ಐಒಸಿ ಅಥ್ಲೀಟ್ಸ್ ಆಯೋಗದ ಸದಸ್ಯೆಯಾಗಿ ಸೈನಾ ಆಯ್ಕೆ

ಹೈದರಾಬಾದ್, ಅ.18: ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ(ಐಒಸಿ) ಅಥ್ಲೀಟ್ಸ್ ಆಯೋಗದ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಇದು ಭಾರತದ ಕ್ರೀಡಾಪಟುಗಳಿಗೆ ನೀಡಲ್ಪಟ್ಟ ಅತ್ಯಂತ ಅಪರೂಪದ ಗೌರವವಾಗಿದೆ.
ಸೋಮವಾರ ರಾತ್ರಿ ಐಒಸಿ ಅಧ್ಯಕ್ಷ ಥಾಮಸ್ ಬಾಕ್‌ರಿಂದ ನೇಮಕಾತಿಯ ಪತ್ರವನ್ನು ಸೈನಾ ಸ್ವೀಕರಿಸಿದ್ದಾರೆ.
ರಿಯೋ ಒಲಿಂಪಿಕ್ ಗೇಮ್ಸ್‌ನ ವೇಳೆ ನಡೆದ ಐಒಸಿ ಅಥ್ಲೀಟ್ಸ್ ಕಮಿಶನ್‌ನ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿತನವನ್ನು ಗಮನಿಸಿ ಅಥ್ಲೆಟ್ಸ್ ಆಯೋಗದ ಸದಸ್ಯೆಯಾಗಿ ನೇಮಕ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ ಎಂದು ಐಒಸಿ ಬರೆದ ಪತ್ರದಲ್ಲಿ ತಿಳಿಸಿದೆ.
ಏಂಜೆಲಾ ರುಗೆರೊ ಅಧ್ಯಕ್ಷತೆಯ ಅಥ್ಲೀಟ್‌ಗಳ ಆಯೋಗದಲ್ಲಿ 9 ಮಂದಿ ಉಪಾಧ್ಯಕ್ಷರು ಹಾಗೂ ಇತರ 10 ಸದಸ್ಯರುಗಳು ಇರುತ್ತಾರೆ. ನವೆಂಬರ್ 6 ರಂದು ಕಮಿಶನ್‌ನ ಮುಂದಿನ ಸಭೆ ನಿಗದಿಯಾಗಿದೆ.
ಮಂಡಿನೋವಿನಿಂದ ಚೇತರಿಸಿಕೊಂಡು ಬ್ಯಾಡ್ಮಿಂಟನ್ ಕಣಕ್ಕೆ ಮರಳಲು ಸಜ್ಜಾಗುತ್ತಿರುವ ವೇಳೆಗೆ ಸೈನಾ ಪ್ರತಿಷ್ಠಿತ ಸಮಿತಿಯ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
Next Story





