ಕುಸ್ತಿಪಟು ಗೀತಾ ಹರ್ಯಾಣದ ಡಿಎಸ್ಪಿ ಆಗಿ ನೇಮಕ

ಚಂಡೀಗಢ, ಅ.18: ಹರ್ಯಾಣ ಸರಕಾರ ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ಗೀತಾ ಫೋಗಟ್‌ರನ್ನು ರಾಜ್ಯ ಪೊಲೀಸ್ ಡಿಎಸ್ಪಿ ಆಗಿ ನೇಮಕ ಮಾಡಿದೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೃಹ ಇಲಾಖೆಯ ಪ್ರಸ್ತಾವಕ್ಕೆ ಸಮ್ಮತಿ ನೀಡಲಾಗಿದೆ.
ಫೋಗತ್ ಪದವೀಧರೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್. 2010ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಪರ್ವತಾರೋಹಿ ರಾಮ್ ಲಾಲ್‌ರನ್ನು ಕ್ರೀಡಾ ಕೋಟಾಕ್ಕೆ ವಿರುದ್ಧವಾಗಿ ಹರ್ಯಾಣ ಪೊಲೀಸ್ ವಿಭಾಗಕ್ಕೆ ಆಯ್ಕೆ ಮಾಡುವ ಗೃಹ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ಸಂಪುಟ ಸಭೆ ಹಸಿರುನಿಶಾನೆ ತೋರಿತು.
Next Story





