ಜಯಲಲಿತಾ ಪೂರ್ಣ ಗುಣಮುಖ: ಎಡಿಎಂಕೆ
ಚೆನ್ನೈ, ಅ.20: ಪಕ್ಷದ ಅಧ್ಯಕ್ಷೆ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ‘ಸಂಪೂರ್ಣ ಆರೋಗ್ಯದಿಂದಿದ್ದಾರೆ’ ಹಾಗೂ ಶೀಘ್ರವೇ ಮನೆಗೆ ಮರಳಲಿದ್ದಾರೆಂದು ಎಡಿಎಂಕೆ ಇಂದು ಹೇಳಿದೆ. ಸೆ.22ರಿಂದ ಅವರು ಆಸ್ಪತ್ರೆಯಲ್ಲಿದ್ದಾರೆ.
ಅಪೊಲೊ ಆಸ್ಪತ್ರೆಯ ವೈದ್ಯರು ಹಾಗೂ ತಜ್ಞ ವೈದ್ಯರ ನಿಗಾದಲ್ಲಿ ‘ಅಮ್ಮ’ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಅವರು ಶೀಘ್ರವೇ ಮನೆಗೆ ಮರಳಲಿದ್ದಾರೆಂದು ಎಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ ಚೆನ್ನೈಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ವೈದ್ಯರ ಸಲಹೆಯಂತೆ ಜಯಲಲಿತಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಸಂಪೂರ್ಣ ಆರೋಗ್ಯದಿಂದಿದ್ದಾರೆ ಹಾಗೂ ಶೀಘ್ರವೇ ಮನೆಗೆ ಮರಳಲಿದ್ದರೆ. ಆರೋಗ್ಯದ ವಿಷಯದಲ್ಲಿ ದೇವರು ಅವರ ಕಡೆಗಿದ್ದಾರೆಂದು ಅವರು ಹೇಳಿದರು.
Next Story





