Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತ- ಫ್ರಾನ್ಸ್ ಅಂತರಿಕ್ಷ ಸ್ನೇಹ...

ಭಾರತ- ಫ್ರಾನ್ಸ್ ಅಂತರಿಕ್ಷ ಸ್ನೇಹ ಸಂಬಂಧದ ಎಳೆ ಮಂಗಳನಲ್ಲಿ ಇಳಿಯಲು ಏಣಿಯಾದೀತೇ...!

ಪಲ್ಲವ ಬಾಗ್ಲಾಪಲ್ಲವ ಬಾಗ್ಲಾ20 Oct 2016 10:49 PM IST
share
ಭಾರತ- ಫ್ರಾನ್ಸ್  ಅಂತರಿಕ್ಷ ಸ್ನೇಹ ಸಂಬಂಧದ ಎಳೆ ಮಂಗಳನಲ್ಲಿ  ಇಳಿಯಲು ಏಣಿಯಾದೀತೇ...!

 ಭಾರತ-ಫ್ರಾನ್ಸ್ ನಡುವಿನ ರಾಕೆಟ್ ವ್ಯವಹಾರದ ವ್ಯಾಪ್ತಿ ಯುರೋಪ್, ಏಶ್ಯಾ ಮತ್ತು ದಕ್ಷಿಣ ಅಮೆರಿಕದುದ್ದಕ್ಕೂ ಹಬ್ಬಿದೆ. ದೂರದ ಫ್ರೆಂಚ್ ಗಯಾನಾದಲ್ಲಿ, ದಕ್ಷಿಣ ಅಮೆರಿಕದ ಕುರು ಎಂಬಲ್ಲಿ ದಟ್ಟವಾದ ಹಸಿರು ಅರಣ್ಯದ ನಡುವೆ, 700 ಚದರ ಕಿ.ಮೀ. ವ್ಯಾಪ್ತಿಯ ಈ ಯುರೋಪಿಯನ್ ಅಂತರಿಕ್ಷ ಕೇಂದ್ರವಿದೆ.

    
 ಅಂತರಿಕ್ಷ ಕ್ಷೇತ್ರದಲ್ಲಿ ಭಾರತಕ್ಕೆ ಹೆಚ್ಚಿನ ನೆರವು ನೀಡಿರುವ ಮತ್ತು ಭಾರತದಿಂದ ಲಾಭ ಪಡೆದಿರುವ ದೇಶವೆಂದರೆ ಅದು ಫ್ರಾನ್ಸ್. 1963ರಲ್ಲಿ ಭಾರತದ ಪ್ರಪ್ರಥಮ ಪುಟಾಣಿ ರಾಕೆಟ್‌ನಿಂದ ಹಿಡಿದು 2016ರ ಅ.6ರಂದು ಉಡಾಯಿಸಲಾದ ಭಾರೀ ತೂಕದ ಸಂಪರ್ಕ ಉಪಗ್ರಹ ಜಿಸ್ಯಾಟ್-18ರ ವರೆಗೆ, ಫ್ರಾನ್ಸ್ ನೆರವು ನೀಡಿದೆ. ಉಭಯ ದೇಶಗಳ ಸಂಬಂಧ ಆಳವಾಗಿದೆ ಮತ್ತು ಗಟ್ಟಿಯಾಗಿದೆ. ಭಾರತ ಮತ್ತು ಫ್ರಾನ್ಸ್ ಸೇರಿಕೊಂಡು ರಾಕೆಟ್ ಇಂಜಿನ್‌ಗಳನ್ನು ನಿರ್ಮಿಸಿದೆ. ಒಬ್ಬರಿಗೆ ನಿರಾಕರಿಸಲಾದ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಇನ್ನೊಬ್ಬರಿಂದ ಪಡೆಯುತ್ತಿದೆ. ತಮ್ಮ ದೇಶದ ಮಾನವ ಸಂಪನ್ಮೂಲಕ್ಕೆ ಅಂತರಿಕ್ಷ ತಂತ್ರಜ್ಞಾನದ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಉಭಯ ದೇಶಗಳು ಅವಕಾಶ ಮಾಡಿಕೊಡುತ್ತಿವೆ. ಇಂದು ಉಭಯ ದೇಶಗಳೂ ಸ್ವ-ಸಾಮರ್ಥ್ಯದಿಂದ ಮುಂಚೂಣಿಯಲ್ಲಿರುವ ಅಂತರಿಕ್ಷ ಶಕ್ತಿಗಳೆಂಬ ಮಾನ್ಯತೆ ಪಡೆದಿವೆ.
