ಧರ್ಮವನ್ನು ಪ್ರೀತಿಸಿ ಸನ್ಮಾರ್ಗದಲ್ಲಿ ನಡೆಯುವುದೇ ಉತ್ತಮ ಜೀವನ: ಗುಣನಾಥ ಸ್ವಾಮೀಜಿ
ಧಾರ್ಮಿಕ ಸಭಾ ಕಾರ್ಯಕ್ರಮ

ಮೂಡಿಗೆರೆ, ಅ.19: ಜಗತ್ತಿನಲ್ಲಿ ನೂರಾರು ಜಾತಿ, ಮತಗಳಿವೆ. ಧರ್ಮದ ಆಚರಣೆ ಭಿನ್ನ ವಾದರೂ ಧರ್ಮದ ಸಾರ ಒಂದೆಯಾಗಿದೆ. ಸರ್ವರೂ ಧರ್ಮವನ್ನು ಪ್ರೀತಿಸಿ ಸನ್ಮಾರ್ಗದಲ್ಲಿ ನಡೆಯುವುದೇ ಉತ್ತಮ ಜೀವನವಾಗಿದೆ ಎಂದು ಆದಿ ಚುಂಚನಗಿರಿ, ಶಿಕ್ಷಣ ಟ್ರಸ್ಟ್, ಶೃಂಗೇರಿಯ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಅವರು ಬಣಕಲ್ ಪ್ರೌಢಶಾಲಾ ಸಭಾಂಗಣದಲ್ಲಿ ಮೂಡಿಗೆರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಚಿಕ್ಕಮಗಳೂರು ಜನಜಾಗೃತಿ ವೇದಿಕೆ, ಸ್ವಸಹಾಯ ಸಂಘ, ಜ್ಞಾನವಿಕಾಸ ಕೇಂದ್ರಗಳ ಒಕ್ಕೂಟ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮದಲ್ಲಿ ಹೆಚ್ಚು ಮೂಢನಂಬಿಕೆಗಳ ವಿಚಾರದಲ್ಲಿ ಅವೈಜ್ಞಾನಿಕ ಹೀನವಾದ ವಿಚಾರದಲ್ಲಿ ನಂಬಿಕೆ ಇಡಲಾಗುತ್ತಿದೆ. ಅವೈಜ್ಞಾನಿಕ ಆಚರಣೆ ಬದಿಗಿಟ್ಟು ಉಳಿದ ಉತ್ತಮ ಆಚರಣೆಗಳನ್ನು ಅನುಸರಿಸಿದ್ದಲ್ಲಿ ಜನರು ಜೀವನದಲ್ಲಿ ಉತ್ತಮ ದಾರಿಯಲ್ಲಿ ಬೆಳಕಿನೆಡೆಗೆ ಸಾಗಲು ಸಹಾಯಕ ವಾಗುತ್ತದೆ. ಸಾಕ್ಷಾತ್ಕಾರಕ್ಕೆ ನಮ್ಮ ಪ್ರಾರ್ಥನೆ ಮೆಟ್ಟಿಲಾಗಬೇಕು. ಪೋಷಕರು ದುಶ್ಚಟಗಳನ್ನು ದೂರವಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸಬೇಕು. ಸನ್ಮಾರ್ಗದ ದಾರಿಯಲ್ಲಿ ನಡೆದು ಮಕ್ಕಳಿಗೆ ಮಾದರಿ ಪೋಷಕರಾಗಬೇಕೆಂದರು.
ಚಕ್ಕಮಕ್ಕಿ ಮಸೀದಿ ಧರ್ಮ ಗುರು ಸಾದಿಕ್ ಅಝ್‌ಹರಿ ಮಾತನಾಡಿ, ಮತ ಸೌಹಾರ್ದ ಕ್ಕಿಂತ ಮಾನವ ಸೌಹಾರ್ದತೆಯನ್ನು ನಾವು ರೂಢಿಸಿ ಕೊಂಡು ಬದುಕಬೇಕಿದೆ. ಐಕ್ಯತೆಯಿಂದ ಸರ್ವರೂ ಬಾಳಿದರೆ ಜೀವನ ನಂದನದನವಾಗುತ್ತದೆ. ಮತಭೆೇದ ಮರೆತು ಒಟ್ಟಾಗಿ ಜೀವನ ನಡೆಸುವುದುಭಾವೈಕ್ಯತೆಯ ಸಾರವಾಗಿದೆ. ಎಲ್ಲ ಧರ್ಮಗಳ ಮೂಲ ಉದ್ದೇಶ ಜಗತ್ತಿನಲ್ಲಿ ನೆಮ್ಮದಿ, ಶಾಂತಿಯಿಂದ ಬದುಕುವುದಾಗಿದೆ. ಶರೀರ ಶುದ್ಧಿಗಿಂತಲೂ ಮನಸ್ಸಿನ ಶುದ್ಧಿಯಾಗುವುದು ಅಗತ್ಯವಿದೆ ಎಂದರು.
ಸಭೆೆಯಲ್ಲಿ ಬಣಕಲ್ ಪೌಢಶಾಲಾ ಸಮಿತಿಯ ಅಧ್ಯಕ್ಷ ಜಯರಾಮಗೌಡ ಅಧ್ಯಕ್ಷತೆ ವಹಿಸಿದ್ದರು. ಬಣಕಲ್ ಬಾಲಿಕ ಮರಿಯ ಚರ್ಚ್‌ನ ಸಹಾಯಕ ಗುರು ರೆ.ಫಾ.ಆಲ್ವಿನ್ ಡಿಸಿಲ್ವಾ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಣಕಲ್‌ನ ಜೆಸಿಐ ವಿಸ್ಮಯದ ಸಂಸ್ಥಾಪಕ ಸುರೇಶ್‌ಶೆಟ್ಟಿ, ಬಣಕಲ್ ಗ್ರಾಂಪಂ ಅಧ್ಯಕ್ಷೆ ಸುಮತಿ, ಕೆ.ಎಲ್.ರವಿ, ಸಂದೀಪ್ ದೇವನಗೂಲ್, ಎಸ್.ಆರ್.ಗಣೇಶ್, ಮುತ್ತೇಗೌಡ ತ್ರಿಪುರ, ಬೆಟ್ಟಗೆರೆ ಲೋಕೇಶ್, ಬಿ.ಹೊಸಹಳ್ಳಿ ಶ್ರೀಧರ್, ಬಾಳೂರು ಗಣೇಶ್, ಶರ್ಫುನ್ನೀಸಾ, ಬಿದರಹಳ್ಳಿ ಜಯಲಕ್ಷ್ಮೀ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕಿ ಹರಿಣಾಕ್ಷಿ, ಕಾರ್ಯದರ್ಶಿ ಸುರೇಶ್ ಗೌಡ, ಮತ್ತು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.







