ಭಾರತದ ಹೆಣ್ಣು ಮಗುವಿನ ಪರಿಸ್ಥಿತಿಯಲ್ಲಿ ಸುಧಾರಣೆ: ವಿಶ್ವಸಂಸ್ಥೆ
ಲಂಡನ್, ಅ. 20: ಹೆಣ್ಣು ಮಗುವಿಗೆ ಲಭಿಸುತ್ತಿರುವ ಅವಕಾಶಗಳ ವಿಷಯದಲ್ಲಿ ಭಾರತ ‘‘ನಾಟಕೀಯ’’ ಸುಧಾರಣೆಗಳನ್ನು ಕಂಡಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ಯುವ ಜನರ ಪರಿಸ್ಥಿತಿಯ ಸುಧಾರಣೆಗಾಗಿ ಭಾರತ ತೆಗೆದುಕೊಂಡಿರುವ ಕ್ರಮಗಳನ್ನು ಜಾಗತಿಕ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದೂ ಅದು ಹೇಳಿದೆ.
ಆದಾಗ್ಯೂ, ಹೆಣ್ಣು ಮಕ್ಕಳಿಗೆ ಹಾನಿ ತರುವ ಅಭ್ಯಾಸಗಳು ಹಾಗೂ 10ರ ಹರೆಯದಲ್ಲೇ ಆರಂಭವಾಗುವ ಅವರ ಮಾನವಹಕ್ಕು ಉಲ್ಲಂಘನೆಗಳು ಮುಂದುವರಿಯುತ್ತಿವೆ ಹಾಗೂ ಹೆಣ್ಣು ಮಕ್ಕಳು ವಯಸ್ಕರಾದಾಗ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದಕ್ಕೆ ಈ ಪದ್ಧತಿಗಳು ಅಡ್ಡಿಯಾಗುತ್ತಿವೆ ಎಂದು ‘ಜಾಗತಿಕ ಜನಸಂಖ್ಯೆ ಸ್ಥಿತಿ 2016’ ಎಂಬ ವರದಿಯಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಹೇಳಿದೆ.
Next Story





