ಎಸ್‌ಡಿಪಿಐಯಿಂದ ಜಾತ್ಯತೀತ ಇಂಡಿಯಾ ಸಮಾವೇಶ

ಬಂಟ್ವಾಳ, ಅ. 20: ‘ಜಾತ್ಯತೀತವೇ ಇಂಡಿಯಾದ ಜೀವ’ ಎಂಬ ಘೋಷಣೆಯೊಂದಿಗೆ ಎಸ್‌ಡಿಪಿಐ ರಾಷ್ಟ್ರ ವ್ಯಾಪಿ ಹಮ್ಮಿಕೊಂಡಿರುವ ಜಾತ್ಯತೀತ ಇಂಡಿಯಾ ಸಮಾವೇಶದ ಕಾರ್ಯಕ್ರಮವು ಫರಂಗಿಪೇಟೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಜಾತ್ಯತೀತ ಇಂಡಿಯಾ ಅಭಿಯಾನದ ಕುರಿತು ಸಂದೇಶ ಭಾಷಣ ಮಾಡಿದರು. ಎಸ್‌ಡಿಪಿಐ ದ.ಕ. ಜಿಲ್ಲಾ ಅಧ್ಯಕ್ಷ ಹನೀಫ್ ಖಾನ್ ಕೊಣಾಜೆ, ದ.ಕ. ದಲಿತ ಒಕ್ಕೂಟದ ಸಂಚಾಲಕ ರಘುವೀರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸಜೀಪ ನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜಿಪ ಅವರನ್ನು ಸನ್ಮಾನಿಸಲಾಯಿತ್ತು.
ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಲತೀಪ್ ಕೋಡಿಜಾಲ್, ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಎಸ್‌ಡಿಪಿಐ ಪುದು ವಲಯ ಅಧ್ಯಕ್ಷ ಸುಲೈಮಾನ್ ಉಸ್ತಾದ್ ಅಮೆಮಾರ್, ಉಪಾಧ್ಯಕ್ಷ ಅಝೀಝ್ ಟಿ.ಎ. ತುಂಬೆ, ಎಸ್‌ಡಿಪಿಐ ತುಂಬೆ ಗ್ರಾಮ ಸಮಿತಿ ಅಧ್ಯಕ್ಷ ಇಸ್ಮಾಯೀಲ್, ಎಸ್‌ಡಿಪಿಐ ಪುದು ಗ್ರಾಮ ಸಮಿತಿಯ ಅಧ್ಯಕ್ಷ ಇಕ್ಬಾಲ್ ಹತ್ತನೆಮೈಲುಗಲ್ಲು, ಎಸ್‌ಡಿಪಿಐ ಪೇರಿಮಾರ್ ಘಟಕ ಅಧ್ಯಕ್ಷ ಅಬ್ಬಾಸ್, ಪುದು ಗ್ರಾಪಂ ಮಾಜಿ ಸದಸ್ಯ ಇಕ್ಬಾಲ್ ಅಮೆಮಾರ್, ಎಸ್‌ಡಿಪಿಐ ಅಡ್ಯಾರ್ ಗ್ರಾಮ ಸಮಿತಿಯ ಅಧ್ಯಕ್ಷ ಯಾಸೀನ್, ಎಸ್‌ಡಿಪಿಐ ಅಡ್ಯಾರ್ ಗ್ರಾಮ ಸಮಿತಿ ಸದಸ್ಯ ಲಾನ್ಸಿ ಥೋರಸ್ ಉಪಸ್ಥಿತರಿದ್ದರು.
ಎಸ್‌ಡಿಪಿಐ ರಾಜ್ಯ ಪ್ರ.ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಂಬೆ ಗ್ರಾಪಂ ಸದಸ್ಯ ಝಹೂರ್ ಅಹ್ಮದ್ ಸ್ವಾಗತಿಸಿದರು. ಎಸ್‌ಡಿಪಿಐ ಅಮೆಮಾರ್ ಘಟಕದ ಅಧ್ಯಕ್ಷ ಶರೀಫ್ ವಂದಿಸಿದರು. ಖಾದರ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿದರು.





