Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಲಿತ, ದಮನಿತರ ‘ಚಲೋ ಉಡುಪಿ’ ಮತ್ತು...

ದಲಿತ, ದಮನಿತರ ‘ಚಲೋ ಉಡುಪಿ’ ಮತ್ತು ವೈದಿಕಶಾಹಿಯ ಪ್ರತಿಕ್ರಿಯೆ

ಸುರೇಶ್ ಭಟ್, ಬಾಕ್ರಬೈಲ್ಸುರೇಶ್ ಭಟ್, ಬಾಕ್ರಬೈಲ್20 Oct 2016 11:58 PM IST
share
ದಲಿತ, ದಮನಿತರ ‘ಚಲೋ ಉಡುಪಿ’ ಮತ್ತು ವೈದಿಕಶಾಹಿಯ ಪ್ರತಿಕ್ರಿಯೆ

ಭಾಗ- 1

ಅಸ್ಪಶ್ಯರನ್ನು ಹಿಂದೂ ಧರ್ಮದ ತೆಕ್ಕೆಯೊಳಗೆ ಇರಿಸಿಕೊಳ್ಳದಿದ್ದಲ್ಲಿ ಮೇಲ್ಜಾತಿ ಹಿಂದೂಗಳಿಗೆ ಇನ್ನಷ್ಟು ದುರಂತ ಕಾದಿದೆಯಲ್ಲದೆ ಅವರಿಂದ ನಮಗೆ ಸಿಗುವ ಪ್ರಯೋಜನಗಳು ಇಲ್ಲವಾಗಲಿವೆ.

