ಒಡಿಶಾ: ಆರೋಗ್ಯ ಸಚಿವರ ರಾಜೀನಾಮೆ

ಭುವನೇಶ್ವರ,ಅ.21:ಇಲ್ಲಿಯ ಎಸ್‌ಯುಎಮ್ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಒಡಿಶಾದ ಆರೋಗ್ಯ ಸಚಿವ ಅತನು ಸವ್ಯಸಾಚಿ ನಾಯಕ್ ಅವರು ಶುಕ್ರವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ದುರಂತ 25 ಜೀವಗಳನ್ನು ಬಲಿ ತೆಗೆದುಕೊಂಡಿದೆ.
ನಾಯಕ್ ಅವರು ನೈತಿಕ ನೆಲೆಯಲ್ಲಿ ರಾಜೀನಾಮೆಯನ್ನು ಸಲ್ಲಿಸಿದ್ದು,ಅದನ್ನು ನಾನು ಸ್ವೀಕರಿಸಿದ್ದೇನೆ ಮತ್ತು ರಾಜ್ಯಪಾಲರಿಗೆ ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದರು. ದುರಂತದಲ್ಲಿ ಗಾಯಗೊಂಡಿದ್ದ ಇಬ್ಬರು ಗುರುವಾರ ರಾತ್ರಿ ಮತ್ತು ಇನ್ನಿಬ್ಬರು ಇಂದು ಕೊನೆಯುಸಿರೆಳೆದಿದ್ದು,ಸತ್ತವರ ಸಂಖ್ಯೆ 25ಕ್ಕೇರಿದೆ.
Next Story





