ಜೀವನಾಂಶ ನೀಡುವ ತಂದೆಗೆ ಮಗಳ ಭೇಟಿಯ ಅಧಿಕಾರವಿದೆ: ಹೈಕೋರ್ಟ್
ಹೊಸದಿಲ್ಲಿ, ಅ.20: ತನ್ನ ಮಗಳಿಗೆ ಜೀವನಾಂಶ ಪಾವತಿಸಲು ಸಿದ್ಧನಿರುವ ಹಾಗೂ ಬಯಸುತ್ತಿರುವ ತಂದೆಯೊಬ್ಬ ಕನಿಷ್ಠ ಆಕೆಯ ಹುಟ್ಟುಹಬ್ಬದಂದು ಅಥವಾ ನಿಯಮಿತವಾಗಿ ಮಗಳನ್ನು ಭೇಟಿಯಾಗುವ ಅಧಿಕಾರ ಪಡೆದಿರುತ್ತಾನೆಂದು ದಿಲ್ಲಿ ಹೈಕೋರ್ಟ್ ಇಂದು ಹೇಳಿದೆ. ವ್ಯಕ್ತಿಯೊಬ್ಬನಿಗೆ ತನ್ನ ಮಗಳನ್ನು ಶಾಲೆಯಲ್ಲಿ ಭೇಟಿಯಾಗಲು ಅದು ಅನುಮತಿ ನೀಡಿದೆ.
ತಾನು 12ರ ಹರೆಯದ ಮಗಳನ್ನು 3 ವರ್ಷಗಳಿಂದ ಭೇಟಿಯಾಗಿಲ್ಲವೆಂದು ಪ್ರತಿಪಾದಿಸಿದ ವ್ಯಕ್ತಿಗೆ ನ್ಯಾಯಾಲಯವು ಮಹಾರಾಷ್ಟ್ರದ ಲೋನಾವಳದ ಆಕೆಯ ಶಾಲೆಯಲ್ಲಿ ಮಗಳ ಹುಟ್ಟುಹಬ್ಬದಂದು, ಉತ್ಸವಗಳಂದು ಅಥವಾ ಮೂರು ತಿಂಗಳಿಗೊಮ್ಮೆ ಭೇಟಿಯಾಗಲು ಅವಕಾಶ ನೀಡಿದೆ.
ಈ ಅರ್ಜಿಯು ಕಕ್ಷಿದಾರರ ಭೇಟಿಯ ಹಕ್ಕಿಗೆ ಸಂಬಂಧಿಸಿದುದಲ್ಲ ವಾದರೂ, ತನ್ನ ಮಗಳಿಗೆ ಜೀವನಾಂಶ ಪಾವತಿಸಲು ಸಿದ್ಧನಿರುವ ಅಥವಾ ಬಯಸುತ್ತಿರುವ ತಂದೆಯೊಬ್ಬ ಕನಿಷ್ಠ ಹಬ್ಬಗಳಂದು, ಆಕೆಯ ಹುಟ್ಟುಹಬ್ಬದಂದು ಅಥವಾ ನಿಯಮಿತವಾಗಿ ಮಗಳನ್ನು ಭೇಟಿ ಮಾಡುವ ಅಧಿಕಾರ ಪಡೆದಿರುತ್ತಾನೆಂದು ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಾಜೋಗ್ ಹಾಗೂ ಪ್ರತಿಭಾರಾಣಿಯವರಿದ್ದ ಪೀಠವೊಂದು ತೀರ್ಪು ನೀಡಿದೆ.





