Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದೀಪಾವಳಿ: ಕತ್ತಲನ್ನು ಬಿತ್ತಿ ಹೋಗದಿರಲಿ

ದೀಪಾವಳಿ: ಕತ್ತಲನ್ನು ಬಿತ್ತಿ ಹೋಗದಿರಲಿ

ವಾರ್ತಾಭಾರತಿವಾರ್ತಾಭಾರತಿ20 Oct 2016 11:55 PM IST
share
ದೀಪಾವಳಿ: ಕತ್ತಲನ್ನು ಬಿತ್ತಿ ಹೋಗದಿರಲಿ

‘ತಮಸೋಮಾ ಜ್ಯೋತಿರ್ಗಮಯ’ ಕತ್ತಲಿನಿಂದ ನಮ್ಮನ್ನು ಬೆಳಕಿನೆಡೆಗೆ ಸಾಗುವ ರೂಪಕವಾಗಿದೆ ದೀಪಾವಳಿ ಹಬ್ಬ. ಯಾವುದೇ ಧರ್ಮಗಳ ಹಬ್ಬಗಳಿರಲಿ ಅದರ ಮುಖ್ಯ ಉದ್ದೇಶವೇ ಬದುಕಿನಲ್ಲಿ ದಟ್ಟೈಸಿದ ಕತ್ತಲನ್ನು ಗುಡಿಸಿ, ನಮ್ಮನ್ನು ಬೆಳಕಿನ ಹೊಸ ದಾರಿಯೆಡೆಗೆ ಮುನ್ನಡೆಸುವುದಾಗಿದೆ. ದೀಪಾವಳಿಯಂತೂ ಹೆಸರಿನಲ್ಲೇ ತನ್ನ ಉದ್ದೇಶವನ್ನು ಹೇಳುತ್ತದೆ. ದೀಪಾವಳಿಯ ಹಿಂದಿರುವ ಕತೆ, ಪುರಾಣ ಅದೇನೇ ಇರಲಿ. ಆ ಪುರಾಣದೊಳಗಿರುವ ಸಂಸ್ಕೃತಿ ರಾಜಕಾರಣವನ್ನು ಭಾರತದ ದ್ರಾವಿಡ ಜನರು ಒಪ್ಪುವುದಿಲ್ಲ. ಆದರೆ ದೀಪಾವಳಿಯನ್ನು ಹಬ್ಬವಾಗಿ ಆಚರಿಸುವಾಗ ಇದೆಲ್ಲ ಹಿಂದೆ ಸರಿದು, ಅದು ಪ್ರತಿಪಾದಿಸುವ ಬೆಳಕೇ ನಮಗೆಲ್ಲ ಮುಖ್ಯವಾಗುತ್ತದೆ. ಆದುದರಿಂದಲೇ ಭಾರತದಲ್ಲಿ ದೀಪಾವಳಿ ಎಲ್ಲ ಧರ್ಮ, ಜಾತಿಗಳನ್ನು ಮೀರಿ ಹಬ್ಬಿಕೊಂಡಿದೆ. ಆದರೆ ಯಾವುದೇ ಹಬ್ಬ, ಆಚರಣೆಗಳಿರಲಿ, ಅತನ್ನು ವಿಕೃತಗೊಳಿಸುವುದರಲ್ಲಿ, ತಮ್ಮ ವಿಕಾರಗಳ ಪ್ರದರ್ಶನಗಳಿಗೆ ಸೀಮಿತಗೊಳಿಸುವುದರಲ್ಲಿ ಭಾರತೀಯರು ನಿಸ್ಸೀಮರು. ಇಂದು ಭಾರತದಲ್ಲಿ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸದೇ ಸದ್ದಿನ ಹಬ್ಬವಾಗಿ ಆಚರಿಸಲಾಗುತ್ತಿದೆ. ಹಣತೆಯ ಹಬ್ಬವಾಗದೆ ಸುಡುಮದ್ದಿನ ಹಬ್ಬವಾಗಿ ಗಂಧಕದ ದಟ್ಟ ದುರ್ವಾಸನೆಯನ್ನು ನಮ್ಮಿಳಗೆ ಉಳಿಸಿ ಹೋಗುತ್ತದೆ. ಜ್ಯೋತಿ ಸುತ್ತುಮುತ್ತಲನ್ನು ಬೆಳಗದೆ, ಪಟಾಕಿಯ ಬೆಂಕಿಯ ಕಿಡಿ ಬೂದಿಯನ್ನಷ್ಟೇ ನಮ್ಮ ಕೈಗೆ ನೀಡಿ, ವಿಷಾದದ ವರ್ತಮಾನವೊಂದನ್ನು ನಿರ್ಮಾಣ ಮಾಡುತ್ತಿದೆ. ಪ್ರತಿ ವರ್ಷ ದೀಪಾವಳಿ ನಮ್ಮ ಸ್ವಯಂಕೃತಾಪರಾಧದಿಂದ ಕತ್ತಲನ್ನು ಬಿತ್ತಿ ಹೋಗುತ್ತಿದೆ. ಆದರೆ ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿಯುವುದಕ್ಕೆ ಮಾತ್ರ ನಾವು ಸಿದ್ಧರಿಲ್ಲ.
