ಅಗ್ನಿ ದುರಂತ ಸಂಭವಿಸಿದ್ದ ಎಸ್‌ಯುಎಂ ಆಸ್ಪತ್ರೆಯ ಮಾಲಕನ ಸೆರೆ
ಭುವನೇಶ್ವರ,ಅ.20: ಅಗ್ನಿ ದುರಂತದಲ್ಲಿ 21 ಜನರು ಬಲಿಯಾಗಿದ್ದ ಇಲ್ಲಿಯ ಎಸ್‌ಯುಎಂ ಆಸ್ಪತ್ರೆಯ ಮಾಲಕ ಮನೋಜ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಇಲ್ಲಿಯ ಸರಕಾರಿ ಅತಿಥಿ ಗೃಹದಲ್ಲಿ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಧಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿದ್ದ ಸವ್ಯಸಾಚಿ ಅಗ್ನಿ ದುರಂತದ ಬಗ್ಗ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು. ಆಸ್ಪತ್ರೆಯು ಸುರಕ್ಷತಾ ನಿಯಮಗಳನ್ನು ಪಾಲಿಸಿರಲಿಲ್ಲ ಮತ್ತು ತಪ್ಪಿತಸ್ಥರನ್ನು ದಂಡನೆಗೊಳಪಡಿಸಲಾಗುವುದು ಎಂದು ನಡ್ಡಾ ಹೇಳಿದ್ದರು.
ಈ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಭೀಕರ ಅಗ್ನಿ ದುರಂತವೊಂದು ಸಂಭವಿಸಿಲು ಕಾಯುತ್ತಲೇ ಇತ್ತು ಎಂದು ಹೇಳಿದ ಆರ್‌ಟಿಐ ಕಾರ್ಯಕರ್ತ ಅಶೋಕ ನಂದಾ ಅವರು, ರಾಜ್ಯದಲ್ಲಿಯ 1,700ಕ್ಕೂ ಅಧಿಕ ಆಸ್ಪತ್ರೆಗಳ ಪೈಕಿ ಕೇವಲ ನಾಲ್ಕು ಮಾತ್ರ ಅಗ್ನಿ ಸುರಕ್ಷತೆ ನಿಯಮಗಳನ್ನು ಪಾಲಿಸುತ್ತಿವೆ ಎನ್ನುವುದನ್ನು ಆರ್‌ಟಿಐ ಉತ್ತರವೊಂದು ಬಹಿರಂಗಗೊಳಿಸಿದೆ ಎಂದರು. ಮಂಗಳವಾರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿತ್ತು.





