ಹಳ್ಳಿಯ ಟೆನಿಸ್ ಅಂಗಣದಲ್ಲಿ ಹೊರಹೊಮ್ಮಿದ ಟೆನಿಸ್ ಪ್ರತಿಭೆ ಅಜಯ್

ಹೊಸದಿಲ್ಲಿ, ಅ.18: ಇತ್ತೀಚೆಗೆ ನೂತನ ನ್ಯಾಶನಲ್ ಟೆನಿಸ್ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಅಜಯ್ ಮಲ್ಲಿಕ್ ಹರ್ಯಾಣದ ಗೊಹಾನದ ಹಳ್ಳಿಯಲ್ಲಿ ತನ್ನ ತಂದೆಯ ಕೃಷಿ ಭೂಮಿಯಲ್ಲಿ ಟೆನಿಸ್ ಅಕ್ಷರ ಕಲಿತ ಅಪ್ಪಟ ಗ್ರಾಮೀಣ ಪ್ರತಿಭೆ.
ಇತ್ತೀಚೆಗೆ ಡಿಎಲ್‌ಟಿಎ ಕಾಂಪ್ಲೆಕ್ಸ್‌ನಲ್ಲಿ ಕೊನೆಗೊಂಡ ನ್ಯಾಶನಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 13ರ ಹರೆಯದ ಅಜಯ್ ತನ್ನ ಅದಮ್ಯ ಶಕ್ತಿ ಹಾಗೂ ಸಾಧಾರಣ ಡಯೆಟ್‌ನ ಮೂಲಕ 14 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ತಂದೆ ಗದ್ದೆಯಲ್ಲಿ ನಿರ್ಮಿಸಿಕೊಟ್ಟ ಟೆನಿಸ್ ಕೋರ್ಟ್‌ನಲ್ಲಿ ಪಳಗಿದ ಪ್ರತಿಭೆ ಅಜಯ್.
ಅಜಯ್ ತಂದೆ ಅಜ್ಮೇರ್ ಮಲ್ಲಿಕ್ ಭಾರತೀಯ ಸೇನೆಯ ನಿವೃತ್ತ ಸುಬೇದಾರ್. ಪಂದ್ಯದ ವಿರಾಮದ ವೇಳೆ ತನ್ನ ಪುತ್ರನಿಗೆ ನೀಡಬೇಕಾಗಿರುವ ಬಾಳೆಹಣ್ಣು ಹಾಗೂ ಶಕ್ತಿ ಪೇಯವನ್ನು ಖರೀದಿಸಲು ಮಲ್ಲಿಕ್ ಬಳಿ ಹಣವಿಲ್ಲ. ಯಾವುದೇ ಹಣ್ಣು-ಹಂಪಲು ತಿನ್ನದೇ ನೀರನ್ನು ಕುಡಿದು ಅಭ್ಯಾಸ ನಡೆಸುವ ಅಜಯ್ ತೋಳಿನಲ್ಲಿ ಸಾಕಷ್ಟು ಶಕ್ತಿಯಿದೆ.
ಅಜಯ್ 10ರ ಹರೆಯದಲ್ಲಿ ಟೆನಿಸ್ ಆಡಲು ಆರಂಭಿಸಿದ್ದ. ಮೂರೇ ವರ್ಷದಲ್ಲಿ ತನ್ನ ವಯೋಮಿತಿ ವಿಭಾಗದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಜಯಿಸಿದ್ದಾನೆ. ಅಜಯ್‌ಗೆ ಆತನ ಸೋದರ ಸಂಬಂಧಿ ಸೋಮ್‌ಬೀರ್ ಮಲ್ಲಿಕ್ ಕೋಚ್ ಆಗಿದ್ದಾರೆ. ಅಜಯ್ ಸ್ವತಃ ಟಿವಿ ನೋಡಿಯೆ ಪಂದ್ಯವನ್ನು ಕಲಿತ್ತಿದ್ದಾನೆ.
ಅಜ್ಮೇರ್‌ನಿಂದ ನಡೆಸಲ್ಪಡುತ್ತಿರುವ ಅಕಾಡಮಿ ನೇತಾಜಿ ಸುಭಾಶ್ಚಂದ್ರ ಬೋಸ್ ಸಂಸ್ಥಾನದಲ್ಲಿ ಹಣ ಹಾಗೂ ಮೂಲಭೂತ ವ್ಯವಸ್ಥೆಯ ಕೊರತೆಯಿದ್ದರೂ ಅಲ್ಲಿ ಕಲಿಯುವ ಮಕ್ಕಳಿಗೆ ಸಾಕಷ್ಟು ಅಭ್ಯಾಸ ನಡೆಸಲು ಅವಕಾಶ ನೀಡಲಾಗುತ್ತದೆ.
ಎಲೆಟ್ರಿಸಿಟಿ ಕಂಬಗಳ ಸಹಾಯದಿಂದ ಕಟ್ಟಲಾಗಿರುವ ಟೆನಿಸ್ ನೆಟ್ ಮಳೆ ಹಾಗೂ ಗಾಳಿಗೆ ಉರುಳಿ ಬೀಳುತ್ತದೆ. ಟೆನಿಸ್ ಕೋರ್ಟ್‌ನಲ್ಲಲಿ ಗೆರೆ ಎಳೆಯಲು ಲಿಮ್ ಪೌಡರ್ ಬಳಸಲಾಗಿಲ್ಲ. ಹಣ ಉಳಿತಾಯ, ದೀರ್ಘಬಾಳಿಕೆಯ ದೃಷ್ಟಿಯಿಂದ ನೈಲನ್ ಹಗ್ಗವನ್ನು ಕಟ್ಟಲಾಗಿದೆ.
ಅಜ್ಮೇರ್ ತನ್ನ ಮಗನಿಗೆ ಟೆನಿಸ್ ಕೋರ್ಟ್ ನಿರ್ಮಿಸಿಕೊಡಲು ನಿವೃತ್ತಿಯ ಬಳಿಕ ಲಭಿಸಿರುವ 13 ಲಕ್ಷ ರೂ.ಗಳಲ್ಲಿ 3 ಲಕ್ಷ ರೂ. ಈಗಾಗಲೇ ಖರ್ಚು ಮಾಡಿದ್ದಾರೆ. ರೋಜರ್ ಫೆಡರರ್ ಹಾಗೂ ರಾಮ್‌ಕುಮಾರ್ ರಾಮನಾಥನ್ ತನ್ನ ಆದರ್ಶ ವ್ಯಕ್ತಿಗಳು ಎಂದು ಹೇಳುವ ಅಜಯ್, ಸ್ವತಃ ರಾಷ್ಟ್ರ ಮಟ್ಟದ ಕುಸ್ತಿಪಟು ಆಗಿದ್ದಾರೆ. ಡಿಎಲ್‌ಟಿಎ ಕೋಚ್ ಅರುಣ್ ಕುಮಾರ್ ಅಜಯ್ ಟೆನಿಸ್ ಆಟಗಾರನಾಗಲು ಮುಖ್ಯ ಕಾರಣರಾಗಿದ್ದಾರೆ.
ಅರುಣ್ ಅವರು ಅಜಯ್‌ರ ಕೋಚ್ ಸೋಮ್‌ಬೀರ್‌ಗೆ ಸೂಕ್ತ ಸಲಹೆ ನೀಡುತ್ತಾರೆ. ಮೂರು ವರ್ಷಗಳ ಹಿಂದೆ 50 ಟೆನಿಸ್ ಚೆಂಡುಗಳನ್ನು ನೀಡಿದ್ದಾರೆ.
ಹೆಡ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಜಯ್‌ಗೆ ಅರುಣ್ ನೆರವಾಗಿದ್ದಾರೆ. ಹೆಡ್ ಕಂಪೆನಿ ಪ್ರತಿವರ್ಷ ನಾಲ್ಕು ರಾಕೆಟ್‌ನ್ನು ಅಜಯ್‌ಗೆ ನೀಡಲು ಒಪ್ಪಿಕೊಂಡಿದೆ. ಅಜಯ್ ಬಳಿ ಎರಡು ಜೋಡಿ ಶೂಗಳಿವೆ. ಆದರೆ, ಅವುಗಳು ಸೂಕ್ತ ಟೆನಿಸ್ ಶೂಗಳಲ್ಲ. ಒಂದು ಶೂವನ್ನು ಪ್ರತಿದಿನ ಬಳಕೆಯಾದರೆ, ಮತ್ತೊಂದು ಟೂರ್ನಿಯ ವೇಳೆ ಬಳಸುತ್ತಾರೆ.