  ಕಳೆದ ವರ್ಷ ದೀಪಾವಳಿ ನಮ್ಮ ನಡುವಿನಿಂದ ಹೇಗೆ ವಿದಾಯ ಹೇಳಿತು ಎನ್ನುವುದನ್ನೊಮ್ಮೆ ನೆನೆದುಕೊಳ್ಳೋಣ. ಕರ್ನಾಟಕದಲ್ಲೇ ನೂರಕ್ಕೂ ಅಧಿಕ ಮಕ್ಕಳು ಪಟಾಕಿಯ ಕಾರಣದಿಂದ ಗಾಯಗೊಂಡರು. ಹತ್ತಕ್ಕೂ ಅಧಿಕ ಮಂದಿ ತಮ್ಮ ಕಣ್ಣುಗಳನ್ನು ಕಳೆದುಕೊಂಡರು. ಕಳೆದ ವರ್ಷವೂ ಪಟಾಕಿ ಅಂಗಡಿಗಳಿಗೆ ಬೆಂಕಿ ಬಿದ್ದು ಸಾವು ನೋವುಗಳು ಸೃಷ್ಟಿಯಾಗಿದ್ದವು. ಕಳೆದ ದೀಪಾವಳಿಯನ್ನು ನೆನೆದು ದೇಶಾದ್ಯಂತ ನೂರಾರು ತಾಯಂದಿರು ಈ ದೀಪಾವಳಿಯ ದಿನ ನಿಟ್ಟುಸಿರು ಬಿಡುವಂತಹ ಸನ್ನಿವೇಶ. ಇದೀಗ ಮತ್ತೆ ದೀಪಾವಳಿ ಹತ್ತಿರವಾಗುತ್ತಿದೆ. ವಿಷಾದನೀಯ ಸಂಗತಿಯೆಂದರೆ, ಈ ಬಾರಿಯೂ ದೀಪಾವಳಿ ವಿಷಾದದ ಜೊತೆಗೇ ಆರಂಭವಾಗುತ್ತಿದೆ. ಪಟಾಕಿಯ ಸ್ವರ್ಗವೆನಿಸಿರುವ ಶಿವಕಾಸಿ ದೀಪಾವಳಿಯನ್ನು ಸಾವುನೋವುಗಳ ಸಹಿತ ಉದ್ಘಾಟಿಸಿದೆ. ಗುರುವಾರ ತಮಿಳುನಾಡಿನ ಶಿವಕಾಸಿಯಲ್ಲಿ ಸಂಭವಿಸಿದ ಪಟಾಕಿ ದುರಂತವೊಂದರಲ್ಲಿ ಆರು ಮಹಿಳೆಯರೂ ಸೇರಿ ಎಂಟು ಜನರು ಮೃತಪಟ್ಟಿದ್ದಾರೆ. ಶಿವಕಾಸಿಯಲ್ಲಿ ಪಟಾಕಿ ಮತ್ತು ಮರಣ ಜೊತೆಜೊತೆಗೇ ಸಾಗುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ ಈ ದುರಂತದಲ್ಲಿ ಮಕ್ಕಳು ಮೃತಪಡುತ್ತಾರಾದರೂ ಅವರ ಸಂಖ್ಯೆ ಬಹಿರಂಗಗೊಳ್ಳುವುದಿಲ್ಲ. ಯಾಕೆಂದರೆ ಅವರನ್ನು ಅನಧಿಕೃತವಾಗಿ ಅಲ್ಲಿ ದುಡಿಸಿ ಕೊಳ್ಳಲಾಗುತ್ತದೆ. ಪಟಾಕಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳಬಾರದು ಎಂದರೂ ಇಂದಿಗೂ ಅದರಲ್ಲಿ ಅನಧಿಕೃತವಾಗಿ ಬಾಲ ಕಾರ್ಮಿಕರು ಬಳಸಲ್ಪಡುತ್ತಲೇ ಇದ್ದಾರೆ. ದುರಂತ ಸಂಭವಿಸಿದಾಗ, ಇವರ ಲೆಕ್ಕವನ್ನು ಮಾತ್ರ ಮುಚ್ಚಿಡಲಾಗುತ್ತದೆ. ಸಾಧಾರಣವಾಗಿ ದೀಪಾವಳಿಯ ಹೆಸರಿನಲ್ಲಿ ಪಟಾಕಿಗಳ ಕಾರ್ಖಾನೆ, ದಾಸ್ತಾನುಗಳು ದೇಶಾದ್ಯಂತ ಇವೆಯಾದರೂ, ಅವೆಲ್ಲ ಕೇವಲ ದೀಪಾವಳಿಯ ದಿನ ಮಾತ್ರ ಬಳಕೆಯಾಗಬೇಕು ಎಂದೇನಿಲ್ಲ. ಕಳೆದ ವರ್ಷ, ಬಿಜೆಪಿಯ ಮುಖಂಡನೊಬ್ಬನ ಗೋದಾಮಿನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಬೆಂಕಿಗೆ ಆಹುತಿಯಾಗಿ ಅಪಾರ ಸಾವು ನೋವು ಸಂಭವಿಸಿತು. ಇಷ್ಟೂ ಸ್ಫೋಟಕಗಳು ಯಾಕೆ ಸಂಗ್ರಹವಾಗಿದ್ದವು, ಅದನ್ನು ಅವರು ನಿಜಕ್ಕೂ ಯಾವ ರೀತಿಯ ‘ದೀಪಾವಳಿ’ಗೆ ಬಳಸುವುದಕ್ಕೆ ಯೋಜನೆ ಹಾಕಿಕೊಂಡಿದ್ದರು ಎನ್ನುವುದು ಮಾತ್ರ ಬಹಿರಂಗವಾಗುವುದೇ ಇಲ್ಲ. ಯಾವುದಾದರೂ ಪಟಾಕಿ ದಾಸ್ತಾನಿಗೆ ಬೆಂಕಿ ಬಿದ್ದಾಕ್ಷಣ, ‘ಸ್ಫೋಟಕಗಳನ್ನು ದೀಪಾವಳಿಗಾಗಿ ಸಂಗ್ರಹಿಸಿಡಲಾಗುತ್ತಿತ್ತು’ ಎಂದು ಸಂಬಂಧಪಟ್ಟವರು ಹೇಳಿಕೆ ನೀಡಿ ಪಾರಾಗುತ್ತಿದ್ದರು. ಅಂದರೆ ದೀಪಾವಳಿಯ ಹೆಸರಿನಲ್ಲೇ ಇಂದು ದೇಶಾದ್ಯಂತ ಅನಧಿಕೃತವಾಗಿ ಸ್ಫೋಟಕಗಳು ಸಂಗ್ರಹಿಸಲ್ಪಡುತ್ತವೆ ಮತ್ತು ಅಕ್ರಮ ಕೆಲಸಗಳಿಗಾಗಿ ಅವುಗಳನ್ನು ಬಳಸುವುದೂ ನಡೆಯುತ್ತಿದೆ.
 
ಇಷ್ಟಕ್ಕೂ ಪಟಾಕಿಗೂ ದೀಪಾವಳಿಗೂ ಯಾವುದೇ ಸಂಬಂಧಗಳಿಲ್ಲ. ಪಟಾಕಿ ಬೆಳಕನ್ನು ಕೊಡುವುದಿಲ್ಲ. ಒಮ್ಮೆ ದೊಡ್ಡ ಸದ್ದಾಗಿ, ಉರಿದು ನಮ್ಮ ಕಣ್ಣೆದುರೇ ಬೂದಿಯಾಗುತ್ತವೆ. ಆಮೇಲೆ ಉಳಿಯುವುದು ಗಂಧಕದ ವಾಸನೆ ಮತ್ತು ದಟ್ಟ ಕತ್ತಲು. ಆದರೆ ಇದೇ ಸಂದರ್ಭದಲ್ಲಿ ಈ ದೇಶದ ನೂರಾರು ಮಕ್ಕಳ ಕಣ್ಣುಗಳನ್ನು ಈ ಪಟಾಕಿಗಳು ಕಿತ್ತುಕೊಳ್ಳುತ್ತವೆ. ಅವರ ಬದುಕಿನುದ್ದಕ್ಕೂ ಬೆಳಕು ನೀಡುವ ಎರಡು ಹಣತೆಗಳು ಅವು. ಪಟಾಕಿಯ ಒಂದು ಕ್ಷಣದ ರಂಜನೆಯ ಬೆನ್ನು ಹತ್ತಿ, ಅವುಗಳನ್ನು ಶಾಶ್ವತವಾಗಿ ಕಳೆದುಕೊಂಡ ಮಕ್ಕಳು ಅದೆಷ್ಟೋ. ಆದರೆ ಇದಕ್ಕಾಗಿ ನಾವು ದೀಪಾವಳಿಯನ್ನು ಹೊಣೆ ಮಾಡುವಂತಿಲ್ಲ. ಬದಲಿಗೆ ಅದರ ಉದ್ದೇಶವನ್ನು ಅರಿತುಕೊಳ್ಳದೆ, ವಿಕಾರಗೊಳಿಸಿ ಆಚರಣೆಗೈದ ಹಿರಿಯರೇ ಪರೋಕ್ಷ ಕಾರಣರಾಗಿದ್ದಾರೆ. ದೀಪಾವಳಿಯಂದು ಪಟಾಕಿಗಾಗಿ ಸಹಸ್ರಾರು ರುಪಾಯಿಗಳನ್ನು ಸುರಿಯಲಾಗುತ್ತದೆ. ಆದರೆ ಅದು ಕೆಲವೇ ಕೆಲವು ಕ್ಷಣಗಳಲ್ಲಿ ಬೂದಿಯಾಗಿ ಬಿಡುತ್ತದೆ. ಒಂದು ರೀತಿಯಲ್ಲಿ, ಹಣವನ್ನು ಸುಟ್ಟು ನಾವು ರಂಜನೆ ಪಡೆಯಲು ವಿಫಲ ಯತ್ನ ನಡೆಸುತ್ತೇವೆ. ಅದೇ ಹಣವನ್ನು ಬಡವರಿಗೆ, ದುರ್ಬಲರಿಗೆ ಉಡುಗೊರೆಯಾಗಿ ನೀಡಿದರೆ, ಅಥವಾ ಆ ಹಣದಿಂದ ಅವರಿಗೆ ಬಟ್ಟೆ, ಇನ್ನಿತರ ವಸ್ತುಗಳನ್ನು ಕೊಡುಗೆಯಾಗಿ ನೀಡಿದರೆ, ಅವರ ಕಣ್ಣುಗಳಲ್ಲಿ ಮಿನುಗುವ ಸಂತೋಷ ಸಾವಿರ ದೀಪಾವಳಿಗೆ ಸಮ. ಅವರ ಖುಷಿ ನಮ್ಮ ಎದೆಯೊಳಗೆ ಹಚ್ಚುವ ದೀಪಗಳು ನಮ್ಮನ್ನು ಬದುಕಿನುದ್ದಕ್ಕೂ ಮುನ್ನಡೆಸಬಹುದು. ಇದೇ ಸಂದರ್ಭದಲ್ಲಿ ಪಟಾಕಿಗಳ ಕುರಿತಂತೆ ಸರಕಾರದ ಹೊಣೆಗಾರಿಕೆಯೂ ಬಹುದೊಡ್ಡದಿದೆ. ದೀಪಾವಳಿ ಪಟಾಕಿ ಹೆಸರಲ್ಲಿ ಸ್ಫೋಟಕ ಮಾಫಿಯಾ ನಡೆಸುತ್ತಿರುವ ಈ ದಂಧೆಯನ್ನು ಕಣ್ಣಿದ್ದೂ ಸರಕಾರ ಕುರುಡನಂತೆ ನೋಡುತ್ತಿದೆ. ಇಂದು ಪಟಾಕಿ ತಯಾರಿಕೆಯ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಸ್ಫೋಟಕಗಳು ಒಂದೆಡೆ ತಯಾರಾಗುತ್ತಿದೆ. ಪಟಾಕಿ ತಯಾರಿಕೆ, ಸಂಗ್ರಹಗಳ ಹಿಂದೆ ದುಷ್ಕರ್ಮಿಗಳ ನೀಳ ಕೈಗಳಿವೆ. ಇಂದು ಪಟಾಕಿಗಳನ್ನು ಈ ಕಾರಣಕ್ಕಾಗಿಯೂ ನಿಷೇಧಿಸುವ ಅಗತ್ಯವಿದೆ. ಹಾಗೆಯೇ ದೀಪಾವಳಿ ಹಬ್ಬದ ಸದುದ್ದೇಶಗಳನ್ನು ನಾಶಗೊಳಿಸಿ, ಸಾವುನೋವು, ದುರಂತ, ಪರಿಸರ ನಾಶ ಇವೆಲ್ಲವುಗಳಿಗೆ ಕಾರಣವಾಗುವ ಪಟಾಕಿಯನ್ನು ನಿಷೇಧಿಸುವ ಮೂಲಕ ದೀಪಾವಳಿ ಹಬ್ಬದ ಸದ್ಮೌಲ್ಯಗಳನ್ನು ಸರಕಾರ ಎತ್ತಿ ಹಿಡಿಯಬೇಕು. ಅದರ ಸಂಭ್ರಮ ಶಾಶ್ವತವಾಗಿ ಉಳಿಯುವಂತೆ ಈ ಮೂಲಕ ನೋಡಿಕೊಳ್ಳಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X