ರೈತರಿಂದ ಬಲವಂತದ ಸಾಲ ವಸೂಲಿ ಬೇಡ: ಮಹದೇವಪ್ರಸಾದ್
ಬೆಂಗಳೂರು, ಅ.18: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬಾರದು ಎಂದು ಸಕ್ಕರೆ ಹಾಗೂ ಸಹಕಾರ ಸಚಿವ ಮಹದೇವಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕ್‌ಗಳು ಬಲವಂತದ ಸಾಲ ವಸೂಲಿಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾರ್ಚ್‌ವರೆಗೂ ಬಡ್ಡಿ ಮನ್ನಾ ಯೋಜನೆ: ಸರಕಾರ ಬಡ್ಡಿ ಮನ್ನಾ ಯೋಜನೆಯ ಅನುಸಾರ ಸೆಪ್ಟಂಬರ್-2016ರ ಅಂತ್ಯದ ವರೆಗೂ ಸಾಲ ಮರುಪಾವತಿಸಿದ ರೈತರ ಬಡ್ಡಿಯನ್ನು ಮನ್ನಾ ಮಾಡುವು
ದಾಗಿ ಘೋಷಿಸಲಾಗಿತ್ತು. ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮಾರ್ಚ್-2017ರವರೆಗೂ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.ಾಗಲೇ 95,235ರೈತರು 283 ಕೋಟಿ ರೂ.ಸಾಲವನ್ನು ಮರುಪಾವತಿ ಮಾಡಿದ್ದಾರೆ. ಇನ್ನು 297 ಕೋಟಿ ರೂ.ಸಾಲ ಬಾಕಿಯಿದ್ದು, ಮಾರ್ಚ್ ಅಂತ್ಯದವರೆಗೂ ಬಡ್ಡಿ ರಹಿತ ಸಾಲ ಮನ್ನಾ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು.ಳೆದ ವರ್ಷ ಸರಕಾರ 10,235 ಕೋಟಿ ರೂ.ವನ್ನು ರೈತರಿಗೆ ಸಾಲ ನೀಡಿತ್ತು. ಈ ವರ್ಷ 11,600 ಕೋಟಿ ರೂ.ಸಾಲ ಕೊಡುವ ಗುರಿಯನ್ನು ಹೊಂದಲಾಗಿದೆ. ಇಲ್ಲಿಯವರೆಗೂ 5400 ಕೋಟಿ ರೂ.ಸಾಲವನ್ನು ನೀಡಲಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಉಳಿದ ಹಣವನ್ನು ನೀಡಲಾಗುವುದು ಎಂದು ಅವರು ಹೇಳಿದರು.ೋದಾಮುಗಳ ಸ್ಥಾಪನೆ: ರಾಜ್ಯದ ವಿವಿಧೆಡೆ 736 ಕೋಟಿ ರೂ.ವೆಚ್ಚದಲ್ಲಿ 46 ಗೋದಾಮುಗಳ ಸ್ಥಾಪನೆಗೆ ಕ್ರಮ ೈಗೊಳ್ಳಲಾಗಿದ್ದು, ಇದಕ್ಕೆ ಸಂಬಂಸಿದಂತೆ ಪ್ರತೀ ಜಿಲ್ಲೆಯ ಸೂಕ್ತ ಪ್ರದೇಶವನ್ನು 30ವರ್ಷ ಭೋಗ್ಯಕ್ಕೆ ಪಡೆಯಲಾಗಿದೆ. ಈ ಗೋದಾಮುಗಳು ಒಟ್ಟು 25.05ಲಕ್ಷ ಮೆಟ್ರಿಕ್ ಟನ್ ಆಹಾರ ಸಾಮಗ್ರಿಗಳನ್ನು ಶೇಖರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.
ಪ್ರರ್ತೀ ಗೋದಾಮಿನ ಶೇ.20ರಷ್ಟು ಜಾಗವನ್ನು ಶಿಥಲೀಕರಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಿರ್ವಹಿಸಲು ಚಿಂತಿಸಲಾಗಿದೆ. ಈ ಗೋದಾಮು ವ್ಯವಸ್ಥೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವ ಮಹದೇವಪ್ರಸಾದ್ ತಿಳಿಸಿದರು.
ಸರಕಾರ ಕಬ್ಬು ಬೆಳೆದ ರೈತರಿಗೆ 138.98ಲಕ್ಷ ರೂ.ಸಾಲ ಮರುಪಾವತಿ
ಸಬೇಕಾಗಿದೆ. ಒಟ್ಟಾರೆ ಈ ಸಾಲದ ಪ್ರಮಾಣ ಶೇ.1ಕ್ಕಿಂತಲೂ ಕಡಿಮೆಯಿದೆ. ಈ ವರ್ಷ ಕಬ್ಬು ಬೆಳೆದ ರೈತರ ಸಾಲವನ್ನು ಉಳಿಸಿ ಕೊಳ್ಳುವಂತಹ ಪ್ರಮೇಯ ಬರುವುದಿಲ್ಲ. ಈಗಾಗಲೇ ಮೈಸೂರು ಪ್ರಾಂತದ ಕೆಲವು ಭಾಗಗಳಲ್ಲಿ ಕಂಪೆನಿಗಳೇ ನೇರವಾಗಿ ರೈತರಿಗೆ ಹಣ ಸಂದಾಯ ಮಾಡಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕ್‌ಗಳು ಬಲವಂತದ ಸಾಲ ವಸೂಲಿಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಮಹದೇವಪ್ರಸಾದ್, ಸಹಕಾರಿ ಸಚಿವ