 ಭಾರತವು ಶಕ್ತಿಶಾಲಿಯಾದ ಏರಿಯನ್ ರಾಕೆಟ್‌ನ ನಿರ್ಮಾಣ ಮತ್ತು ಪರೀಕ್ಷಾ ಕಾರ್ಯದಲ್ಲಿ ಕೂಡಾ ನೆರವು ನೀಡಿರುವುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಕುರು ಉಡಾವಣಾ ಕೇಂದ್ರದಿಂದ ಅಂತರಿಕ್ಷಕ್ಕೆ ಉಡಾಯಿಸಲಾದ 280ನೆ ರಾಕೆಟ್ ಮತ್ತು ಸತತ 74ನೆ ಬೃಹತ್ ಏರಿಯನ್-5 ರಾಕೆಟ್‌ನ ಜೊತೆಗೆ ಭಾರತದ 3,404 ಕಿಲೋ ತೂಕದ ಜಿಸ್ಯಾಟ್-18 ಸಂಪರ್ಕ ಉಪಗ್ರಹವನ್ನು ಕಕ್ಷೆಯಲ್ಲಿ ನೆಲೆಗೊಳಿಸಲಾಗಿದ್ದು ಇದು ದೇಶದ ಟೆಲಿವಿಷನ್ ಮತ್ತು ಬ್ಯಾಂಕಿಂಗ್ ಸೇವಾ ಕಾರ್ಯಗಳಿಗೆ ಉತ್ತೇಜನ ನೀಡಲಿದೆ.
 
  ಈ ಉಡಾವಣಾ ಕಾರ್ಯವನ್ನು ಕುರುವಿನಲ್ಲಿರುವ ನಿಯಂತ್ರಣ ಕೇಂದ್ರದಲ್ಲಿ ವೀಕ್ಷಿಸುತ್ತಿದ್ದ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಇದೊಂದು ಅದ್ಭುತ ಮತ್ತು ದೋಷರಹಿತ ‘ಮಿಷನ್’ ಆಗಿದ್ದು ಈ ಹಿಂದಿನ ಸಂದರ್ಭಗಳಂತೆ ಭವ್ಯವಾದ ಮತ್ತು ಯೋಜಿತ ರೀತಿಯ ಉಡಾವಣೆಗೆ ಏರಿಯನ್‌ಸ್ಪೇಸ್ ಸಹಕಾರ ನೀಡಿತು ಎಂದು ಸಂತಸ ವ್ಯಕ್ತಪಡಿಸಿದ್ದರು. 1983ರಿಂದಲೂ ಭಾರತವು ‘ಏರಿಯನ್‌ಸ್ಪೇಸ್ ಆ್ಯಂಡ್ ಸೆಂಟರ್ ನ್ಯಾಷನಲ್ ಡಿಟ್ಯೂಡ್ಸ್ ಸ್ಪೇಷಲ್ಸ್’ (ಸಿಎನ್‌ಇಎಸ್) ಅಥವಾ ಫ್ರೆಂಚ್ ಸ್ಪೇಸ್ ಏಜೆನ್ಸಿಯ ಜೊತೆ ಸುದೀರ್ಘ ಸಹವಾಸ ಹೊಂದಿದೆ. ಏರಿಯನ್ ಪ್ಯಾಸೆಂಜರ್ ಪೇಲೋಡ್ ಎಕ್ಸ್‌ಪರಿ ಮೆಂಟ್ (ಆ್ಯಪಲ್)ನಿಂದ ಆರಂಭವಾಗಿ ಇದೀಗ ಇಸ್ರೋದ 20ನೆ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿದೆ. ಇಸ್ರೋದಲ್ಲಿ ಕೇವಲ 2.2 ಟನ್ ತೂಕದ ಉಪಗ್ರಹ ಉಡಾವಣೆಯ ಸಾಮರ್ಥ್ಯವಿದೆ. ಆದ್ದರಿಂದ ಹೆಚ್ಚಿನ ಸಾಮರ್ಥ್ಯವಿರುವ ಕುರು ಮತ್ತು ಏರಿಯನ್ ಉಡಾವಣಾ ನೆಲೆಯ ಮೂಲಕ ಅಧಿಕ ಸಾಮರ್ಥ್ಯದ ಉಪಗ್ರಹಗಳನ್ನು ಉಡಾಯಿಸಲು ನಮಗೆ ಸಾಧ್ಯವಾಗುತ್ತಿದೆ ಎನ್ನುತ್ತಾರೆ ಕುಮಾರ್.