- ವಿನಾಯಕ ದಾಮೋದರ ಸಾವರ್ಕರ್

ರಾಜ್ಯದ ದಲಿತ, ದಮನಿತರು ಒಂದಾಗಿ ‘‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’’ ಎಂಬ ಘೋಷವಾಕ್ಯದೊಂದಿಗೆ ಇದೇ ಅಕ್ಟೋಬರ್ 4ರಂದು ಬೆಂಗಳೂರಿನಿಂದ ಆರಂಭಿಸಿ 9ರಂದು ಉಡುಪಿಯಲ್ಲಿ ಸಮಾರೋಪಗೊಳಿಸಿದ ಅಭೂತಪೂರ್ವ ಹಾಗೂ ಅತ್ಯಂತ ಮಹತ್ವಪೂರ್ಣ ‘ಚಲೋ ಉಡುಪಿ’ ಜಾಥಾ ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಡುವುದರಲ್ಲಿ ಅನುಮಾನವೇ ಇಲ್ಲ. ಬಹುಶಃ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕರ್ನಾಟಕದ ದಲಿತರು, ಹಿಂದುಳಿದವರು, ಆದಿವಾಸಿಗಳು, ಅಲ್ಪಸಂಖ್ಯಾತರು, ಸಮಾನಮನಸ್ಕರು, ಪ್ರಗತಿಪರರೆಲ್ಲ ಒಟ್ಟುಸೇರಿ ಶೋಷಕರ ವಿರುದ್ಧ ಧ್ವನಿ ಎತ್ತುತ್ತಾ ರಾಜ್ಯದ ನಾನಾ ಊರುಗಳಲ್ಲಿ ಸಂಚರಿಸಿ ಅಂತಿಮವಾಗಿ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಉಡುಪಿಯಲ್ಲಿ ನೆರೆದಿರುವುದು ಇದೇ ಮೊದಲ ಬಾರಿಗೆ. ‘ಚಲೋ ಉಡುಪಿ’ ಸಮಾಜದಲ್ಲಿ ಒಂದು ಸಂಚಲನ ಮೂಡಿಸುವುದರೊಂದಿಗೆ ವೈದಿಕಶಾಹಿಗಳ ಜಂಘಾಬಲ ಉಡುಗುವಂತೆ ಮಾಡಿದೆ ಎನ್ನುವುದಕ್ಕೆ ಅವರ ಅತಿಯಾದ ಪ್ರತಿಕ್ರಿಯೆಗಳೆ ಸಾಕ್ಷಿ. ಇವರ ಕಣ್ಣು ಕೆಂಪಾಗಿರುವುದಕ್ಕೆ ಉಡುಪಿ ಕೃಷ್ಣ ಮಠದಲ್ಲಿ ಪಂಕ್ತಿಭೇದ ನಿಲ್ಲದಿದ್ದಲ್ಲಿ ಮುತ್ತಿಗೆ ಹಾಕಲಾಗುವುದೆಂಬ ಹೇಳಿಕೆಯೇ ಕಾರಣವೆಂದು ಹೇಳಲಾಗುತ್ತಿದೆ. ಆದರೆ ಅಸಲಿಗೆ ದಲಿತ, ದಮನಿತರು ಈ ಪರಿಯಲ್ಲಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಪ್ರಾರಂಭಿಸಿರುವುದನ್ನು ಸಹಿಸಲಾಗದಿರುವುದೆ ಇದಕ್ಕೆ ಕಾರಣವಾಗಿದೆ. ಹಿಂದಿನಿಂದಲೂ ಇಂತಹ ಒಕ್ಕೂಟದ ವಿರುದ್ಧ ನಾನಾ ಮಸಲತ್ತುಗಳನ್ನು ಮಾಡುತ್ತಲೇ ಬಂದಿರುವ ವೈದಿಕಶಾಹಿ/ಹಿಂದೂತ್ವವಾದಿಗಳಿಗೆ ‘ಚಲೋ ಉಡುಪಿ’ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಮಾತ್ರವಲ್ಲ ಭಾರೀ ಭಯವನ್ನೂ ಮೂಡಿಸಿದೆ. ಏಕೆಂದರೆ ಇದು ಅಂತಿಮವಾಗಿ ಅವರ ಹಿಂದೂ ರಾಷ್ಟ್ರ ಸ್ಥಾಪನೆಯ ಅಜೆಂಡಾವನ್ನು ತಲೆಕೆಳಗು ಮಾಡಬಲ್ಲ ಬೆಳವಣಿಗೆಯಾಗಿದೆ. ಆದುದರಿಂದಲೆ ಮುತ್ತಿಗೆ ಅಥವಾ ಘೇರಾವ್ ಎಂಬ ಅಹಿಂಸಾತ್ಮಕ ಪ್ರತಿಭಟನಾ ಮಾರ್ಗವನ್ನು ಶಸ್ತ್ರಸಜ್ಜಿತ ಯುದ್ಧವೊ ಎಂಬಂತೆ ಬಿಂಬಿಸುವ ಮೂಲಕ ಸಮಾಜದಲ್ಲಿ ದಲಿತ, ದಮನಿತ ವಿರೋಧಿ ನಿಲುವನ್ನು ಹುಟ್ಟುಹಾಕುವ ಯತ್ನ ನಡೆದಿದೆ. ಪೇಜಾವರ ವಿಶ್ವೇಶತೀರ್ಥರ ತೀಕ್ಷ್ಣ ಪ್ರತಿಕ್ರಿಯೆಗಳು ಹೊರಬಿದ್ದ ಬೆನ್ನಲ್ಲೆ (ಅ)ನೈತಿಕ ಪೊಲೀಸರು, ಡೋಂಗಿ ಗೋರಕ್ಷಕರು, ಗೋಆಶ್ರಮಗಳಿಂದ ಜಾನುವಾರುಗಳನ್ನು ಕಸಾಯಿಗಳಿಗೆ ಮಾರುವವರು, ಸೌಹಾರ್ದ ಸಮಾಜಕ್ಕಾಗಿ ಶ್ರಮಿಸುವವರನ್ನು ನಾಡಿನ ನಕ್ಸಲೈಟರೆಂದು ಕರೆಯುತ್ತಿರುವವರು, ಕೋಮು ದಂಗೆ ಹುಟ್ಟುಹಾಕಲು ಯತ್ನಿಸುವವರು ಮುಂತಾದವರೆಲ್ಲ ಪೇಜಾವರರ ಬೆಂಬಲಕ್ಕೆ ಧಾವಿಸಿರುವುದು ಚಂಪಾ ದಯಪಾಲಿಸಿದಂಥಾ ‘ಕೋಮುವಾದಿಗಳ ಜಗದ್ಗುರು’ ಎಂಬ ಬಿರುದನ್ನು ಸಾರ್ಥಕ ಗೊಳಿಸಿರುವುದಕ್ಕೆ ಪುರಾವೆಯಂತಿಲ್ಲವೇ? ಈ ಸಂದರ್ಭದಲ್ಲಿ ಹಿಂದಿನ ಕೆಲವೊಂದು ಘಟನೆಗಳನ್ನು ಮೆಲುಕುಹಾಕುವ ಆವಶ್ಯಕತೆ ಇದೆ ಅನಿಸುತ್ತದೆ.


