ನಾಳೆ ವಿಟ್ಲ ರೇಂಜ್ ಕಾನ್ಫರೆನ್ಸ್, ಎಸ್‌ಬಿಎಸ್ ಬಾಲ ಮುನ್ನಡೆ ಕಾರ್ಯಕ್ರಮ
ಬಂಟ್ವಾಳ, ಅ.20: ಎಸ್‌ಇಡಿಸಿ ಸ್ಫಟಿಕ ಸಂಭ್ರಮದ ಪ್ರಯುಕ್ತ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಆಯೋಜಿಸಲಾದ ವಿಟ್ಲ ರೇಂಜ್ ಕಾನ್ಫರೆನ್ಸ್ ಹಾಗೂ ಎಸ್‌ಬಿಎಸ್ ಬಾಲ ಮುನ್ನಡೆ ಕಾರ್ಯಕ್ರಮವು ಅ.22ರಂದು ವಿಟ್ಲದ ಟೌನ್ ಮಸೀದಿ ವಠಾರದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10ಕ್ಕೆ ಮುಅಲ್ಲಿಂ ಮುಲಾಖಾತ್, ಅಪರಾಹ್ನ 2ಕ್ಕೆ ಮ್ಯಾನೇಜ್‌ಮೆಂಟ್ ಮೀಟ್ ಒಕ್ಕೆತ್ತೂರು ಮದ್ರಸ ಸಭಾಂಗಣದಲ್ಲಿ ನಡೆಯಲಿದ್ದು, ಸಂಜೆ ಬಾಲ ಮುನ್ನಡೆ ಕಾರ್ಯಕ್ರಮ ಹಾಗೂ ವಿಟ್ಲ ಸರಕಾರಿ ಬಸ್ ನಿಲ್ದಾಣದಿಂದ ವಿಟ್ಲ ಟೌನ್ ಮಸೀದಿವರೆಗೆ ಆಕರ್ಷಕ ಸ್ಕೌಟ್, ಗೈಡ್, ದಪ್ ತಂಡಗಳನ್ನೊಳಗೊಂಡ ಸಮವಸ್ತ್ರದಾರಿ ವಿದ್ಯಾರ್ಥಿಗಳ ರ್ಯಾಲಿ ನಡೆಯಲಿದೆ. ಟೌನ್ ಮಸೀದಿ ವಠಾರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಎಸ್‌ಜೆಯು ಪ್ರ.ಕಾರ್ಯದರ್ಶಿ ಜಿ.ಎಂ.ಅಬೂಬಕರ್ ಸುನ್ನಿ ಫೈಝಿ ಪೆರುವಾಯಿ ದುಆ ಆಶೀರ್ವಚನ ನೀಡಲಿದ್ದು, ಸ್ವಾಗತ ಸಮಿತಿ ಗೌರವಾಧ್ಯಕ್ಷ ಸೈಯದ್ ಮುಹಮ್ಮದ್ ಹಬೀಬ್ ಪೂಕೋಯ ತಂಙಳ್ ಪೆರುವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಮಹ್‌ಮೂದುಲ್ ಫೈಝಿ ವಾಲೆಮುಂಡೋವು ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





