ಮಹಾದಾಯಿ ಸಭೆಗೆ ಕೈಕೊಟ್ಟ ಗೋವಾದ ಸಿಎಂ ಪರ್ಸೆಕರ್; ಮೂರು ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ರದ್ಧು

ಮುಂಬೈ, ಅ.19: ಮಹಾದಾಯಿ ಸಮಸ್ಯೆ ಪರಿಹಾರಕ್ಕೆ ಅ.21ರಂದು ಮುಂಬೈನಲ್ಲಿ ಕರೆಯಲಾಗಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಲೋಚನಾ ಸಭೆ ರದ್ದಾಗಿದೆ.
ಗೋವಾ ಮುಖ್ಯ ಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ , ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ಭಾಗವಹಿಸುವುದಾಗಿ ನಿರ್ಧಾರವಾಗಿತ್ತು. ಆದರೆ ಗೋವಾ ಮುಖ್ಯ ಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ ಸಭೆಗೆ ಆಗಮಿಸಲು ರಾಜಕೀಯ ಕಾರಣಕ್ಕಾಗಿ ಹಿಂದೇಟು ಹಾಕಿ ಇರುವ ಹಿನ್ನೆಲೆಯಲ್ಲಿ ಸಭೆ ರದ್ಧಾಗಿದೆ ಎಂದು ತಿಳಿದು ಬಂದಿದೆ.
Next Story





