ಪಾಕ್ ಯುದ್ಧ ವಿಮಾನ ಪತನ
ಪೈಲಟ್ ಸಾವು
ಕರಾಚಿ, ಅ. 18: ತರಬೇತಿ ಹಾರಾಟದಲ್ಲಿದ್ದ ಪಾಕಿಸ್ತಾನ ವಾಯು ಪಡೆಯ ಮಿರಾಜ್ ಯುದ್ಧ ವಿಮಾನವೊಂದು ಇಂದು ಕರಾಚಿಯಲ್ಲಿ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ.
ಫ್ರಾನ್ಸ್ ನಿರ್ಮಿತ ಯುದ್ಧ ವಿಮಾನ ಮಸ್ರೂರ್ ನೆಲೆಯಿಂದ ಹಾರಾಟ ಆರಂಭಿಸಿತು. ಬಳಿಕ ಕರಾಚಿಯಿಂದ 16 ಕಿ.ಮೀ. ದೂರದ ಮುಶರ್ರಫ್ ಕಾಲನಿಯಲ್ಲಿ ಪತನಗೊಂಡಿತು ಎಂದು ಪಾಕಿಸ್ತಾನಿ ವಾಯು ಪಡೆಯ ವಕ್ತಾರರೊಬ್ಬರು ತಿಳಿಸಿದರು. ವಿಮಾನವನ್ನು ಜನವಸತಿ ಪ್ರದೇಶದಿಂದ ದೂರ ಕೊಂಡೊಯ್ಯುವ ಪ್ರಯತ್ನದಲ್ಲಿ ಪೈಲಟ್ ಮೃತಪಟ್ಟರು ಎಂದರು.
Next Story