Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಕನಕ ನಡೆ’ ನಡೆಸಿದರೆ, ಅದೇ ದಿನ...

‘ಕನಕ ನಡೆ’ ನಡೆಸಿದರೆ, ಅದೇ ದಿನ ಸ್ವಾಭಿಮಾನ ನಡಿಗೆ : ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಎಚ್ಚರಿಕೆ

ವಾರ್ತಾಭಾರತಿವಾರ್ತಾಭಾರತಿ21 Oct 2016 6:02 PM IST
share
‘ಕನಕ ನಡೆ’ ನಡೆಸಿದರೆ, ಅದೇ ದಿನ ಸ್ವಾಭಿಮಾನ ನಡಿಗೆ : ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಎಚ್ಚರಿಕೆ

ಮಂಗಳೂರು, ಅ.21: ಉಡುಪಿಯಲ್ಲಿ ಯುವ ಬ್ರಿಗೇಡ್ ಹಾಗೂ ಇತರ ರಾಜಕೀಯ ಪ್ರೇರಿತ ಸಂಘಟನೆಗಳು ನಡೆಸಲು ಮುಂದಾಗಿರುವ ‘ಕನಕ ನಡೆ’ ಅಸ್ಪಶ್ಯತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದ್ದು, ಅದನ್ನು ನಡೆಸಲು ಅವಕಾಶ ನೀಡಿದರೆ ಅದೇ ‘ಸ್ವಾಭಿಮಾನ ನಡಿಗೆ’ ನಡೆಸಲಾಗುವುದು ಎಂದು ಸ್ವಾಭಿಮಾನಿ ದಲಿತ ದಮನಿತರ ಸ್ವಾಭಿವಾನಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಯುವ ಸದಸ್ಯ ರಘುವೀರ್ ಸೂಟರ್‌ಪೇಟೆ, ಚಲೋ ಉಡುಪಿ ಕಾರ್ಯಕ್ರಮದದಿಂದ ಮಲಿನಗೊಂಡಿರುವ ಉಡುಪಿಯನ್ನು ಶುದ್ಧೀಕರಿಸೋಣವೆನ್ನುವ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಬಾಲಿಶವಾಗಿದೆ. ಈ ಮೂಲಕ ದಲಿತರನ್ನು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಇಂತಹ ಬಾಲಿಶ ಹೇಳಿಕೆ ನೀಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪಶ್ಚಿಮ ವಲಯ ಐಜಿಪಿಗೂ ದೂರು ನೀಡಲಾಗುವುದು. ಶತಮಾನಗಳಿಂದ ತುಳಿತಕ್ಕೊಳಗಾದ ದಲಿತರ ಮೇಲಿನ ಅಸ್ಪಶ್ಯತೆಯನ್ನು ಮುಂದೊಯ್ಯುವುದೇ ಈ ಕನಕ ನಡೆಯ ಉದ್ದೇಶ ಎಂಬುದು ಸ್ಪಷ್ಟವಾಗಿದೆ. ರಾಜಕೀಯ ಷಡ್ಯಂತ್ರಗಳ ಮೂಲಕ ದಲಿತರನ್ನು ದಾರಿತಪ್ಪಿಸುವ ವಿರುದ್ಧ ತುಳಿತಕ್ಕೊಳಗಾದ ವರ್ಗ ಎದ್ದು ನಿಂತಿದೆ. ಹಾಗಾಗಿ ಈ ಕಾರ್ಯಕ್ರಮವನ್ನು ನಿಲ್ಲಿಸಿ ಸಮಾಜದಲ್ಲಿ ಸಮಾನತೆಯನ್ನು ಎತ್ತಿ ಹಿಡಿಯಬೇಕಾಗಿದೆ. ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಾಗುವ ಪರಿಣಾಮಗಳಿಗೆ ರಾಜ್ಯ ಸರಕಾರವೇ ಹೊಣೆಯಾಗಲಿದೆ ಎಂದು ಅವರು ಹೇಳಿದರು.