ಆರಂಭದ ದಿನಗಳಲ್ಲಿ ಏರಿಯನ್ ಉಡಾವಣಾ ಕೇಂದ್ರ ಸತತ ವೈಫಲ್ಯ ಎದುರಿಸಿತ್ತು. ಆಗ ಭಾರತವು ತನ್ನ 350 ಕಿಲೋ ತೂಕದ ಸಂಪರ್ಕ ಉಪಗ್ರಹ ಆ್ಯಪಲ್‌ಅನ್ನು ಈ ಕೇಂದ್ರದ ಮೂಲಕ ಉಡಾಯಿಸುವ ‘ರಿಸ್ಕ್’ ತೆಗೆದುಕೊಂಡಿತ್ತು ಮತ್ತು ಇದು ಯಶಸ್ವಿಯಾಗಿತ್ತು. ನಿಜ ಹೇಳಬೇಕೆಂದರೆ, ಸಿಎನ್‌ಇಎಸ್ ಭಾರತಕ್ಕೆ ಉಚಿತ ಉಡಾವಣಾ ಅವಕಾಶ ನೀಡಿತ್ತು ಮತ್ತು ಅಲ್ಲಿಂದ ಮುಂದೆ ಏರಿಯನ್ ಮತ್ತು ಇಸ್ರೋ ನಡುವಿನ ಸಂಬಂಧ ಒಂದು ನಿರ್ದಿಷ್ಟ ರೂಪ ಪಡೆದುಕೊಂಡಿದೆ. 2017ರಲ್ಲಿ ಭಾರತವು, ಏರಿಯನ್ ರಾಕೆಟ್ ಬಳಸಿಕೊಂಡು ಇನ್ನೆರಡು ಅಧಿಕ ಸಾಮರ್ಥ್ಯದ ಸಂಪರ್ಕ ಉಪಗ್ರಹ- ಜಿಸ್ಯಾಟ್ 17 ಮತ್ತು ಜಿಸ್ಯಾಟ್11 ಗಳನ್ನು ಉಡಾಯಿಸುವ ವಿಶ್ವಾಸದಲ್ಲಿದೆ.
 
   1963ರ ನವೆಂಬರ್ 21ರಲ್ಲಿ, ಆಗಿನ್ನೂ ಇಸ್ರೋ ಆರಂಭವಾಗಿ ರಲಿಲ್ಲ, ಭಾರತವು ತನ್ನ ಪ್ರಥಮ ರಾಕೆಟ್ ಅನ್ನು ಕೇರಳದ ಥುಂಬ ನೆಲೆಯಿಂದ ಉಡಾಯಿಸಿತ್ತು. ಅಮೆರಿಕ ನೀಡಿದ್ದ ನಿಕೆ ಅಪಾಚೆ ರಾಕೆಟ್ ಮೂಲಕ ಇದನ್ನು ಉಡಾಯಿಸಲಾಗಿತ್ತು. ಭಾರತದ ಪ್ರಪ್ರಥಮ ರಾಕೆಟ್ ಉಡಾವಣೆಯಲ್ಲೂ ಫ್ರಾನ್ಸ್ ನ ಸಹಕಾರವಿತ್ತು. ರಾಕೆಟ್‌ನ ಸರಕಿನ ಭಾಗವನ್ನು ಫ್ರಾನ್ಸ್ ನೀಡಿತ್ತು. ಭಾರತದ ಪ್ರಪ್ರಥಮ ರಾಕೆಟ್‌ಗೆ ರಾಡಾರ್ ವ್ಯವಸ್ಥೆ ಮತ್ತು ಸರಕಿನ ಭಾಗವನ್ನು ನೀಡುವಂತೆ ಸಿಎನ್‌ಇಎಸ್ ಮನವೊಲಿಸಲು ತನಗೆ ಕಷ್ಟವಾಗಲಿಲ್ಲ ಎಂದು ಆ ಸಂದರ್ಭ ಥುಂಬದಲ್ಲಿದ್ದ ಖ್ಯಾತ ಫ್ರೆಂಚ್ ಅಂತರಿಕ್ಷ ವಿಜ್ಞಾನಿ ಜಾಕ್ವೆಸ್ ಬ್ಲೆಮಾಂಟ್ ಹೇಳಿದ್ದರು.
