ಹಿರಿಯಡ್ಕ: ಫಲಾನುಭವಿಗಳಿಗೆ ಪರಿಹಾರ ವಿತರಣೆ

ಹಿರಿಯಡ್ಕ, ಅ.18: ಹಿರಿಯಡ್ಕ ಶ್ರೀವೀರಭದ್ರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯ ಸಂದರ್ಭ ಗೋಡೆ ಕುಸಿದು ಬಿದ್ದು ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳಿಗೆ ಪರಿಹಾರ ಧನವನ್ನು ಇತ್ತೀಚೆಗೆ ದೇವಸ್ಥಾನದಲ್ಲಿ ವಿತರಿಸಲಾಯಿತು.
ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಶಾಸಕ ವಿನಯಕುಮಾರ್ ಸೊರಕೆ ಮೃತರಾದ ಲೋಕೇಶ್ ಶೆಟ್ಟಿಗಾರ್ ಮತ್ತು ಶಿವ ಪ್ರಸಾದ್ ಕುಟುಂಬದವರಿಗೆ 2,50,000 ಲಕ್ಷ ರೂ. ಪರಿಹಾರಧನವನ್ನು ವಿತರಿಸಿದರು.
ಅದೇ ರೀತಿ ಗಾಯಗೊಂಡ ಶಿವಪ್ರಸಾದ್ ಕಾಂಚನ್‌ಗೆ 60,000ರೂ., ಶ್ಯಾಮರಾಯ ಆಚಾರ್ 60,000ರೂ., ಪ್ರಕಾಶ್ ಸೇರಿಗಾರ್ 30,000 ರೂ., ರಾಜೇಶ್ ಸೇರಿಗಾರ್ 30,000ರೂ., ಅಜಯ್ ದೇವಾಡಿಗ ಮತ್ತು ರತ್ನಾಕರ್ ದೇವಾಡಿಗ ಅವರಿಗೆ 15,000ರೂ. ಸೇರಿದಂತೆ ಒಟ್ಟು ಸುಮಾರು 7,10,000 ಲಕ್ಷ ರೂ.ಚೆಕ್‌ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
Next Story





