ರಾಷ್ಟ್ರವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಜಮ್ಮು-ಕಾಶ್ಮೀರದ 12 ಸರಕಾರಿ ನೌಕರರ ವಜಾ
ಶ್ರೀನಗರ,ಅ.20: ರಾಜ್ಯದಲ್ಲಿ ಅಶಾಂತಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಜಮ್ಮು-ಕಾಶ್ಮೀರದ ಮೆಹಬೂಬ ಮುಫ್ತಿ ಸರಕಾರವು 12 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಇನ್ನೂ 100ಕ್ಕೂ ಅಧಿಕ ನೌಕರರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು,ಇನ್ನಷ್ಟು ಜನರು ವಜಾಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
12 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದ ಆದೇಶವು ಬುಧವಾರ ಸಂಜೆ ಹೊರಬಿದ್ದಿದ್ದು, ಇವರೆಲ್ಲ ಪಟವಾರಿಗಳು ಅಥವಾ ಭೂ ಕಂದಾಯ ದಾಖಲಾಧಿಕಾರಿಗಳು ಮತ್ತು ಶಿಕ್ಷಕರು ಸೇರಿದಂತೆ ಮಧ್ಯಮ ಶ್ರೇಣಿಯ ನೌಕರರಾಗಿದ್ದಾರೆ. ರಾಜ್ಯದ ಸಿಐಡಿ ಪೊಲೀಸರು ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಸರಕಾರವು ಈ ಕ್ರಮವನ್ನು ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
Next Story