 ರಾಕೆಟ್ ಉಡಾವಣೆಯ ಮುಂಚಿನ ದಿನ ಸರಕಿನ ಭಾಗವನ್ನು ಜೋಡಿಸಲು ಓರ್ವ ಯುವ ಇಂಜಿನಿಯರ್‌ನನ್ನು ಕಳಿಸಲಾಗಿತ್ತು. ಮುಂದಿನ ದಿನದಲ್ಲಿ ಭಾರತದ ರಾಷ್ಟ್ರಪತಿಯಾದ ಎ.ಪಿ.ಜೆ. ಅಬ್ದುಲ್ ಕಲಾಂ ಅವರೇ ಆ ಇಂಜಿನಿಯರ್ ಎಂದು ಬ್ಲೆಮಾಂಟ್ ನೆನಪಿಸಿಕೊಳ್ಳುತ್ತಾರೆ.

     ವಿಕಾಸ್ ಮೋಟರ್ ಎಂಬುದು ಇಸ್ರೋದ ದಣಿವರಿಯದ ಕುದುರೆ ಎನಿಸಿಕೊಂಡಿರುವ ದ್ರವ ಇಂಧನ ರಾಕೆಟ್ ಇಂಜಿನ್. ಇದು ಪೋಲಾರ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮತ್ತು ಜಿಯೊ-ಸಿಂಕ್ರೋನಸ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್( ಜಿಎಸ್‌ಎಲ್‌ವಿ) ಇವೆರಡನ್ನೂ ಒಯ್ಯಬಲ್ಲದು. ಇದರ ಮೂಲ ಕೂಡಾ ಫ್ರಾನ್ಸ್‌ನಲ್ಲಿದೆ. 1974ರಲ್ಲಿ ಫ್ರಾನ್ಸ್‌ನ ಸೊಸೈಟಿ ಯುರೋಪೀನ್ ಡೆ ಪ್ರೊಪಲ್ಶನ್ (ಎಸ್‌ಇಪಿ) ಮತ್ತು ಇಸ್ರೋ ಮಧ್ಯೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದ್ದು ಇದರೊಂದಿಗೆ ದ್ರವ ಸಂಚಾಲನಾ ವ್ಯವಸ್ಥೆಯಲ್ಲಿ ಭಾರತಕ್ಕೆ ಮಹತ್ವಪೂರ್ಣ ಅವಕಾಶ ಒದಗಿ ಬಂದಿತು. ಆ ಸಂದರ್ಭ ಫ್ರೆಂಚರು ತಮ್ಮ ಏರಿಯನ್ ಉಡ್ಡಯನಾ ವಾಹನ ಯೋಜನೆಗೆ ವೈಕಿಂಗ್ ದ್ರವ ಇಂಜಿನ್ ಅಭಿವೃದ್ಧಿಪಡಿಸುತ್ತಿದ್ದರು. ಯಾವುದೇ ಶುಲ್ಕವಿಲ್ಲದೆ ಎಸ್‌ಇಪಿ ಈ ತಂತ್ರಜ್ಞಾನವನ್ನು ಇಸ್ರೋಗೆ ವರ್ಗಾಯಿಸಲು ಒಪ್ಪಂದ ಅವಕಾಶ ಮಾಡಿಕೊಟ್ಟಿತು. ಇದಕ್ಕೆ ಪ್ರತಿಯಾಗಿ ಮುಂದಿನ ನೂರು ಮಾನವ ವರ್ಷಗಳಲ್ಲಿ ಎಸ್‌ಇಪಿಯ ಏರಿಯನ್ ಉಡ್ಡಯನಾ ವಾಹನ ಅಭಿವೃದ್ಧಿ ಕಾರ್ಯದಲ್ಲಿ ಇಸ್ರೋದ ಇಂಜಿಯರ್‌ಗಳು ಮತ್ತು ವಿಜ್ಞಾನಿಳು ನೆರವಾಗಲಿದ್ದಾರೆ. 40 ಇಂಜಿಯರ್‌ಗಳು 5 ವರ್ಷಗಳ ಒಪ್ಪಂದದ ಪ್ರಕಾರ ಫ್ರಾನ್ಸ್‌ನಲ್ಲಿ ತಂತ್ರಜ್ಞಾನ ಗಳಿಸಿಕೊಳ್ಳುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ.
