ಖಾಸಗಿ ಆಸ್ಪತ್ರೆಗಳು 500 ರೂ.ಗಿಂತ ಹೆಚ್ಚುಶುಲ್ಕಪಡೆಯದಂತೆ ಸೂಚನೆ
10 ತಿಂಗಳಿಗೆ 5,515 ಶಂಕಿತ ಡೆಂಗ್ ಪ್ರಕರಣ
ಬೆಂಗಳೂರು, ಅ.18: ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ ರೋಗಿಗಳಿಂದ ವೈದ್ಯಕೀಯ ವೆಚ್ಚವನ್ನು 500 ರೂ. ಗಳಿಗಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಮಲೇರಿಯಾ ಮತ್ತು ಡೆಂಗ್ ವೈದ್ಯಾಕಾರಿ ಡಾ.ಸುನಂದಾ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ ಕಾಯಿಲೆಗಳ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚಿನ ಹಣವನ್ನು ಪಡೆಯಬಾರದು ಹಾಗೂ ಡೆಂಗ್ ಕಾಯಿಲೆ ಎಂದು ಅನುಮಾನ ಬಂದರೂ ಸಹ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ರವಾನೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು. ನಗರದಲ್ಲಿ ಕಳೆದ ಜನವರಿಯಿಂದ ಅ.14 ರವರೆಗೆ 5515 ಶಂಕಿತ ಡೆಂಗ್ ಪ್ರಕರಣಗಳಲ್ಲಿ 812ಸೀರಂ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 156 ಖಚಿತ ಡೆಂಗ್ ಪ್ರಕರಣಗಳು ವರದಿಯಾಗಿವೆ. ಇದುವರೆಗೂ 2 ಶಂಕಿತ ಡೆಂಗ್ ಮರಣ ಪ್ರಕರಣಗಳನ್ನು ಆಡಿಟ್ ಮಾಡಿ, ರಾಜ್ಯ ಮಟ್ಟಕ್ಕೆ ಕಳಿಸಲಾಗಿದೆ.ೊತೆಗೆ 912 ಶಂಕಿತ ಚಿಕುನ್‌ಗುನ್ಯ ಪ್ರಕರಣಗಳಲ್ಲಿ 82 ಖಚಿತ ಪ್ರಕರಣಗಳು ವರದಿಯಾಗಿವೆ. 10 ಖಚಿತ ಮಲೇರಿಯಾ ಪ್ರಕರಣ ಗಳಿಗೆ(1ಪಿಎ್, 9 ಪಿವಿ) ಸಂಪೂರ್ಣ ತೀವ್ರ ಚಿಕಿತ್ಸೆಯನ್ನು ನೀಡಲಾಗಿದೆ. ಹಾಗೂ ಇದೇ ವೇಳೆಯಲ್ಲಿ 3 ಖಚಿತ ಎಚ್1ಎನ್1 ಪ್ರಕರಣಗಳು ವರದಿಯಾಗಿವೆ ಹಾಗೂ 1577 ವಾಂತಿ ಭೇದಿ ಪ್ರಕರಣಗಳು ವರದಿ ಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಕಾರಿ ಡಾ.ರಮೇಶ್‌ಬಾಬು ಮಾಹಿತಿ ನೀಡಿದರು.ಸ್ ಲಾರ್ವಾ ಉತ್ಪತ್ತಿ ತಾಣ ನಾಶ ಮಾಡುವುದರಿಂದ ಮಾತ್ರ ಡೆಂಗ್ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಮನೆ, ರಸ್ತೆಗಳಲ್ಲಿ, ಖಾಲಿ ಸ್ಥಳದಲ್ಲಿ ಒಡೆದ ಚಿಪ್ಪುಗಳು, ಟೈರ್‌ಗಳು, ಸಿಮೆಂಟ್ ತೊಟ್ಟಿಗಳು, ಬಿಸಾಡಿದ ಪೇಪರ್‌ಗಳಲ್ಲಿ ಸಂಗ್ರಹವಾಗುವ ಸ್ವಚ್ಛ ನೀರಿನಲ್ಲಿಯೇ ಈ ಸೊಳ್ಳೆ ಉತ್ಪತ್ತಿಯಾಗುತ್ತದೆ. ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರತಿನಿತ್ಯ ಸ್ವಚ್ಛ ನೀರನ್ನು ಸಂಗ್ರಹಿಸುವ ಸ್ಥಳಗಳನ್ನು ಸ್ವಚ್ಛ ಮಾಡಬೇಕು. ನೀರನ್ನು ಶೇಖರಿಸಿಡುವ ವಸ್ತುಗಳನ್ನು ಎರಡು ದಿನಕ್ಕೊಮ್ಮೆಯಾದರೂ ಸ್ವಚ್ಛ ಮಾಡಬೇಕು. ಆ ಮೂಲಕ ಸೊಳ್ಳೆ ಉತ್ಪಾದನೆಯಾಗುವುದನ್ನು ತಡೆಗಟ್ಟಬೇಕಿದೆ ಎಂದು ಅವರು ಮನವಿ ಮಾಡಿದರು.