ದಲಿತ ನಾಯಕ ಅಶೋಕ್ ಕೊಂಚಾಡಿ ಮಾತನಾಡಿ, ಉಡುಪಿ ಮಠಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂಬ ರೀತಿಯಲ್ಲಿ ಮನುವಾದಿಗಳು ಭಾವನಾತ್ಮಕವಾಗಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಮಠಕ್ಕೆ ಮುತ್ತಿಗೆ ಹಾಕುವ ಉದ್ದೇಶ ನಮಗಿಲ್ಲ. ಚಲೋ ಉಡುಪಿ ಕಾರ್ಯಕ್ರಮದಲ್ಲಿಯೂ ಆ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಊನಾ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿ ಆ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ಸಮಾಜದಲ್ಲಿ ಸಮಾನತೆಯ ಬದಲಾವಣೆ ಮಠದಿಂದಲೇ ಆಗಲಿ ಎಂಬ ಹೇಳಿಕೆ ಅವರದ್ದಾಗಿತ್ತು ಎಂದು ನುಡಿದರು. ಹೊರತು ಹೋರಾಟ ಸಮಿತಿಯ ನಿರ್ಣಯವಲ್ಲ ಎಂದು ಅಶೋಕ್ ಕೊಂಚಾಡಿ ನುಡಿದರು.

ಚಲೋ ಉಡುಪಿ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳಿಗೆ ಬೆಂಬಲ ಸೂಚಿಸಿದ್ದ ಸಮಾನ ಮನಸ್ಕ ಮುಸಲ್ಮಾನ ಬಾಂಧವರನ್ನು ಭಯೋತ್ಪಾದಕರಾಗಿ, ಪ್ರಗತಿಪರರನ್ನು ನಕ್ಸಲ್ ಬೆಂಬಲಿಗರೆಂದು ಬಿಂಬಿಸುವ ಕಾರ್ಯವೂ ನಡೆದಿದೆ. ದೇಶ ಪ್ರೇಮವೆಂದರೆ, ತುಳಿತಕ್ಕೊಳಗಾದ ಸಮುದಾಯ, ಅವರಿಗಾದ ಅನ್ಯಾಯದ ಪರ ಮಾತನಾಡುವುದೇ ವಿನಹ, ಭಾವನಾತ್ಮಕವಾಗಿ ಸಮಾಜವನ್ನು ಒಡೆಯುವುಲ್ಲ ಎಂದು ಅವರು ಅಭಿಪ್ರಾಯಿಸಿದರು.

ದಲಿತ ನಾಯಕರಿಗೆ ಆಮಿಷವೊಡ್ಡುವ ಕೆಲಸ ನಡೆಯುತ್ತಿದೆ ಎಂದು ಆಪಾದಿಸಿದ ಅಶೋಕ್ ಕೊಂಚಾಡಿ, ಅಂತಹವರು ನಕಲಿ ನಾಯಕರೇ ಹೊರತು, ಅವರು ಸಮಾಜವನ್ನು ಕಟ್ಟಿ ನ್ಯಾು ಕೊಟ್ಟಿರುವ ಉಲ್ಲೇಖವಿಲ್ಲ ಎಂದರು.

ಗೋಷ್ಠಿಯಲ್ಲಿ ದಲಿತ ಪರ ವಿವಿಧ ಸಂಘಟನೆಗಳ ನಾಯಕರಾದ ಸುರೇಶ್ ಭಟ್ ಬಾಕ್ರಬೈಲ್, ನಿರ್ಮಲ್ ಕುಮಾರ್, ರಮೇಶ್ ಕೋಟ್ಯಾನ್, ಎಸ್‌ಪಿ ಆನಂದ, ಹನ್ೀ ಖಾನ್, ಆನಂದ ಬೆಳ್ಳಾರೆ, ಎಂ. ದೇವದಾಸ್, ಗುಲಾಬಿ ಬಿಲಿಮಲೆ ಉಪಸ್ಥಿತರಿದ್ದರು.

