Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಂಧ್ರ ಸಿಎಂ 18 ತಿಂಗಳ ಮೊಮ್ಮಗನ ಬಳಿ...

ಆಂಧ್ರ ಸಿಎಂ 18 ತಿಂಗಳ ಮೊಮ್ಮಗನ ಬಳಿ ಇರುವ ಸೊತ್ತು ಎಷ್ಟು ಗೊತ್ತೇ ?

ಅಜ್ಜನನ್ನೂ ಮೀರಿಸಿದ ಕಂದಮ್ಮ

ವಾರ್ತಾಭಾರತಿವಾರ್ತಾಭಾರತಿ20 Oct 2016 5:06 PM IST
share
ಆಂಧ್ರ ಸಿಎಂ 18 ತಿಂಗಳ ಮೊಮ್ಮಗನ ಬಳಿ ಇರುವ ಸೊತ್ತು ಎಷ್ಟು ಗೊತ್ತೇ  ?

ಹೈದರಾಬಾದ್,ಅ.20: ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಮೊಮ್ಮಗ ದೇವಾಂಶ್ ತನ್ನ ಅಜ್ಜನಿಗಿಂತಲೂ ಹೆಚ್ಚಿನ ಆಸ್ತಿಗಳ ಮಾಲಿಕನಾಗಿದ್ದಾನೆ !

ಈಗಷ್ಟೇ 18 ತಿಂಗಳು ತುಂಬಿರುವ ದೇವಾಂಶ್ ಬಳಿಯಿರುವ ಒಟ್ಟೂ ಆಸ್ತಿಗಳ ಮೌಲ್ಯ 11.57 ಕೋ.ರೂ.ಗಳಾಗಿದ್ದರೆ, ಹಳೆಯ ಅಂಬಾಸಿಡರ್ ಕಾರು ಸೇರಿದಂತೆ ನಾಯ್ಡು ಹೊಂದಿರುವ ಆಸ್ತಿಗಳ ಮೌಲ್ಯ ಹೇಗೆ ಲೆಕ್ಕ ಹಾಕಿದರೂ 3.73 ಕೋ.ರೂ. ದಾಟುವುದಿಲ್ಲ.
ದೇವಾಂಶ್‌ನ ತಂದೆ ಹಾಗೂ ನಾರಾ ಸಾಮ್ರಾಜ್ಯದ ಉತ್ತರಾಧಿಕಾರಿ ಲೋಕೇಶ್ ಅವರೇ ಸ್ವತಃ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಅಜ್ಜಿ ಭುವನೇಶ್ವರಿ 9.17 ಕೋ.ರೂ.ಗಳ ಆಸ್ತಿಯನ್ನು ದೇವಾಂಶ್ ಹೆಸರಿಗೆ ವರ್ಗಾಯಿಸಿದ್ದರೆ, ತಾಯಿಯ ತಂದೆ ಹಾಗೂ ಚಿತ್ರನಟ ಬಾಲಕೃಷ್ಣ ಉಡುಗೊರೆಯಾಗಿ ಆತನ ಹೆಸರಿನಲ್ಲಿ 2.4 ಕೋ.ರೂ.ಗಳ ನಿರಖು ಠೇವಣಿಯನ್ನಿರಿಸಿದ್ದಾರೆ.

ಬ್ಯಾಂಕ ಸಾಲದ ಬಡ್ಡಿಯಿಂದಾಗಿ ತನ್ನ ತಂದೆಯ ಸಂಪತ್ತು ಸ್ವಲ್ಪ ಕರಗಿದೆ ಎನ್ನುವುದು ಲೋಕೇಶ್ ಅಭಿಪ್ರಾಯ. ನಾಯ್ಡು ಜ್ಯುಬಿಲಿ ಹಿಲ್‌ನಲ್ಲಿ 3.68 ಕೋ.ರೂ.ಮೌಲ್ಯದ ಮನೆಯೊಂದನ್ನು ಹೊಂದಿದ್ದಾರೆ, ಆದರೆ ಅವರು ಬ್ಯಾಂಕ್ ಆಫ್ ಬರೋಡಾದಿಂದ 3.68 ಕೋ.ರೂ.ಗಳ ಸಾಲವನ್ನು ಪಡೆದಿದ್ದಾರೆ. ಹೀಗಾಗಿ ಅವರ ನಿವ್ವಳ ಮೌಲ್ಯ 67 ಲ.ರೂ.ಆಗಿದೆ. ಕಳೆದ ವರ್ಷ ಅವರ ನಿವ್ವಳ ಸಂಪತ್ತು 42 ಲ.ರೂ.ಆಗಿತ್ತು.

ಲೋಕೇಶ್ 14.50 ಕೋ.ರೂ.ಆಸ್ತಿ ಮತ್ತು 6.35 ಕೋ.ರೂ.ಸಾಲ ಹೊಂದಿದ್ದಾರೆ. ಹೀಗಾಗಿ ಅವರ ನಿವ್ವಳ ಸಂಪತ್ತು 8.15 ಕೋ.ರೂ.ಗಳಾಗಿವೆ. ಅವರ ಪತ್ನಿ ಬ್ರಹ್ಮಿಣಿ ಭೂಮಿ ಮತ್ತು ಚಿನ್ನಾಭರಣಗಳು ಸೇರಿದಂತೆ 5.38 ಕೋ.ರೂ.ಗಳ ಸಂಪತ್ತಿನ ಒಡತಿಯಾಗಿದ್ದಾರೆ.

ಶೇರು ಪೇಟೆಯಲ್ಲಿ ಲಿಸ್ಟೆಡ್ ಕಂಪನಿ ಹೆರಿಟೇಜ್ ಫುಡ್ಸ್ ಲಿ.ಅನ್ನು ನಿಭಾಯಿಸುತ್ತಿರುವ ನಾಯ್ಡು ಅವರ ಪತ್ನಿ ಭುವನೇಶ್ವರಿ 38.66 ಕೋ.ರೂ.ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರು 13 ಕೋ.ರೂ.ಸಾಲವನ್ನೂ ಹೊಂದಿರುವುದರಿಂದ ಅವರ ನಿವ್ವಳ ಸಂಪತ್ತು 24.84 ಕೋ.ರೂ.ಆಗಿದೆ.

ಕುತೂಹಲದ ವಿಷಯವೆಂದರೆ ನಾಯ್ಡು ತನ್ನ ಹಳೆಯ ಆಸ್ತಿಯಾಗಿರುವ 1.52 ಲ.ರೂ.ಮೌಲ್ಯದ 1993ನೇ ಮಾಡೆಲ್‌ನ ಹಳೆಯ ಅಂಬಾಸಿಡರ್ ಕಾರಿನ ಬಳಕೆಯನ್ನೇ ಮುಂದುವರಿಸಿದ್ದಾರೆ. ಭುವನೇಶ್ವರಿ 2008ರ ಮಾಡೆಲ್‌ನ,91 ಲ.ರೂ.ಮೌಲ್ಯದ ಕಾರಿನಲ್ಲಿ ತಿರುಗಾಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X