  ಕೆಲ ವರ್ಷಗಳ ಹಿಂದೆ- ಆಕಾಶದಲ್ಲಿ ಯುರೋಪ್‌ನ ಚುರುಕಾದ ಕಣ್ಣುಗಳು -ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಸ್ಪಾಟ್-6 ಮತ್ತು ಸ್ಪಾಟ್-7’ ಉಪಗ್ರಹಗಳನ್ನು ಭಾರತ ಕಕ್ಷೆಗೆ ಉಡಾಯಿಸಿತ್ತು. ಉಭಯ ರಾಷ್ಟ್ರಗಳ ಮಧ್ಯೆ ಇರುವ ಪರಸ್ಪರ ಗೌರವದ ಭಾವನೆಗೆ ಇದು ದ್ಯೋತಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಉಭಯ ದೇಶಗಳು ಸೇರಿಕೊಂಡು ನೀರಿನ ಆವರ್ತವನ್ನು ಅಧ್ಯಯನ ಮಾಡುವ ಉದ್ದೇಶದಿಂದ ‘ಮೆಘಾ ಟ್ರಾಫಿಕ್ಸ್’ ಎಂಬ ಹೆಸರಿನ ಉಪಗ್ರಹವೊಂದನ್ನು ಉಡಾಯಿಸಲಾಗಿತ್ತು. ಈ ಯೋಜನೆಯನ್ನು ಮತ್ತೆ ನಾಲ್ಕು ವರ್ಷ ಮುಂದುವರಿಸಿಕೊಂಡು ಹೋಗುವ ಬಗ್ಗೆ ಕಳೆದ ವಾರವಷ್ಟೇ ಇಸ್ರೋ ಮತ್ತು ಸಿಎನ್‌ಇಎಸ್ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. ಈ ಯೋಜನೆಯಡಿ ಈಗಾಗಲೇ 90 ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಲಾಗಿದ್ದು 1,400ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ನಡೆದಿವೆ ಎನ್ನುತ್ತಾರೆ ಭಾರತದಲ್ಲಿರುವ ಸಿಎನ್‌ಇಎಸ್‌ನ ಪ್ರತಿನಿಧಿ ಮ್ಯಾಥ್ಯೂ ವೈಸ್.

