ಕುಂಬಳೆ: ಸೊಂಟದಲ್ಲಿ ತಲವಾರು ಬಚ್ಚಿಟ್ಟು ತಿರುಗಾಡುತ್ತಿದ್ದ ಯುವಕನ ಸೆರೆ

ಮಂಜೇಶ್ವರ,ಅ.21 : ಸೊಂಟದಲ್ಲಿ ತಲವಾರು ಬಚ್ಚಿಟ್ಟು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕುಂಟಂಗೇರಡ್ಕ ಅಬ್ಬಾಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕಬೀರ್ ಯಾನೆ ಹಂಸ(30) ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಕುಂಬಳೆ ಪೇಟೆ ಪರಿಸರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾಗ ಎಸ್.ಐ ಮೇಲ್ವಿನ್ ಜೋಸ್ ಕಸ್ಟಡಿಗೆ ತೆಗೆದು ತಪಾಸಣೆಗೈದಾಗ ಆತನ ಸೊಂಟದಲ್ಲಿ ತಲವಾರು ಬಚ್ಚಿಟ್ಟಿರುವುದು ಕಂಡು ಬಂದಿದೆ. ಈತ ನರಹತ್ಯಾ ಯತ್ನ ಸಹಿತ ಮೂರು ಪ್ರಕರಣಗಳಲ್ಲೂ ಆರೋಪಿಯಾಗಿದ್ದಾನೆಂದೂ ಪೊಲೀಸರು ತಿಳಿಸಿದ್ದಾರೆ.
Next Story





