ಶೇಖರ್‌ಗೆ ಅತ್ಯುತ್ತಮ ಗ್ರಾಮೀಣ ಅಂಚೆ ವಿತರಕ ಪ್ರಶಸ್ತಿ

ಮೂಡಿಗೆರೆ, ಅ.18: ಹುಯಿಗೆರೆ ಅಂಚೆ ಕಚೇರಿಯಲ್ಲಿ ಅಂಚೆ ವಿತರಕನಾಗಿ ಕಳೆದ 15 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕುಂದೂರಿನ ಕೆ. ಶೇಖರ್ ಅವರು ದಕ್ಷಿಣ ಕರ್ನಾಟಕ ವಲಯದ ಅತ್ಯುತ್ತಮ ಗ್ರಾಮೀಣ ಅಂಚೆ ವಿತರಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅ.14ರಂದು ಬೆಂಗಳೂರಿನ ಕ್ಯಾಪಿಟಲ್ ಹೊಟೇಲ್‌ನಲ್ಲಿ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಇವರು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಉಷಾ ಚಂದ್ರಶೇಖರ್ ವಹಿಸಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ವಲಯದ ಪೋಸ್ಟ್‌ಮಾಸ್ಟರ್ ಜನರಲ್ ರಾಜೇಂದ್ರನ್, ಉತ್ತರ ಕರ್ನಾಟಕ ವಲಯದ ಬಿ.ಪಿ. ಸಾರಂಗಿ ಮತ್ತಿತರರು ಉಪಸ್ಥಿತರಿದ್ದರು.
Next Story





