ಕಬಡ್ಡಿ ವಿಶ್ವಕಪ್: ಭಾರತ ಸೆಮಿ ಫೈನಲ್‌ಗೆ ಲಗ್ಗೆ

ಅಹ್ಮದಾಬಾದ್, ಅ.18: ಇಂಗ್ಲೆಂಡ್ ತಂಡವನ್ನು 69-18 ಅಂಕಗಳ ಅಂತರದಿಂದ ಹೀನಾಯವಾಗಿ ಸೋಲಿಸಿದ ಭಾರತ ತಂಡ ಕಬಡ್ಡಿ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮಂಗಳವಾರ ಇಲ್ಲಿ ನಡೆದ ‘ಎ’ ಗುಂಪಿನ ತನ್ನ ಕೊನೆಯ ಹಾಗೂ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಅನೂಪ್ ಕುಮಾರ್ ನೇತೃತ್ವದ ಭಾರತದ ಕಬಡ್ಡಿ ತಂಡ ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡಿತು.
ಒಟ್ಟು 21 ಅಂಕ ಗಳಿಸಿರುವ ಭಾರತ ‘ಎ’ ಗುಂಪಿನಲ್ಲಿ 2ನೆ ಸ್ಥಾನಿಯಾಗಿ ಸೆಮಿ ಫೈನಲ್‌ಗೆ ತಲುಪಿತು. ಟೂರ್ನಿಯಲ್ಲಿ ಅಜೇಯವಾಗುಳಿದಿರುವ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ.
ಭಾರತ ಮೊದಲಾರ್ಧದಲ್ಲಿ 45-6 ಅಂಕಗಳಿಂದ ಮುನ್ನಡೆ ಸಾಧಿಸಿ ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಶರಣಾಗಿದ್ದ ಭಾರತ ಆ ಬಳಿಕ ಆಡಿರುವ ಎಲ್ಲ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಭಾರತ ವಿಶ್ವಕಪ್‌ನಲ್ಲಿ ಸತತ ಮೂರನೆ ಬಾರಿ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
Next Story





