‘ಬೋಳಂತಕೋಡಿ ಪ್ರಶಸ್ತಿ’ಗೆ ನಿರ್ಮಲಾ ಸುರತ್ಕಲ್ ಆಯ್ಕೆ
ಪುತ್ತೂರು, ಅ.20: ಬೋಳಂತಕೋಡಿ ಅಭಿಮಾನಿ ಬಳಗದ ವತಿಯಿಂದ ನೀಡಲಾಗುವ ‘ಬೋಳಂತಕೋಡಿ ಕನ್ನಡ ಪ್ರಶಸ್ತಿ’ಗೆ ಕವಯಿತ್ರಿ ನಿರ್ಮಲಾ ಸುರತ್ಕಲ್ ಆಯ್ಕೆಯಾಗಿದ್ದಾರೆ. ಅ.24ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಸಂದರ್ಭ ದಿ.ಬೋಳಂತಕೋಡಿ ಈಶ್ವರ ಭಟ್ ಅವರ ಸಂಸ್ಮರಣೆ ನಡೆಯಲಿದೆ. ಕಸಾಪ ಪುತ್ತೂರು ಘಟಕದ ಸಹಯೋಗದಲ್ಲಿ ನಡೆಯುವ ಈ ಸಮಾರಂಭದಲ್ಲಿ ರಾಜೇಶ್ ಪವರ್ ಪ್ರೆಸ್ಸಿನ ಮಾಲಕ ಎಂ.ಎಸ್.ರಘುನಾಥ ರಾವ್ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ‘ಪುಸ್ತಕ ಹಬ್ಬ’ವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭ ನಿರ್ಮಲಾ ಸುರತ್ಕಲ್ ಅವರ ‘ಅಆಇಈಉ’ ಪುಸ್ತಕವನ್ನು ಬೆಂಗಳೂರಿನ ಪಕ್ಷಿ ಛಾಯಾ ಚಿತ್ರಗ್ರಾಹಕ ಹಸ ಬ್ಯಾಕೋಡ ಅನಾವರಣ ಮಾಡಲಿದ್ದಾರೆ. ಸಮಾರಂಭದ ಬಳಿಕ ‘ಕವಿ-ಕಾವ್ಯ ಗಾಯನ’ ಏರ್ಪಡಿಸಲಾಗಿದೆ.
Next Story





