ಟೇಪ್ ರೆಕಾರ್ಡರ್ ಕಳವು ಪ್ರಕರಣ :ಆರೋಪಿ ಖುಲಾಸೆ
ಮಂಗಳೂರು, ಅ. 21: ಗೂಡಂಗಡಿಯಿಂದ ಟೇಪ್ ರೆಕಾರ್ಡರ್ ಕಳವು ಮಾಡಿದ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ತೀರ್ಮಾನಿಸಿ ನಗರದ ಸಿಜೆಎಂ ಒಂದನೆ ಹೆಚ್ಚುವರಿ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ.
ಕಾಸರಗೋಡು ಜಿಲ್ಲೆಯ ದೊಡ್ಡಕೂಡ್ಲು ನಿವಾಸಿ ಶಶಿ ಯಾನೆ ಸತೀಶ್ ಎಂಬಾತ ಖುಲಾಸೆಗೊಂಡ ಆರೋಪಿ. ಹಸನ್ ಎಂಬವರ ಗೂಡಂಗಡಿಯಿಂದ ಟೇಪ್ ರೆಕಾರ್ಡರ್ ಕಳವು ಮಾಡಿದ ಆರೋಪವನ್ನು ಎದುರಿಸುತ್ತಿದ್ದ.
1995 ಜೂನ್ 15 ರಂದು ಹಸನ್ ಗೂಡಂಗಡಿಗೆ ಬೀಗ ಹಾಕಿ ಹೋಗಿದ್ದರು. 1995 ಜೂನ್ 27 ರಂದು ಅಂಗಡಿಗೆ ಬಂದಾಗ ಬೀಗ ಮುರಿದು ಟೇಪ್ ರೆಕಾರ್ಡರ್ ಕಳವಾಗಿರುವುದು ಗಮನಕ್ಕೆ ಬಂದಿತ್ತು. ಪರಿಚಿತನಾಗಿದ್ದ ಶಶಿ ಕಳವು ಮಾಡಿರಬೇಕೆಂದು ಶಂಕಿಸಿ ಹಸನ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗ್ರಾಮಾಂತರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶಧೀಶರು ವಿಚಾರಣೆಯನ್ನು ನಡೆಸಿ, ವಾದ ವಿವಾದ ಆಲಿಸಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಆ
ರೋಪಿ ಪರವಾಗಿ ನ್ಯಾಯವಾದಿ ತಲೆಕಾನ ರಾಧಾಕೃಷ್ಣ ಶೆಟ್ಟಿ ವಾದಿಸಿದ್ದರು.





