ಉಮೇಶ್‌ರೆಡ್ಡಿ ಗಲ್ಲು ಶಿಕ್ಷೆ ಜಾರಿಗೆ ಹೈಕೋರ್ಟ್ ತಡೆ

ಬೆಂಗಳೂರು, ಅ.20: ಬೆಳಗಾವಿ ಕಾರಾಗೃಹದಲ್ಲಿರುವ ವಿಕೃತಕಾಮಿ ಉಮೇಶ್‌ರೆಡ್ಡಿ ಗಲ್ಲು ಶಿಕ್ಷೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠವು ಶಿಕ್ಷೆ ಜಾರಿಗೆ ಮಧ್ಯಾಂತರ ತಡೆ ನೀಡಿ ಆದೇಶ ಪ್ರಕಟಿಸಿದೆ. ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿರುವ ಪೀಠವು ಆಕ್ಷೇಪಣೆ ಸಲ್ಲಿಸಲು ಹತ್ತು ದಿನ ಅವಕಾಶ ನೀಡಿದೆ. ವಿಚಾರಣೆಯನ್ನು ಹದಿನೈದು ದಿನ ಮುಂದೂಡಲಾಗಿದ್ದು, ಉಮೇಶ್‌ರೆಡ್ಡಿ ಸದ್ಯಕ್ಕೆ ನೇಣು ಕುಣಿಕೆಯಿಂದ ಪಾರಾಗಿದ್ದಾನೆ.ರ್ ದಾರರ ಪರ ವಾದಿಸಿದ ವಕೀಲರು, ರಾಷ್ಟ್ರಪತಿಗಳು ಅನಗತ್ಯವಾಗಿ ಕ್ಷಮಾದಾನದ ಅರ್ಜಿಯನ್ನು ವಿಳಂಬ ಮಾಡಿದ್ದರಿಂದ ಉಮೇಶ್‌ರೆಡ್ಡಿ ಖಿನ್ನತೆಗೆ ಒಳಗಾಗಿದ್ದಾನೆ ಹಾಗೂ ಈಗಾಗಲೇ ಹಲವು ವರ್ಷಗಳ ಕಾಲ ಉಮೇಶ್‌ರೆಡ್ಡಿ ಶಿಕ್ಷೆಯನ್ನು ಅನುಭವಿಸಿದ್ದಾನೆ. ಹೀಗಾಗಿ, ಗಲ್ಲು ಶಿಕ್ಷೆ ಆದೇಶಕ್ಕೆ ತಡೆ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಲ್ಲು ಶಿಕ್ಷೆಗೆ ತಡೆ ಕೋರುವಷ್ಟೂ ಶಕ್ತಿ ಉಮೇಶ್‌ರೆಡ್ಡಿಗೆ ಇಲ್ಲದಂತಾಗಿದೆ. ಹೀಗಾಗಿ, ಅವರ ತಾಯಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂಬ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಲ್ಲು ಶಿಕ್ಷೆಗೆ ತಡೆ ಕೋರಿ ಉಮೇಶ್‌ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ. ಆಕ್ಷೇಪಣೆ ಕ್ಲಿಯರ್ ಆದ ಮೇಲೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದ್ದ ನ್ಯಾಯಾಲಯ, ಅರ್ಜಿದಾರರ ವಕೀಲರಿಗೆ ಕಚೇರಿ ಎತ್ತಿರುವ ತಾಂತ್ರಿಕ ಅಡ್ಡಿ ನಿವಾರಿಸುವಂತೆ ಈ ಹಿಂದೆ ಸೂಚನೆ ನೀಡಿತ್ತು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುಮಾರು 18ಕ್ಕೂ ಹೆಚ್ಚು ಮಂದಿಯನ್ನು ಕೊಂದು 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ವಿಕೃತ ಕಾಮಿ ಎಂದೇ ಹೆಸರಾಗಿರುವ ಬಿ.ಎ.ಉಮೇಶ್‌ಗೆ ಬೆಂಗಳೂರಿನ ಅೀನ ನ್ಯಾಯಾಲಯವು 2006ರಲ್ಲಿ ಗಲ್ಲು ಶಿಕ್ಷೆ ವಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠ ಈ ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಸುಪ್ರೀಂಕೋರ್ಟ್ ಕೂಡ 2011ರಲ್ಲೇ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿತ್ತು.





