ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹರೇಕಳ ಹಾಜಬ್ಬಗೆ ಸನ್ಮಾನ
ಮೂಡುಬಿದಿರೆ, ಅ.20: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ನನ್ನ ಬಾಲ್ಯ ಶಿಕ್ಷಣದಿಂದ ವಂಚಿತ ಆಗುವಂತಾಯಿತು. ಶಿಕ್ಷಣ ಸಿಗದವರು ಎಷ್ಟೆಲ್ಲ ಕಷ್ಟ ಅನುಭವಿಸುತ್ತಾರೆ ಎನ್ನುವುದನ್ನು ಬಲ್ಲೆ. ನಾನು ಕಿತ್ತಳೆ ಮಾರಿ ಶಾಲೆ ಅರಂಭಿಸಿದ್ದು, ಆ ಶಾಲೆಯಲ್ಲಿ ಮೂನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಖುಷಿ ನೀಡಿದೆ ಎಂದರು.
ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.
Next Story





