ಮೆಲ್ಕಾರ್ ಮಹಿಳಾ ಕಾಲೇಜಿನ ‘ಲಲಿತ ಕಲಾ ಸಂಘ’ ಉದ್ಘಾಟನೆ
.
ಬಂಟ್ವಾಳ, ಅ.19: ನಮ್ಮ ಶಾರೀರಿಕ ಬೆಳವಣಿಗೆ ಹಾಗೂ ಆರೋಗ್ಯವೃದ್ಧಿಗೆ ಅನ್ನದೊಂದಿಗೆ ಇತರ ಪೌಷ್ಟಿಕ ಆಹಾರಗಳ ಆವಶ್ಯಕತೆ ಇರುವಂತೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳು ಪೂರಕ ಎಂದು ಲೇಖಕ, ನಾಟಕಕಾರ, ಉಪನ್ಯಾಸಕ ಎಂ.ಡಿ.ಮಂಚಿ ಹೇಳಿದರು. ಮೆಲ್ಕಾರ್ ಮಹಿಳಾ ಪಪೂ ಕಾಲೇಜಿನ 2016-17ನೆ ಸಾಲಿನ ‘ಲಲಿತ ಕಲಾ’ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಟಕ, ಚಿತ್ರಕಲೆ, ಗಾಯನ, ಭಾಷಣ ಇತ್ಯಾದಿ ಸಾಹಿತ್ಯಿಕ ಚಟುವಟಿಕೆಗಳು ನಮಗೆ ಮಾನಸಿಕ ತೃಪ್ತಿ, ಗೌರವ, ಜ್ಞಾನ ಸಂಪಾದನೆಯೊಂದಿಗೆ ಬಹುಮುಖ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿಯಾಗಿವೆ ಎಂದರು. ಕಾಲೇಜಿನ ಪ್ರಾಂಶುಪಾಲ ಬಿ.ಕೆ.ಅಬ್ದುಲ್ಲತೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಲಹೆಗಾರ ಉಪನ್ಯಾಸಕ ಅಬ್ದುಲ್ ಮಜೀದ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪಪ್ರಾಂಶುಪಾಲೆ ಏಂಜಲೀನ್ ಸುನಿತಾ ಪಿರೇರಾ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿನಿಯರಾದ ಅರಪೈನಾ ಸಂಘದ ವರದಿ ವಾಚಿಸಿದರು. ಸುಅದಾ ಸ್ವಾಗತಿಸಿದರು. ರಂಶೀನಾ ವಂದಿಸಿದರು. ಖತೀಜಾ ಸನೂಪ ಕಾರ್ಯಕ್ರಮ ನಿರೂಪಿಸಿದರು.