ಬಾಬರಿ ಮಸೀದಿ ಧ್ವಂಸ ಮೊದಲಿಗೆ ರಾಮ ಮಂದಿರ ನಿರ್ಮಾಣದ ವಿಚಾರವನ್ನು ಎತ್ತಿಕೊಂಡರೆ ಅದೀಗ ಕೇವಲ ಚುನಾವಣೆಗಳ ಕಾಲಕ್ಕಷ್ಟೆ ಸೀಮಿತವಾಗಿರುವುದು ಅದರ ಹಿಂದಿರುವ ಅಪ್ಪಟ ರಾಜಕೀಯ ಉದ್ದೇಶಗಳನ್ನು ಬಹಳ ಸ್ಪಷ್ಟವಾಗಿ ತೋರಿಸುತ್ತದೆ. ತನಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎನ್ನುವ ಪೇಜಾವರರು ಇದೇ ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ನಡೆದಂಥಾ ಬಾಬರಿ ಮಸೀದಿ ಧ್ವಂಸಕೃತ್ಯವನ್ನು ಸಮರ್ಥಿಸಿದವರು. ‘‘ಬಾಬರಿ ಮಸೀದಿಯನ್ನು ನೆಲಸಮ ಮಾಡಿದ್ದು ಸರಿಯಾಗಿಯೆ ಇತ್ತು, ಅದರಿಂದ ನಮಗೆ ಸಮಾಧಾನ ಆಗಿತ್ತು’’ (ವಾರ್ತಾಭಾರತಿ, 23.11.2015) ಎಂದು ಅವರೇ ತಿಳಿಸಿದ್ದಾರೆ. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲ್ಲಿ ಜಮಾಯಿಸಿದ್ದ ಲಕ್ಷಾಂತರ ಕರಸೇವಕರಿಗೆ ಸಂಕಲ್ಪವಿಧಿ ಬೋಧಿಸುತ್ತಿದ್ದಾಗ ಉಪಸ್ಥಿತರಿದ್ದ ಸಾಧುಸಂತರಲ್ಲಿ ಉಡುಪಿ ಶಂಕರಾಚಾರ್ಯರೂ (ಪೇಜಾವರ ಸ್ವಾಮಿ) ಒಬ್ಬರೆಂದು ಮಾಜಿ ಬಿಜೆಪಿ ಸಂಸದ ಮಹಾಂತ್ ರಾಮ್ ವಿಲಾಸ್ ವೇದಾಂತಿ ಎಂಬಾತ ಕೋಬ್ರಾಪೋಸ್ಟ್‌ನ ಕುಟುಕು ಕಾರ್ಯಾಚರಣೆಯೊಂದರಲ್ಲಿ (ಆಪರೇಷನ್ ಜನ್ಮಭೂಮಿ) ಹೇಳಿದ್ದಾರೆ. ಮಸೀದಿ ಧ್ವಂಸ ಪ್ರಕರಣದಲ್ಲಿ ಪೇಜಾವರ ಸ್ವಾಮಿಯ ಶಿಷ್ಯ ಅಂದಿನ ಪ್ರಧಾನಿ ನರಸಿಂಹ ರಾವ್ ವಹಿಸಿದ ಪಾತ್ರದ ಕುರಿತು ವೇದಾಂತಿ ಹೀಗಂದಿದ್ದಾರೆ: ನರಸಿಂಹ ರಾವ್ ಡಿಸೆಂಬರ್ 6ರ ಬೆಳಗ್ಗೆ 6 ಗಂಟೆಗೆ ನನಗೆ ಫೋನ್ ಮಾಡಿದರು...... ಅವರು 15 ದಿನಗಳ ಹಿಂದೆ ನನಗೆ ಕರೆಮಾಡಿ ವೇದಾಂತಿಜೀ ಏನಾಗಲಿದೆ? ಎಂದು ಕೇಳಿದ್ದರು...... ಕಟ್ಟಡದ ಬಗ್ಗೆ ಏನು ತೀರ್ಮಾನ ತೆಗೆದುಕೊಂಡಿರುವಿರಿ ಎಂದು ಕೇಳಿದರು...... ನಂತರ ಅದನ್ನು ಪೂರ್ತಿಯಾಗಿ ಕೆಡವಬೇಕೆಂದು ಹೇಳಿದರು.

