ಶಿಮಂತೂರು ರಸ್ತೆ ಮುಚ್ಚುಗಡೆ ವಿವಾದ ತುರ್ತು ಸಬೆ

ಮುಲ್ಕಿ,ಅ.21:ಕಳೆದ ದಿನಗಳ ಹಿಂದೆ ಶಿಮಂತೂರು ದೇವಳದ ಎದುರು ನಡೆದ ರಸ್ತೆ ತೆರವು ವಿವಾದದಲ್ಲಿ ಮೊದಲು ಇದ್ದ ರಸ್ತೆಯನ್ನು ಸಂಪೂರ್ಣ ಮುಚ್ಚಿದ ಪ್ರಕರಣಕ್ಕೆ ಸಂಂದಿಸಿದಂತೆ ಶಿಮಂತೂರು ದೇವಳದಲ್ಲಿ ತುರ್ತು ಸಬೆ ನಡೆದು ರಸ್ತೆ ತೆರವುಗೊಳಿಸಲುಮಂಗಳೂರು ಕಮಿಶನರ್‌ಗೆ ಒತ್ತಾಯ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಅಂಗರಗುಡ್ಡೆ- ಶಿಮಂತೂರು ಪ್ರಧಾನ ಮಂತ್ರಿ ಸಡಕ್‌ಯೋಜನೆಯ ರಸ್ತೆಗೆ ಶಿಮಂತೂರು ದೇವಳದ ಎದುರು ಖಾಸಗಿ ವ್ಯಕ್ತಿಯೊಬ್ಬರು ತಡೆ ಅರ್ಜಿ ಸಲ್ಲಿಸಿದ ಪ್ರಕರಣಕ್ಕೆ ಸಂಂದಿಸಿದಂತೆ ದೇವಳದ ಆಡಳಿತ ಮಂಡಳಿ ಹಾಗೂ ಖಾಸಗಿ ಜಮೀನಿನ ಮಾಲಿಕ ರಾಜೇಶ್ ಎಂಬವರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದ್ದು ಕಳೆದ ದಿನಗಳ ಹಿಂದೆ ನ್ಯಾಯಾಲಯದ ಆದೇಶದ ಮೇರೆಗೆ ದೇವಳದ ಆಡಳಿತ ಮಂಡಳಿ ಬಿಗುಬಂದೋಬಸ್ತು ನಡುವೆ ರಸ್ತೆ ತೆರವುಗೊಳಿಸಲು ಯತ್ನಿಸಿದಾಗ ಸೂಕ್ತ ದಾಖಲೆಗಳಿಲ್ಲದೆ ತೆರವು ವಿಪಲವಾಗಿತ್ತು.ಈ ಪ್ರರಣದಿಂದ ಸಮೀಪದಲ್ಲೇ ಇದ್ದ ಇನ್ನೊಂದು ರಸ್ತೆಯನ್ನೂ ರಾಜೇಶ್ ಕುಟುಂಬಸ್ಥರು ಮುಚ್ಚುಗಡೆ ಮಾಡಿದ್ದರ ಹಿನ್ನಲೆಯಲ್ಲಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿರುವ ದೇವಳದ ಆಡಳಿತ ಮಂಡಳಿ ರಸ್ತೆ ತಡೆ ತೆರವುಗೊಳಿಸಯೇ ಸಿದ್ದ ಎಂದು ಹೇಳಿದೆ. ಅಂಗರಗುಡ್ಡೆ ಪ್ರಧಾನ ಸಂಪರ್ಕ ರಸ್ತೆಯ ಮುಚ್ಚುಗಡೆಯಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ ಎಂದು ಹೇಳಿರುವ ಅಂಗರಗುಡ್ಡೆ ನಾಗರಿಕ ಸಮಿತಿಯು ಸಹಿಸಂಗ್ರಹಣೆ ನಡೆಸಿ ರಸ್ತೆ ತೆರವು ಸಂಬಂದ ಜಿಲ್ಲಾಧಿಕಾರಿ ಹಾಗೂ ಕಮಿಶನರ್‌ಗೆ ಮನವಿ ಸಲ್ಲಿಸಲಾಗುವುದು ಎಮದು ಹೇಳಿದ್ದಾರೆ.





