ನಿಮ್ಮ ಬ್ಯಾಂಕ್ ಖಾತೆಯ ಸುರಕ್ಷತೆ ಹೇಗೆ ?
ಡೆಬಿಟ್ ಕಾರ್ಡ್ ವಂಚನೆ

ನಿಮ್ಮನ್ನು ವಂಚಿಸುವ ಈ ಉಪಾಯಗಳ ಬಗ್ಗೆ ತಿಳಿದುಕೊಳ್ಳಿ
ದೇಶದಲ್ಲಿ ಇತ್ತೀಚೆಗೆ ಬ್ಯಾಂಕ್‌ಗಳು ಗ್ರಾಹಕರನ್ನು ತಮ್ಮ ಭದ್ರತಾ ಕೋಡ್‌ಗಳನ್ನು ಬದಲಿಸುವಂತೆ ಕೇಳಿಕೊಳ್ಳುತ್ತಿವೆ. ಸುಮಾರು 3.25 ಲಕ್ಷ ಡೆಬಿಟ್ ಕಾರ್ಡ್‌ಗಳು ಮತ್ತು ಕಾರ್ಡ್ ವಿವರಗಳು ಈಗ ಕದ್ದು ಹೋಗುವ ಭೀತಿಯಲ್ಲಿವೆ. ಇದು ಒಂದು ಅತೀ ದೊಡ್ಡ ಸೈಬರ್ ಸೆಕ್ಯುರಿಟಿ ಪ್ರಕರಣವೆಂದೇ ಹೇಳಬಹುದು.
ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋದರೆ ಅಥವಾ ಕದ್ದು ಹೋದರೆ?

ಮೊದಲನೆಯದಾಗಿ ಕದ್ದು ಹೋದಲ್ಲಿ ಅಥವಾ ಕಳೆದು ಹೋಗುವುದು ಸಾಮಾನ್ಯ. ಆದರೆ ತಕ್ಷಣವೇ ನೀವು ಬ್ಯಾಂಕಿಗೆ ಸುದ್ದಿ ತಿಳಿಸಬೇಕು. ಹೀಗೆ ಮಾಡುವುದರಿಂದ ಹಾನಿಯನ್ನು ಕಡಿಮೆ ಮಾಡಬಹುದು.
ಕಾರ್ಡ್ ಇರುವಾತ ಬಯಸದೆಯೇ ಬ್ಯಾಂಕ್ ಮಾಹಿತಿ ಕೊಟ್ಟಾಗ

ಇದನ್ನು ಅಕೌಂಟ್ ಮೇಲೆ ನಿಯಂತ್ರಣ ಸಾಧಿಸುವುದು ಎನ್ನುತ್ತಾರೆ. ಅಂದರೆ ಒಬ್ಬ ಕಾರ್ಡ್ ಹೋಲ್ಡರ್ ಬಯಸದೆಯೇ ವಂಚಕನಿಗೆ ತನ್ನ ಖಾಸಗಿ ಮಾಹಿತಿ ಹಂಚಿಕೊಂಡಾಗ (ಮನೆ ವಿಳಾಸ) ಆತ ಬ್ಯಾಂಕನ್ನು ಸಂಪರ್ಕಿಸುತ್ತಾನೆ. ಕಾರ್ಡ್ ಕಳೆದು ಹೋಗಿರುವುದು ಅಥವಾ ವಿಳಾಸ ಬದಲಾಗಿರುವುದಾಗಿ ಬ್ಯಾಂಕಿಗೆ ವಿಷಯ ತಿಳಿಸುತ್ತಾನೆ. ಹಾಗೆ ಖಾತೆ ಹೊಂದಿದವನ ಹೆಸರಲ್ಲಿ ಹೊಸ ಕಾರ್ಡನ್ನು ಪಡೆದುಕೊಳ್ಳುತ್ತಾನೆ.
ಡೆಬಿಟ್ ಕಾರ್ಡ್ ನಕಲಿ