ಧ್ವಂಸಕೃತ್ಯದ ಪ್ರತ್ಯಕ್ಷದರ್ಶಿಯಾಗಿರುವ ಬಿಜೆಪಿಯ ಸಾಕ್ಷಿ ಮಹಾರಾಜ್ ಪ್ರಕಾರ ‘‘ಉಡುಪಿ ಶಂಕರಾಚಾರ್ಯ ಜಗದ್ಗುರು ವಿಶ್ವೇಶತೀರ್ಥಜೀ ಮಹಾರಾಜ್...... ಹಿಂದಿ ಅರಿಯದ ಮಂದಿಯನ್ನು ಅಲ್ಲಿ ಅಯೋಧ್ಯೆಯಲ್ಲಿ ಒಟ್ಟುಗೂಡಿಸಿದ್ದರು...... ಉಡುಪಿಯ ಶಂಕರಾಚಾರ್ಯರು ಮಸೀದಿಯ ಮುಖ್ಯದ್ವಾರದ ಮೇಲೆ ನಿಂತಿದ್ದರು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಂದ ಬಂದ ಕರಸೇವಕರು ಅಲ್ಲಿ ನೆರೆದಿದ್ದರು. ಅವರಿಗೆ ಹಿಂದಿ ಮಾತಾಡಲು ಬರುತ್ತಿರಲಿಲ್ಲ. ಕರಸೇವೆಯನ್ನು ಆರಂಭಿಸಿ ಮಸೀದಿ ಮೇಲೆ ಮೊದಲು ಹತ್ತಿದವರು ಇವರೇ............ ಹೊ.ವೆ. ಶೇಷಾದ್ರಿಯವರೂ ಅವರನ್ನು ತಡೆಯಲೆತ್ನಿಸಿದರು. ಆದರೆ ಉಡುಪಿ ಶಂಕರಾಚಾರ್ಯರು ತಮ್ಮ ಕನ್ನಡ ಭಾಷೆಯಲ್ಲಿ ಅದೇನೋ ‘ಕುಡ್ಸೇವ, ಕುಡ್ಸೇವ’ ಎನ್ನುತ್ತಾ ಅವರನ್ನೆಲ್ಲ ಪ್ರಚೋದಿಸುತ್ತಿದ್ದರು.’’ ಬಜರಂಗದಳದ ಮಾತೃಸಂಘಟನೆಯಾದ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕನೂ, ರಾಮ ಜನ್ಮಭೂಮಿ ಹೋರಾಟದ ರೂವಾರಿಯೂ ಆಗಿದ್ದ ಅಶೋಕ್ ಸಿಂಘಾಲ್‌ಗೆ 2015ರ ನವೆಂಬರ್ 22ರಂದು ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲೊಂದು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಸ್ವಾಮಿ ಒಂದು ಶುದ್ಧ ಅಹಿಂಸಾತ್ಮಕ ಚಳವಳಿಯಾಗಿದ್ದ ಉಪ್ಪಿನ ಸತ್ಯಾಗ್ರಹವನ್ನು ಹಿಂಸಾತ್ಮಕ ಕಾರ್ಯಾಚರಣೆಯಾಗಿದ್ದ ರಾಮ ಜನ್ಮಭೂಮಿ ಹೋರಾಟದೊಂದಿಗೆ ಸಮೀಕರಿಸಿದ್ದಾರೆ. ‘‘ಗಾಂಧಿಯವರದ್ದು ಉಪ್ಪಿನ ಸತ್ಯಾಗ್ರಹವಾದರೆ ರಾಮ ಜನ್ಮಭೂಮಿ ಹೋರಾಟ ಸಕ್ಕರೆ ಸತ್ಯಾಗ್ರಹ’’ (ವಿಜಯ ಕರ್ನಾಟಕ, 23.11.2015) ಎನ್ನುವ ಮೂಲಕ ಕಾನೂನುಬಾಹಿರ ಕೃತ್ಯವೊಂದಕ್ಕೆ ನ್ಯಾಯಸಮ್ಮತತೆಯ ಸಕ್ಕರೆ ಲೇಪನ ನೀಡಲೆತ್ನಿಸಿದ್ದಾರೆ.