ಸ್ವಚ್ಛ ಉಡುಪಿ ಎಂದರೆ, ಅಲ್ಲಿ ಮಲಿನವಾಗಿದೆಯೇ?

ಸ್ವಚ್ಛ ಉಡುಪಿಯ ಹೆಸರಿನಲ್ಲಿ ಕನಕ ನಡೆ ಆಯೋಜಿಸಲಾಗಿದ್ದು, ಹಾಗಾದರೆ ಅಲ್ಲಿ ಮಲಿನವಾಗಿದೆಯೇ? ಅದು ಚಲೋ ಉಡುಪಿ ಕಾರ್ಯಕ್ರಮದ ಬಳಿಕವೇ ಈ ಕಾರ್ಯಕ್ರಮ ನಡೆಸುವ ಉದ್ದೇಶವೇನು ಎಂದು ಅಶೋಕ್ ಕೊಂಚಾಡಿ ಪ್ರಶ್ನಿಸಿದರು.

ಈ ಹಿಂದೆ ಪರ್ಯಾಯ ನಡೆದಾಗ ಗಲೀಜಾಗಿದ್ದ ಉಡುಪಿಯನ್ನು ಸ್ವಚ್ಛಗೊಳಿಸಲು ಈ ಯುವ ಬ್ರಿಗೇಡ್ ಮುಂದಾಗದೆ ಈಗ ನಡೆಸುವುದಾದರೂ ಯಾತಕ್ಕೆ ಎಂಬ ಉದ್ದೇಶವನ್ನು ಅರಿಯಬಹುದಾಗಿದೆ. ನಮ್ಮ ಪೌರ ಕಾರ್ಮಿಕರು ದಿನ ಬೆಳಗಾದರೆ ನಗರವನ್ನು ಸ್ವಚ್ಛಗೊಳಿಸುತ್ತಾರೆ. ಹಾಗಾಗಿ ಕನಕ ನಡೆ ಕಾರ್ಯಕ್ರಮ ಅಸ್ಪಶ್ಯತೆಯ ಇನ್ನೊಂದು ಮುಖ ಎಂದು ಅವರು ಆಪಾದಿಸಿದರು.

ಕೊಲೆ ಮಾಡಿಸುವವರ ಜತೆಗಿರುವವರು ದಾರಿ ತೋರಿಸುವವರೇ?

ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ದೇಶಭಕ್ತಿಯ ಮೂಲಕ ಯುವಕರಿಗೆ ಒಳ್ಳೆಯ ದಾರಿ ತೋರಿಸುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಕೊಲೆ ಮಾಡಿಸಿ ಜೈಲಿಗೆ ಹೋದ ಆರೋಪಿಯ ಜತೆ ಕಾಣಿಸಿಕೊಳ್ಳುವವರು ಯುವಕರಿಗೆ ಒಳ್ಳೆಯ ದಾರಿ ತೋರಿಸುವವರೇ ಎಂದು ಸರ್ವ ಸಾಲೇಜು ವಿದ್ಯಾರ್ಥಿ ಸಂಘದ ಸಲೆಗಾರ ದಿನಕರ ಶೆಟ್ಟಿ ಪ್ರಶ್ನಿಸಿದರು.

ಭಾವನಾತ್ಮಕ ವಿಚಾರದಲ್ಲಿ ಯುವಕರನ್ನು ದಾರಿತಪ್ಪಿಸುವ ಕೆಲಸ ಮಾಡುವುದು ಬೇಡ, ಉಡುಪಿಯ ಪೇಜಾವರ ಶ್ರೀಗಳು ನಮ್ಮ ಗುರುಗಳು. ಮಠಕ್ಕೆ ಮುತ್ತಿಗೆ ಹಾಕುವುದಾಗಿ ನಾವೆಲ್ಲೂ ಹೇಳಿಲ್ಲ. ಚಲೋ ಉಡುಪಿ ಕಾರ್ಯಕ್ರಮಮದಲ್ಲಿ ಆ ಬಗ್ಗೆ ನಿರ್ಣಯವೂ ಆಗಿಲ್ಲ ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X