.‘ಕ್ರಿಯಾಶೀಲ ಮನಸ್ಸುಗಳು ಒಗ್ಗೂಡಿದಾಗ ಅಭಿವೃದ್ಧಿ ಸಾಧ್ಯ’

ಉಪ್ಪಿನಂಗಡಿ, ಅ.19: ಕ್ರಿಯಾಶೀಲ ಯುವ ಮನಸ್ಸುಗಳು ಒಗ್ಗೂಡಿದಾಗ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಲಿ ಸಾಧ್ಯ. ಚದುರಿದ ಮನಸ್ಸು ಗಳನ್ನು ಒಗ್ಗೂಡಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪರಸ್ಪರ ಕೈಜೋಡಿಸಬೇಕಿದೆ ಎಂದು ಪುತ್ತೂರು ತಾಲೂಕು ಯುವ ಗಾಣಿಗ ಸಂಘದ ಅಧ್ಯಕ್ಷ ನಿತೀಶ್ ಗಾಣಿಗ ನೆಕ್ಕಿಲಾಡಿ ಹೇಳಿದರು.
ಉಪ್ಪಿನಂಗಡಿಯ ರಾಮನಗರದಲ್ಲಿನ ಸಂಘದ ನಿವೇಶನದಲ್ಲಿ ನಡೆದ ಯುವ ಗಾಣಿಗ ಸಂಘದ ರಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿವೃತ್ತ ಸೇನಾಧಿಕಾರಿ ಕೆ.ಸುರೇಶ್, ಗಾಣಿಗ ಸಂಘದ ಅಧ್ಯಕ್ಷ ಹರಿ ರಾಮಚಂದ್ರ, ಸಂಘದ ಪ್ರಮುಖರಾದ ಪ್ರಶಾಂತ್ ಕುಮಾರ್ ಮುರ, ಸೋಮಪ್ಪ ಸಪಲ್ಯ ನಗರ ಹಾಗೂ ಸದಾರಾಮ ಸಲಹೆ ಸೂಚನೆ ನೀಡಿದರು.
ಯುವ ಗಾಣಿಗ ಸಂಘದ ಪದ ನಿಮಿತ್ತ ಕಾರ್ಯದರ್ಶಿಯಾಗಿ ಮಾತೃ ಸಂಸ್ಥೆಯಾದ ಗಾಣಿಗ ಸಂಘದ ಕಾರ್ಯದರ್ಶಿ ಎಸ್.ಕೆ.ವಸಂತ ಕುಂಟಿನಿ, ಉಪಾಧ್ಯಕ್ಷರಾಗಿ ಅನಿತ್ ಗಾಣಿಗ, ವಿನೋದ್ ಗಾಣಿಗ, ಕಿರಣ್ ಕೆಮ್ಮಿಂಜೆ, ಹೇಮಚಂದ್ರ ಕಲ್ಲೇಗ, ರಕ್ಷಿತಾ ಸಂಪ್ಯ, ಜೊತೆ ಕಾರ್ಯದರ್ಶಿಯಾಗಿ ನವ್ಯಾ ಮರಿಕೆ, ಕೋಶಾಧಿಕಾರಿಯಾಗಿ ನ್ಯಾಯವಾದಿ ಸಂದೇಶ್ ಗಾಣಿಗ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮ, ಜಗದೀಶ್ ಕಲ್ಲೇಗ, ರಮೇಶ್ ಪುತ್ತೂರು, ಜನಾರ್ದನ್ ಮರಿಕೆ, ವೈಶಾಖ್ ಸಂಪ್ಯ, ಶಿವರಾಮ ಶಿವನಗರ, ಕೌಶಿಕ್ ನಟ್ಟಿಬೈಲ್ ಆಯ್ಕೆಯಾದರು. ಸಭೆಯಲ್ಲಿ ಮುಖಂಡರಾದ ಕೃಷ್ಣಪ್ಪ ನೆಕ್ಕರೆ, ಚಂದ್ರಶೇಖರ್, ಶಿವಾನಂದ, ರಂಜಿನಿ, ನಾರಾಯಣ ಹರಿನಗರ ಉಪಸ್ಥಿತರಿದ್ದರು





