ಅ.23: ‘ಇಸಿಜಿಸಿಒಎನ್’ ಕಾರ್ಯಾಗಾರ
ಮಂಗಳೂರು, ಅ.20: ನಗರದ ಹಾರ್ಟ್ ಫೌಂಡೇಶನ್ ಹಾಗೂ ಐಎಂಎ ಮಂಗಳೂರು ಜಂಟಿ ಆಶ್ರಯದಲ್ಲಿ ಅ.23ರಂದು ಪೂರ್ವಾಹ್ನ 11ಕ್ಕೆ ಐಎಂಎ ಸಭಾಂಗಣದಲ್ಲಿ ‘ಇಸಿಜಿಸಿಒಎನ್ 2016’ ಕಾರ್ಯಾಗಾರ ನಡೆಯಲಿದೆ.
ಇಸಿಜಿ ಮೂಲಕ ಹೃದ್ರೋಗವನ್ನು ಆರಂಭ ಹಂತದಲ್ಲೇ ಪತ್ತೆ ಹಚ್ಚುವ ಪರಿಣಿತಿಯನ್ನು ವೈದ್ಯರಿಗೆ ತಿಳಿಸುವುದು ಕಾರ್ಯಾಗಾರದ ಮೂಲ ಉದ್ದೇಶವಾಗಿದೆ.
ಕಾರ್ಯಾಗಾರವನ್ನು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಜಯರಾಮ್ ಭಟ್ ಉದ್ಘಾಟಿಸುವರು ಎಂದು ವೈದ್ಯರಾದ ಡಾ.ಮುಕುಂದ್ ಹಾಗೂ ಡಾ.ಎಚ್.ಪ್ರಭಾಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





