದು ನಾನು ಗುಪ್ತಾಗೆ ತಿಳಿಸಿದ್ದೆ ಎಂದು ತಿಳಿಸಿದ ರಾಕೇಶ್, ಚಿತ್ರ ನಿರ್ಮಾಣ ತಂಡ ಬೆಳಿಗ್ಗೆ 9:30ಕ್ಕೆಲ್ಲ ಶೂಟಿಂಗ್‌ಗೆ ತಯಾರಾಗಿರುತ್ತಿತ್ತು ಮತ್ತು ಈ ಪರಿಪಾಠ ಒಂದು ದಿನವೂ ತಪ್ಪಿರಲಿಲ್ಲ. ಹೀಗಾಗಿ ಚಿತ್ರೀಕರಣದ ದಿನಗಳೂ ಕಡಿಮೆಯಾದವು ಮತ್ತು ನಾವು ಅಂದುಕೊಂಡ ಸಮಯದಲ್ಲೇ ಚಿತ್ರವನ್ನು ಪೂರ್ಣಗೊಳಿಸಿದ್ದೇವೆ ಎಂದರು.
ಕಬಾಲಿ’ಯಲ್ಲಿ ಹೃತಿಕ್‌ಗೆ ನಾಯಕಿಯಾಗಿ ಯಾಮಿ ಗೌತಮ್ ನಟಿಸಿದ್ದು, ಚಿತ್ರದ ಟ್ರೇಲರ್ ಮಂದಿನ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.





