ಭಾರತದ ಆರ್ಥಿಕತೆ ಅಮೆರಿಕಕ್ಕೆ ಸಮ: ಟ್ರಂಪ್
ಲಾಸ್ ವೇಗಸ್, ಅ. 20: ಅಮೆರಿಕದ ಆರ್ಥಿಕತೆಯೊಂದಿಗೆ ಹೋಲಿಸಿದರೆ, ಭಾರತ ಮತ್ತು ಚೀನಾಗಳ ಆರ್ಥಿಕತೆಯಲ್ಲಿ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಆರ್ಥಿಕತೆ ‘‘ಸಾಯುತ್ತಿದೆ’’ ಎಂದು ಇಲ್ಲಿ ಬುಧವಾರ ರಾತ್ರಿ ನಡೆದ ಮೂರನೆ ಹಾಗೂ ಕೊನೆಯ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದಲ್ಲಿ ಮಾತನಾಡಿದ ವೇಳೆ ಟ್ರಂಪ್ ನುಡಿದರು.
‘‘ನಾನು ಈಗಷ್ಟೇ ಭಾರತದ ಕೆಲವು ಉನ್ನತ ಪ್ರತಿನಿಧಿಗಳನ್ನು ಭೇಟಿಯಾದೆ. ಭಾರತದ ಆರ್ಥಿಕ ಬೆಳವಣಿಗೆ 8 ಶೇಕಡದಷ್ಟಿದೆ. ಅದೇ ವೇಳೆ ಚೀನಾದ ಬೆಳವಣಿಗೆ 7 ಶೇಕಡದಷ್ಟಿದೆ. ನಮ್ಮ ಆರ್ಥಿಕತೆಯು ಕುಸಿಯುತ್ತಿದೆ ಎಂದು ನನಗೆ ಅನಿಸುತ್ತಿದೆ’’ ಎಂದರು.
Next Story





