ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ಮಗು, ಪ್ರಿಯಕರನೊಂದಿಗೆ ಪತ್ತೆ
ಮಂಗಳೂರು,ಅ.19: ಯುವತಿ ನಾಪತ್ತೆಯಾದ ದೂರಿನ ಹಿನ್ನೆಲೆಯಲ್ಲಿ ತನಿಖೆ ಮಾಡಿದ ಪೊಲೀಸರಿಗೆ ಯುವತಿ ಮಗು ಮತ್ತು ಪ್ರಿಯಕರನೊಂದಿಗೆ ಪತ್ತೆಯಾದ ಘಟನೆ ಇಂದು ನಡೆದಿದೆ.
ನಗರದ ಬೊಕ್ಕಪಟ್ಣದ ರಾಜಾರಾಮ ಶೆಟ್ಟಿ ಎಂಬವರು ಬೆಂಗಳೂರಿನಲ್ಲಿದ್ದ ತಮ್ಮ ಮಗಳು ಐಶ್ವರ್ಯ (21) ನಾಪತ್ತೆಯಾಗಿದ್ದಳೆಂದು ಅ.18ರಂದು ನಗರದ ಬರ್ಕೆ ಠಾಣೆಗೆ ದೂರು ನೀಡಿದ್ದರು. ಇದರಂತೆ ತನಿಖೆ ಆರಂಭಿಸಿದ ಪೊಲೀಸರು ಆಕೆ ಬೆಂಗಳೂರಿನಲ್ಲೇ ಇರುವ ಬಗ್ಗೆ ಮಾಹಿತಿ ತಿಳಿದು ಇಂದು ಬೆಳಿಗ್ಗೆ ಬೆಂಗಳೂರು ತೆರಳಿದ್ದು, ಆಕೆಯನ್ನು ಪತ್ತೆ ಹಚ್ಚಿದ್ದರು.
ಆದರೆ ಈ ಸಂದರ್ಭದಲ್ಲಿ ಯುವತಿ ನಾಲ್ಕು ದಿನಗಳ ಹಿಂದೆಯಷ್ಟೆ ಮಗುವಿಗೆ ಜನ್ಮ ನೀಡಿದ್ದು ಪೊಲೀಸರಿಗೆ ತಿಳಿದುಬಂದಿದೆ. ಯುವತಿಯ ಜೊತೆಗೆ ಆಕೆಯ ಪ್ರಿಯಕರ ಕೂಡಾ ಇದ್ದ ಎಂದು ತಿಳಿದುಬಂದಿದೆ. ಇವರ ವಿಚಾರಣೆ ನಡೆಸಿದಾಗ ಇವರು ತಂದೆ ತಾಯಿಗೆ ತಿಳಿಸದೆ ಮದುವೆಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಯುವತಿ ವಯಸ್ಕಳಾಗಿದ್ದು ಈಕೆಯನ್ನು ವಿಚಾರಿಸಿದಾಗ ಆಕೆ ಸ್ವಯಂಪ್ರೇರಿತಳಾಗಿ ಮದುವೆಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ.
Next Story





