ಕಾಲೇಜು ವಿದ್ಯಾರ್ಥಿಯಿಂದ ಪ್ರಾಂಶುಪಾಲರಿಗೆ ಹಲ್ಲೆ

ಮಂಗಳೂರು, ಅ.20: ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ವಿದ್ಯಾರ್ಥಿಯಿಂದ ಹಲ್ಲೆಗೊಳಗಾದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ಎಂದು ಗುರುತಿಲಾಗಿದೆ. ಹಲ್ಲೆ ಮಾಡಿದ ವಿದ್ಯಾರ್ಥಿಯನ್ನು ಅದೇ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಮುಹಮ್ಮದ್ ಶಾಹ್‌ನವಾಝ್ ಎಂದು ಆರೋಪಿಸಲಾಗಿದೆ.
ಶಾಹ್‌ನವಾಝ್ ಕಾಲೇಜಿನಲ್ಲಿ ತರಗತಿಗೆ ನಿರಂತರ ಗೈರು ಹಾಜರಾಗುತ್ತಿದ್ದನೆಂದು ಹೇಳಲಾಗಿದ್ದು, ಈ ಬಗ್ಗೆ ಪ್ರಾಂಶುಪಾಲಕರು ಆತನಿಗೆ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ. ಇಂದು ಮಧ್ಯಾಹ್ನ ಪ್ರಾಂಶುಪಾಲರು ಊಟಕ್ಕೆ ಹೋದ ಸಂದರ್ಭದಲ್ಲಿ ಶಾಹ್‌ನವಾಝ್ ಹಠಾತ್ ಬಂದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಾಂಶುಪಾಲರು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Next Story





