ವಾಲಿಬಾಲ್ ಪಂದ್ಯಾಟ: ಕಲ್ಯಾಣಪುರ ಮಿಲಾಗ್ರಿಸ್‌ಗೆ ಪ್ರಶಸ್ತಿ

ಉಡುಪಿ, ಅ.18: ಕಾಡಬೆಟ್ಟು ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾದ ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ವಿನ್ನರ್ಸ್ ಪ್ರಶಸ್ತಿ ಗೆದ್ದುಕೊಂಡಿತು.
ಒಳಕಾಡು ಪ್ರೌಢಶಾಲಾ ದ್ವಿತೀಯ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ತಂಡ ತೃತೀಯ ಮತ್ತು ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಚತುರ್ಥ ಸ್ಥಾನವನ್ನು ಪಡೆದುಕೊಂಡವು. ಉತ್ತಮ ಹೊಡೆತಗಾರ್ತಿ ಪ್ರಜ್ಞಾ ಕೊಡವೂರು, ಉತ್ತಮ ಪಾಸರ್ ಸುಚೇತನ, ಉತ್ತಮ ಸವ್ಯಸಾಚಿ ಮೊನಿಷಾ ಪಡೆದರು. ಪಂದ್ಯಾಟವನ್ನು ಉಡುಪಿಯ ಸಿವಿಲ್ ಇಂಜಿನಿಯರ್ ಶಿವಪ್ರಸಾದ್ ಕೆ. ಉದ್ಘಾಟಿಸಿದರು.
ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ, ಮಾಜಿ ನಗರಸಭಾ ಸದಸ್ಯ ಪ್ರಕಾಶ್ ಅಂದ್ರಾದೆ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ರೀಡಾಕೂಟದ ಪ್ರಧಾನ ವ್ಯವಸ್ಥಾಪಕ ಎ.ಜೆ. ಕಾಡಬೆಟ್ಟು ಉಪಸ್ಥಿತರಿದ್ದರು.
Next Story