ಮೂರನೆಯದಾಗಿ ಡೆಬಿಟ್ ಕಾರ್ಡ್‌ನ ನಕಲು ಮಾಡಿ ಮತ್ತೊಬ್ಬ ವ್ಯಕ್ತಿ ಅದರಿಂದ ಖರೀದಿಗಳನ್ನು ಮಾಡುವುದು. ಏಷ್ಯಾ- ಪೆಸಿಫಿಕ್‌ನಲ್ಲಿ ಶೇ. 10-15ರಷ್ಟು ವಂಚನೆಯು ಈ ಕಾರ್ಡ್ ಸ್ಕಿಮ್ಮಿಂಗ್ ಎಂದು ಕರೆಯಲಾಗುವ ಇಂತಹ ದುಷ್ಕೃತ್ಯದಿಂದಲೇ ಆಗುತ್ತಿದೆ.
ಕಾರ್ಡ್‌ನ್ನು ಅಂಚೆಯಿಂದ ಕದಿಯುವುದು

ನಾಲ್ಕನೆಯದು ಕಾರ್ಡನ್ನು ಮಾಲಕ ಎಂದೂ ಪಡೆಯದೆ ಇರುವುದು. ಒಂದು ಹೊಸ ಅಥವಾ ಬದಲಿ ಕಾರ್ಡ್ ಅಂಚೆಯಲ್ಲಿ ಬಂದಾಗ ಅದನ್ನು ಕದಿಯುವುದು. ಈ ಕಾರ್ಡ್ ನಿಜ ಮಾಲಕನಿಗೆ ತಲುಪುವುದೇ ಇಲ್ಲ.
ವಂಚಕ ಮತ್ತೊಬ್ಬ ವ್ಯಕ್ತಿಯ ಹೆಸರು ಬಳಸುವುದು

ಐದನೆಯದಾಗಿ ವಂಚಕ ಮತ್ತೊಬ್ಬ ವ್ಯಕ್ತಿಯ ಹೆಸರು ಮತ್ತು ಮಾಹಿತಿಯನ್ನು ಬಳಸಿ ಅರ್ಜಿ ಹಾಕಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುತ್ತಾನೆ.
ಒಂದೇ ವ್ಯವಹಾರ ಹಲವು ಬಾರಿ ಕಂಡಾಗ

ಮಲ್ಟಿಪಲ್ ಇಂಪ್ರಿಂಟ್ ಎನ್ನುವುದು ಹೊಸ ರೀತಿಯ ವಂಚನೆ. ಒಂದೇ ಹಣದ ವ್ಯವಹಾರವು ಹಲವು ಬಾರಿ ಹಳೇ ಶೈಲಿಯ ಕ್ರೆಡಿಟ್ ಕಾರ್ಡ್ ಇಂಪ್ರಿಂಟ್ ಯಂತ್ರಗಳಲ್ಲಿ ಮತ್ತೆ ಮತ್ತೆ ದಾಖಲಾಗುವುದನ್ನು ನಕಲ್ ಬಸ್ಟರ್ ಎಂದು ಕರೆಯಲಾಗಿದೆ.
ವ್ಯಾಪಾರಿಗಳು ವಂಚಕನ ಜೊತೆಗೆ ಕೆಲಸ ಮಾಡಿ ಮೋಸ ಮಾಡುವುದು

ಏಳನೆಯದು ಜೊತೆಗೂಡಿ ವಂಚಿಸುವ ವ್ಯಾಪಾರಿಗಳು. ಒಬ್ಬ ವ್ಯಾಪಾರಿಯು ವಂಚಕನ ಜೊತೆಗೆ ಕೆಲಸ ಮಾಡಿ ಬ್ಯಾಂಕ್‌ಗಳನ್ನು ವಂಚಿಸುತ್ತಾನೆ.
ಕೃಪೆ: http://www.news18.com/







