ಕಾರವಾರ: ಪಿಎಸ್ಸೈಗೆ ಹಲ್ಲೆ
ದೂರು ದಾಖಲು
ಕಾರವಾರ, ಅ.19: ರಾತ್ರಿ ವೇಳೆ ಕಾರನ್ನು ವೇಗದ ಚಾಲನೆ ಹಾಗೂ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದವರನ್ನು ಪೊಲೀಸರು ತಡೆದು ಲೈಸನ್ಸ್ ನೀಡುವಂತೆ ಕೇಳಿದಕ್ಕಾಗಿ ತಂಡ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಸೋನಾರವಾಡಾ ನಿವಾಸಿಗಳಾದ ಬಾಲಕೃಷ್ಣ ಬೈಕೇರಿಕರ್, ಸಂದೇಶ ಬೈಕೇರಿಕರ್, ಮಂಜುನಾಥ ನಿಲ್ಲೂರ್, ಸಂತೋಷ ಬೈಕೇರಿಕರ್ ಬಂಧಿತರು. ಇವರ ವಿರುದ್ಧ ದೂರು ದಾಖಲಾಗಿದೆ. ಸೋಮವಾರ ತಡರಾತ್ರಿ ಈ ನಾಲ್ವರು ಅಡ್ಡಾದಿಡ್ಡಿಯಾಗಿ ಅಜಾಗರೂಕತೆಯಿಂದ ಕಾರನ್ನು ವೇಗವಾಗಿ ಚಾಲನೆ ಮಾಡುತ್ತಿದ್ದರು. ಅದೇ ವೇಳೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಡೆದು ವಾಹನದ ಪರವಾನಿಗೆ ಹಾಗೂ ಲೈಸನ್ ನೀಡುವಂತೆ ಕೇಳಿದಾಗ ಪಿಎಸ್ಸೈ ಕುಸುಮಾಧರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಮುಂದುವರಿದಿದ್ದು ಹಲ್ಲೆ ಮಾಡಿದವರನ್ನು ಅ.28ರವರೆಗೆ ನ್ಯಾಯಾಂಗ ಬಂಧನಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.
Next Story