  ಈ ಉಪಗ್ರಹ ವಿವಿಧ ದೇಶಗಳ ಪರಿಸರದಲ್ಲಿರುವ ನೀರಿನ ಪ್ರಮಾಣಗಳ ಚಿತ್ರವನ್ನು ಮೂರು ಆಯಾಮಗಳಲ್ಲಿ ಬಿಡುಗಡೆ ಮಾಡುತ್ತದೆ. ಇದನ್ನು ಮಧ್ಯ ಉಷ್ಣವಲಯದ ಪಟ್ಟಿಯ ಮೇಲ್ಗಡೆ ಸ್ಥಾಪಿಸಲಾಗಿದ್ದು ನಿರ್ದಿಷ್ಟ ಸ್ಥಳದಲ್ಲಿ ಪ್ರತೀದಿನ ಐದು ಸುತ್ತು ಹೊಡೆಯುತ್ತದೆ. ಇದರಿಂದ ಮಳೆ, ಬರಗಾಲ, ಚಂಡಮಾರುತದ ಮುನ್ಸೂಚನೆ ನೀಡಲು ಸಾಧ್ಯವಾಗುತ್ತದೆ. ಇಸ್ರೋ ಮತ್ತು ಸಿಎನ್‌ಇಎಸ್ ಜಂಟಿಯಾಗಿ ನೂತನ ಹವಾಮಾನ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು 2018ರಲ್ಲಿ ಅಂತರಿಕ್ಷಕ್ಕೆ ಜಿಗಿಯಲಿರುವ ಭಾರತೀಯ ಉಪಗ್ರಹ ಓಶಿಯನ್‌ಸ್ಯಾಟ್-3ರಲ್ಲಿ ಫ್ರೆಂಚ್ ವಾಯು ಮಾಹಿತಿ ಸಂಗ್ರಹ ಉಪಕರಣ ಇರಲಿದೆ. ತಾಪಮಾನ ಅಸಮತೋಲನ ವೀಕ್ಷಣಾ ಉಪಗ್ರಹವನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಉಭಯ ದೇಶಗಳು ಹಮ್ಮಿಕೊಂಡಿವೆ. ಭಾರತ ಮತ್ತು ಫ್ರಾನ್ಸ್ ದೇಶಗಳು ಜಂಟಿಯಾಗಿ ಮಂಗಳ ಗ್ರಹದೆಡೆಗೆ ಉಪಗ್ರಹವೊಂದನ್ನು ಕಳುಹಿಸಬೇಕು ಎನ್ನುತ್ತಾರೆ ಬ್ಲೆಮಾಂಟ್. ಭಾರತವು ಫ್ರಾನ್ಸ್‌ನ ಅತ್ಯುತ್ತಮ ಪಾಲುದಾರ ಮತ್ತು ಗ್ರಾಹಕ ದೇಶಗಳಲ್ಲಿ ಒಂದಾಗಿದೆ ಎಂದಿರುವ ಸಿಎನ್‌ಇಎಸ್ ಅಧ್ಯಕ್ಷ ಜೀನ್-ಯೆಸ್ ಲೆ ಗಾಲ್, ಉಭಯ ದೇಶಗಳು ಜಂಟಿಯಾಗಿ ಮಂಗಳ ಮತ್ತು ಶುಕ್ರ ಗ್ರಹದೆಡೆ ಉಪಗ್ರಹ ಕಳುಹಿಸುವ ಯೋಜನೆ ಹಮ್ಮಿಕೊಳ್ಳಬೇಕು. ಅಲ್ಲದೆ ಮಂಗಳನ ನೆಲದಲ್ಲಿ ಇಳಿಯುವ ಯೋಜನೆಗೆ ಮುಂದಾಗಬೇಕು ಎಂದಿದ್ದಾರೆ. ಈ ವರ್ಷಾರಂಭದಲ್ಲಿ ನಡೆದ ಭಾರತದ ಗಣರಾಜ್ಯ ದಿನದಂದು ಭಾರತ ಮತ್ತು ಫ್ರಾನ್ಸ್ ಮಧ್ಯೆ ನಡೆದ ಶೃಂಗ ಸಭೆಯಲ್ಲಿ ಮಂಗಳ ಗ್ರಹದ ಅನ್ವೇಷಣೆ ಕುರಿತಂತೆ ದಾಖಲೆಯೊಂದಕ್ಕೆ ಸಹಿ ಹಾಕಲಾಗಿದೆ. ಭಾರತ- ಫ್ರಾನ್ಸ್ ದೇಶಗಳು ಅಂತರಿಕ್ಷ ತಂತ್ರಜ್ಞಾನದಲ್ಲಿ ಯಾವುದೇ ಸೀಮಾರೇಖೆಗೆ ಒಳಪಡದೆ ಮತ್ತು ಇದೇ ವೇಳೆ ಭೂಮಿಯ ಹಿತವನ್ನು ಮರೆಯದೆ ವಿಶ್ವದ ಗೂಡಾರ್ಥ ಬಿಡಿಸಲು ಮುಂದಾಗಿವೆ.

share
ಪಲ್ಲವ ಬಾಗ್ಲಾ
ಪಲ್ಲವ ಬಾಗ್ಲಾ
Next Story
X