ಲಕ್ಷಾಂತರ ರೂ. ಮೆಕ್ಕೆಜೋಳದ ಫಸಲು ಭಸ್ಮ
ತೋಟಕ್ಕೆ ಆಕಸ್ಮಿಕ ಬೆಂಕಿ

ಶಿಕಾರಿಪುರ, ಅ.19: ಆಕಸ್ಮಿಕವಾಗಿ ಹತ್ತಿದ ಬೆಂಕಿಯಿಂದ ಲಕ್ಷಾಂತರ ರೂ. ಬೆಲೆಬಾಳುವ ಮೆಕ್ಕೆಜೋಳದ ಫಸಲು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಬೇಗೂರು ಗ್ರಾಮದ ಸಮೀಪ ಸಂಭವಿಸಿದೆ.
ಬೇಗೂರು ಸಮೀಪದ ಬೆಂಡೆಕಟ್ಟೆ ಗ್ರಾಮದ ಸಿದ್ದಪ್ಪ ಎಂಬವರ ಸ.ನಂ 124 ರಲ್ಲಿನ ಅಂದಾಜು 3 ಎಕರೆ ಮಿಗಿಲಾದ ಮೆಕ್ಕೆಜೋಳದ ಬೆಳೆ ಕಟಾವಿಗೆ ಬಂದಿದ್ದ್ದು, ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಬೆಂಕಿ ಆಕಸ್ಮಿಕದಿಂದಾಗಿ ಲಕ್ಷಾಂತರ ರೂ. ಬೆಲೆಬಾಳುವ ಸಂಪೂರ್ಣ ಫಸಲು ನಾಶವಾಗಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಹೆಚ್ಚಿನ ದುರಂತವನ್ನು ತಪ್ಪಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ದೂರು ದಾಖಲಿಸಿಕೊಂಡರು.
Next Story