ಪಂಕ್ತಿಭೇದ, ಅಸ್ಪಶ್ಯತೆ, ಬ್ರಾಹ್ಮಣಶ್ರೇಷ್ಠತೆ
ಪೇಜಾವರರು ‘‘ಲಿಂಗ ದೀಕ್ಷೆ ಪಡೆಯದವರ ಜೊತೆ ಭೋಜನ ಮಾಡುವುದು ಏಳು ಜನ್ಮಗಳ ನರಕಕ್ಕೆ ಕಾರಣವಾಗುತ್ತದೆ’’ ಎಂದು ಬಸವಣ್ಣನವರನ್ನು ತಪ್ಪುತಪ್ಪಾಗಿ ಉಲ್ಲೇಖಿಸುವ ಮೂಲಕ ತನ್ನ ಜೀವಮಾನದುದ್ದಕ್ಕೂ ಬ್ರಾಹ್ಮಣಶ್ರೇಷ್ಠತೆ ಮತ್ತು ಜಾತಿವ್ಯವಸ್ಥೆ ವಿರುದ್ಧ ಹೋರಾಡಿದ್ದ ಆ ಮಹಾನ್ ಮಾನವತಾವಾದಿಯನ್ನು ಪರೋಕ್ಷವಾಗಿ ಜಾತಿವಾದಿ ಎಂದಿರುವುದು ಬೌದ್ಧಿಕ ದಾರಿದ್ರ್ಯದ ಸಂಕೇತವೆ ಅಥವಾ ದುರುದ್ದೇಶಪ್ರೇರಿತ ಹೇಳಿಕೆಯೇ? ಉಡುಪಿ ಮಠದಲ್ಲಿ ಪಂಕ್ತಿಭೇದ ಆಚರಿಸಲಾಗುತ್ತಿದೆಯೆ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಪೇಜಾವರರು, ಮಠಕ್ಕೆ ಬರುವ ಕೆಲವು ಸಂಪ್ರದಾಯಸ್ಥ ಬ್ರಾಹ್ಮಣರು ಪ್ರತ್ಯೇಕವಾಗಿ ಊಟ ಮಾಡಲು ಬಯಸುವುದರಿಂದ ಅವರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಇದೆ ಎಂಬ ಕೂದಲು ಸೀಳುವ ವಿವರಣೆ ನೀಡುತ್ತಾರೆ. ಹೀಗೆ ಪಂಕ್ತಿಭೇದ ಮಾಡುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾ ಅದಕ್ಕೆ ಸಮರ್ಥನೆಯಾಗಿ ಬೇರೆ ಕಡೆಗಳಲ್ಲೂ ಪಂಕ್ತಿಭೇದ ಆಚರಿಸುತ್ತಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ 2014ರಲ್ಲಿ ಇದೇ ಕೃಷ್ಣ ಮಠದಲ್ಲಿ ಓರ್ವ ಬಂಟ ಸಮುದಾಯದ ಮಹಿಳೆಯನ್ನು ಪಂಕ್ತಿಯಿಂದ ಎಬ್ಬಿಸಿರುವ ಘಟನೆಯ ಬಗ್ಗೆ ಮಾತನಾಡುವುದಿಲ್ಲ!

share
ಸುರೇಶ್ ಭಟ್, ಬಾಕ್ರಬೈಲ್
ಸುರೇಶ್ ಭಟ್, ಬಾಕ್ರಬೈಲ್
Next Story
X