ಸಮಾನ ನಾಗರಿಕ ಸಂಹಿತೆಯ ವಿರುದ್ಧದ ಎಐಎಂಪಿಎಲ್‌ಬಿ ನಿರ್ಧಾರಕ್ಕೆ ಬೆಂಬಲ: ಎಸ್‌ಡಿಪಿಐ
ಹೊಸದಿಲ್ಲಿ, ಅ.18: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‌ಬಿ) ಸಮಾನ ನಾಗರಿಕ ನೀತಿ ಸಂಹಿತೆಯ ವಿರುದ್ಧ ತೆಗೆದುಕೊಂಡಿರುವ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಪಕ್ಷವು ಬೆಂಬಲಿಸುತ್ತದೆ. ಸದ್ರಿ ಈ ಬಗ್ಗೆ ಕಾನೂನು ಸಮಿತಿಯು ರೂಪಿಸಿರುವ ಪ್ರಶ್ನಾವಳಿಯ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ಬಹಿಷ್ಕಾರ ಹಾಕುವಂತೆ ಎಲ್ಲ ಮುಸ್ಲಿಮರಿಗೆ ಅಪೀಲು ಮಾಡಿಕೊಳ್ಳುತ್ತದೆ. ಹಿಂಬಾಗಿಲಿನಿಂದ ಇಂಡಿಯಾವನ್ನು ಹಿಂದೂ ರಾಷ್ಟ್ರದ ಸಿದ್ದಾಂತವನ್ನು ಮುನ್ನಡೆಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಪಕ್ಷವು ಆಪಾದಿಸಿದೆ.
ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಕೆ.ಸಯೀದ್ ಎಐಎಂಪಿಎಲ್‌ಬಿ ನಿರ್ಧಾರದೊಂದಿಗೆ ಸಮ್ಮತಿ ವ್ಯಕ್ತಪಡಿಸಿ, ಕಾನೂನು ಸಮಿತಿಯು ಸಾರ್ವಜನಿಕರಿಂದ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಪ್ರತಿಕ್ರಿಯೆಯನ್ನು ಪಡೆಯುವ ನಡೆಯುವ ಒಂದು ಲೆಕ್ಕಾಚಾರ ಆಧಾರಿತ ನಿಲುವಾಗಿದ್ದು ಕೋಮು ಸೌಹಾರ್ದವನ್ನು ಕೆದಕುವ ಹುನ್ನಾರವಾಗಿದೆ ಮತ್ತು ಜಾರಿಗೊಳಿಸಿದ ನಂತರ, ಸಮಾನ ನಾಗರಿಕ ಸಂಹಿತೆಯು ದೇಶದ ವಿಭಿನ್ನತೆಯನ್ನು ಕೊಂದು ಹಾಕಿ ಒಂದೇ ಒಂದು ಬಣ್ಣವನ್ನು ನೀಡುವಂತಹದ್ದಾಗಿರುತ್ತದೆ. ಅವರು ಈ ಪ್ರಶ್ನಾವಳಿಯು ಸಮಿತಿಯ ಉದ್ದೇಶವನ್ನು ಸಾರಿ ಹೇಳುತ್ತದೆ ಎಂದು ಹೇಳಿದ್ದಾರೆ. ಕೆಲವು ಪ್ರಶ್ನೆಗಳು, ಕೇವಲ ಒಂದು ಧಾರ್ಮಿಕ ಗುಂಪನ್ನು ಮತ್ತು ಅವರ ವೈಯಕ್ತಿಕ ಕಾನೂನುಗಳನ್ನು ಗುರಿಯಾಗಿರಿಸಿ ರೂಪಿಸಿದಂತಾಗಿವೆ ಎಂಬುದನ್ನು ಬಹಿರಂಗಪಡಿಸುತ್ತವೆ.
ಮೂರು ಬಾರಿ ತಲಾಖ್ ನೀಡುವುದರ ಮೂಲಕ ಉಂಟಾಗುವ ಅನ್ಯಾಯ ಮತ್ತು ತೊಡರುಗಳನ್ನು ವಿರೋಧಿಸುವ ನೆಪದಲ್ಲಿ, ಸರಕಾರವು ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರವನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಕೇವಲ ರಾಜಕೀಯ ಲಾಭಗಳಿಗಾಗಿ ಎತ್ತಿಕೊಳ್ಳುವ ಇಂತಹ ವಿವಾದಾತ್ಮಕ ವಿಷಯಗಳನ್ನು ಅರಗಿಸಿಕೊಳ್ಳಲು ಭಾರತವು ಸಿದ್ಧವಾಗಿಲ್ಲ. ಸಂವಿಧಾನವು ಹೇಳುವ ಪ್ರಕಾರ, ಅಂತಹ ವಿವಾದಾತ್ಮಕ ವಿಷಯಗಳನ್ನು ಸರಕಾರದಿಂದ ಕೈಗೆತ್ತಿಕೊಳ್ಳುವ ಪೂರ್ವದಲ್ಲಿ ಹಲವಾರು ಸಂಬಂಧಿತ ಧರ್ಮಗಳು ಇಂತಹ ವಿಷಯದಲ್ಲಿ ಒಂದು ಸಮಾನ ನಿರ್ಣಯಕ್ಕೆ ಬಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅವರು ಎಲ್ಲ ಜ್ಯಾತ್ಯತೀತ ಪಕ್ಷಗಳು ಇದನ್ನು ಖಡಾಖಂಡಿತವಾಗಿ ವಿರೋಧಿಸಲು ಕೋರಿದರು. ಎಐಎಂಪಿಎಲ್‌ಬಿ ಕುರಾನ್ ಮತ್ತು ಸುನ್ನಾಗಳಿಂದ ಖಾತರಿಪಡಿಸಿದಂತೆ, ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ, ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಒಂದು ಸೂತ್ರವನ್ನು ಸಿದ್ಧಪಡಿಸಬೇಕು ಎಂದು ಕೇಳಿಕೊಂಡರು. ಸಮಾನ ನಾಗರಿಕ ಸಂಹಿತೆಗಿಂತ ಮುಖ್ಯವಾದ ವಿಷಯಗಳಾದ ಕೆಲಸದ ಹಕ್ಕು, ಜೀವನಾಂಶದ ಕೂಲಿ, ಆಸ್ತಿಯನ್ನು ಸಂಗ್ರಹಿಸಿಡುವುದನ್ನು ತಡೆಗಟ್ಟುವುದು ಮತ್ತು ಸ್ಮಾರಕಗಳ ರಕ್ಷಣೆಯಂತಹ ವಿಷಯಗಳ ಬಗ್ಗೆ ಯಾರೂ ಚಕಾರ ಎತ್ತದೇ ಇರುವುದು ಅಸಹ್ಯ ಮೂಡಿಸುತ್ತದೆ ಎಂದು ಪ್ರಕಟನೆಯಲ್ಲಿ ಹೇಳಿಕೆ ನೀಡಿದರು.







