ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರ
ಆರು ತಿಂಗಳಲ್ಲಿ ‘ನಂಜನಗೂಡು ಕ್ಷೇತ್ರದಲ್ಲಿ ಉಪ ಚುನಾವಣೆ’
ಬೆಂಗಳೂರು, ಅ. 20: ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ತೀವ್ರ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ರಾಜೀನಾಮೆಯನ್ನು ಸ್ಪೀಕರ್ ಕೆ.ಬಿ.ಕೋಳಿವಾಡ್ ಕೊನೆಗೂ ಅಂಗೀಕರಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕೆ.ಬಿ.ಕೋಳಿವಾಡ್, ಮಾಜಿ ಸಚಿವ ಹಾಗೂ ನಂಜನಗೂಡು ಕ್ಷೇತ್ರದ ಶಾಸಕ ವಿ.ಶ್ರೀನಿವಾಸ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ಅ.17ರಂದು ಸಲ್ಲಿಸಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.ಾನು ನನ್ನ ಶಾಸಕ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಸ್ಪೀಕರ್ ಕೊಠಡಿಯಲ್ಲೆ ಕುಳಿತು ತಮ್ಮ ಕೈಬರಹದಲ್ಲೆ ಒಂದು ಸಾಲಿನ ಪತ್ರ ಬರೆದ ಪ್ರಸಾದ್ ತನ್ನ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ್‌ಗೆ ಸಲ್ಲಿಕೆ ಮಾಡಿದ್ದರು.ಹಿನ್ನೆಲೆಯಲ್ಲಿ ಸ್ಪೀಕರ್ ಕೋಳಿವಾಡ್ ಅವರು ಸಂವಿಧಾನದ ಅನುಚ್ಛೇದ 190 (3) ‘ಬಿ’ನಡಿಯಲ್ಲಿ ಪ್ರದತ್ತವಾದ ಅಕಾರವನ್ನು ಬಳಸಿ ಶಾಸಕ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದಾರಾ?, ಯಾರದೋ ಒತ್ತಡ, ಬೆದರಿಕೆ, ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡುತ್ತಿದ್ದಾರೋ? ಎಂಬ ಪ್ರಶ್ನೆಗಳ ಮೂಲಕ ಉತ್ತರ ಪಡೆದಿದ್ದಾರೆ.ಲ್ಲದೆ, ರಾಜೀನಾಮೆ ನೀಡಿದ ಶಾಸಕರ ಮನಸ್ಥಿತಿ ಬದಲಾವಣೆಗೆ ಒಳಗಾಗಿ ರಾಜೀನಾಮೆ ಹಿಂಪಡೆಯುವ ಸಾಧ್ಯತೆಗಳಿರುವುದರಿಂದ ಸದುದ್ದೇಶದಿಂದ ಮೂರು ದಿನಗಳ ಕಾಲ ಸದರಿ ರಾಜೀನಾಮೆ ಪತ್ರದ ಬಗ್ಗೆ ಮುಂದಿನ ಪ್ರಕ್ರಿಯೆಗಳಿಗಾಗಿ ತಡೆ ಕಾಲಾವಕಾಶ ನೀಡಲಾಗಿತ್ತು ಎಂದು ಕೋಳಿವಾಡ್ ಸ್ಪಷ್ಟಪಡಿಸಿದರು.ಸಂಬಂಧ ಶಾಸಕ ಶ್ರೀನಿವಾಸ ಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿ ರಾಜೀನಾಮೆ ಹಿಂಪಡೆಯುವ ಅಥವಾ ಮರು ಪರಿಶೀಲಿಸುವ ಉದ್ದೇಶವಿದೆಯೇ ಎಂದು ಕೋರಿದ್ದು, ಅವರು ರಾಜೀನಾಮೆ ಹಿಂಪಡೆಯುವುದಿಲ್ಲ ಹಾಗೂ ಅಂಗೀಕಾರ ಮಾಡಿಯೆಂದು ಒತ್ತಾಯಿಸಿದ್ದಾರೆಂದು ಅವರು ಹೇಳಿದರು.
ಹೀಗಾಗಿ ವಿಧಾನಸಭಾ ಕಾರ್ಯ ವಿಧಾನ ಮತ್ತು ನಡವಳಿಕೆಗಳ ನಿಯಮಗಳನ್ನು ಪರಿಶೀಲಿಸಿದ್ದು, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗಿ ರಾಜೀನಾಮೆ ನೀಡಿಲ್ಲ ಎಂಬುದು ಖಾತ್ರಿಪಡಿಸಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದು ಮನವರಿಕೆಯಾಗಿದ್ದು ಅ.20ರಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ಕೋಳಿವಾಡ್ ಪ್ರಕಟಿಸಿದರು.
ಸಿಎಂಗೆ ಅಗ್ನಿ ಪರೀಕ್ಷೆ: ನಂಜನಗೂಡು(ಮೀಸಲು) ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಸಕ ವಿ.ಶ್ರೀನಿವಾಸ ಪ್ರಸಾದ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಕ್ಷೇತ್ರಕ್ಕೆ ಇನ್ನೂ ಆರು ತಿಂಗಳಲ್ಲಿ ಉಪ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ. ಉಪ ಚುನಾವಣೆಗೆ ಯಾರೇ ಅಭ್ಯರ್ಥಿಗಳಾದರೂ, ಸಿದ್ದರಾಮಯ್ಯ ಹಾಗೂ ಶ್ರೀನಿವಾಸ ಪ್ರಸಾದ್ ಮಧ್ಯೆ ಹಣಾಹಣಿ ನಡೆಯಲಿದೆ.
2018ರ ಮೇ 13ಕ್ಕೆ ಹದಿನಾಲ್ಕನೆ ವಿಧಾನಸಭೆ ಅವ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನಪ್ರಿಯತೆಯ ಅಗ್ನಿ ಪರೀಕ್ಷೆ ನಡೆಯಲಿದೆ.ಅಲ್ಲದೆ, ಶ್ರೀನಿವಾಸ ಪ್ರಸಾದ್ ಅವರ ಮುಂದಿನ ರಾಜಕೀಯ ನಡೆಯೇನು ಎಂಬ ಬಗ್ಗೆಯೂ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.







