ಜಮ್ಮು ಗಡಿಯಲ್ಲಿ ಬಿಎಸ್‌ಎಫ್‌ನ ಪ್ರತಿದಾಳಿಗೆ ಏಳು ಪಾಕ್ ರೇಂಜರ್‌ಗಳು, ಓರ್ವ ಉಗ್ರ ಬಲಿ

ಜಮ್ಮು,ಅ.21: ಶುಕ್ರವಾರ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಹಿರಾನಗರ ವಿಭಾಗದಲ್ಲಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಿ ಪಡೆಗಳಿಗೆ ಗುಂಡಿನಿಂದಲೇ ಉತ್ತರಿಸಿದ ಬಿಎಸ್‌ಎಫ್ ಯೋಧರು ಏಳು ಪಾಕ್ ರೇಂಜರ್‌ಗಳು ಮತ್ತು ಓರ್ವ ಉಗ್ರನನ್ನು ಬಲಿ ತೆಗೆದುಕೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಗಾಯಗೊಂಡಿದ್ದಾನೆ.
ಪಾಕ್‌ಮಾಧ್ಯಮಗಳೂ ಈ ಸಾವುಗಳನ್ನು ದೃಢಪಡಿಸಿವೆ ಎಂದು ತಿಳಿಸಿದ ಬಿಎಸ್‌ಎಫ್ ಅಧಿಕಾರಿಯೋರ್ವರು,ಐವರು ಪಾಕ್ ರೇಂಜರ್‌ಗಳು ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿರುವುದನ್ನು ಅಲ್ಲಿಯ ಮಾಧ್ಯಮಗಳು ಪ್ರಕಟಿಸಿವೆ ಎಂದು ಹೇಳಿದರು.
ಗಾಯಗೊಂಡಿರುವ ಯೋಧ ಗುರ್ನಾಮ್ ಸಿಂಗ್ ಅವರ ಸ್ಥಿತಿ ಗಂಭೀರ ವಾಗಿದ್ದು,ಜಮ್ಮುವಿನ ಸರಕಾರಿವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





