ಅ.23ರಿಂದ ಬೊಂದೆಲ್ ಲಾಫರ್ ಕ್ಲಬ್ ಪುನಾರಂಭ

ಮಂಗಳೂರು, ಅ.21: ಬೊಂದೆಲ್ ಲಾಫರ್ ಕ್ಲಬ್‌ನ ಮಾನ್ಸೂನ್ ನಂತರದ ಚಟುವಟಿಕೆಗಳ ಉದ್ಘಾಟನೆಯು ಅ.23ರಂದು ಬೊಂದೆಲ್ ಹೌಸಿಂಗ್ ಬೋರ್ಡ್ ಕಾಲನಿಯ ಮೈದಾನದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 7:30ಕ್ಕೆ ಮನಪಾ ಮೇಯರ್ ಹರಿನಾಥ್ ಕ್ಲಬ್ ಪುನಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಕ್ಲಬ್‌ನ ನಿರ್ವಾಹಕ ಜೋನ್ ಮೊಂತೇರೊ 2002ರಲ್ಲಿ ಬೊಂದೆಲ್ ಬಸ್ ಜಂಕ್ಷನ್‌ನಲ್ಲಿ ಪ್ರಾರಂಭಿಸಿದ ಈ ಸಂಚಾರಿ ಕ್ಲಬ್, ನಂತರದ ದಿನಗಳಲ್ಲಿ ಎಂಜಿಸಿ ಶಾಲೆಯ ಬಳಿಯ ಬೊಂದೆಲ್ ಮೈದಾನ, ಕದ್ರಿ ಗಾರ್ಡನ್‌ನಲ್ಲಿ ಬಳಿಕ ಹೌಸಿಂಗ್ ಬೋರ್ಡ್ ನಿವೇಶನದಲ್ಲಿ ಅವಧಿಗಳನ್ನು ನಡೆಯುತ್ತಿತ್ತು.ಮಳೆಗಾಲದಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಸ್ಥಗಿತಗೊಂಡಿದ್ದ ಲಾಫರ್ ಕ್ಲಬ್ ಚಟುವಟಿಕೆ ರವಿವಾರದಿಂದ ಮತ್ತೆ ಆರಂಭಗೊಳ್ಳಲಿದೆ. ಪ್ರತಿದಿನ ಬೆಳಗ್ಗೆ 6ರಿಂದ 20 ನಿಮಿಷಗಳ ಕಾಲ ನಡೆಯುವ ಈ ಲಾಫರ್ ಅವಧಿಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9886276608 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿ
Next Story





