ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಂಜ್ಮೆಂಟ್ ಅಸೋಸಿಯೇಶನ್ನಿನ ನೂತನ ಪದಾಧಿಕಾರಿಗಳ ಆಯ್ಕೆ

ದೇರಳಕಟ್ಟೆ,ಅ.21:ಮದರಸ ಮ್ಯಾನೇಂಜ್ಮೆಂಟ್ ಅಸೋಸಿಯೇಶನ್ ದೇರಳಕಟ್ಟೆ ರೇಂಜ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮೊದಿನ್ ಕುಂಞ ಮರಾಠಿಮೂಲೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸ್ಥಳೀಯ ಖತೀಬರಾದ ಬಹು. ಅಶ್ರಫ್ ರಹ್ಮಾನಿ ಚೌಕಿ ಇವರು ದುವಾ: ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಕೇಂದ್ರ ಸಮಿತಿ ಸದಸ್ಯರುಗಳಾದ ಜನಾಬ್ ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಅಬೂಬಕ್ಕರ್ ಹಾಜಿ ಗೊಳತ್ತಮಜಲ್, ದ.ಕ ಜಿಲ್ಲಾ ಮದರಸ ಮ್ಯಾನೇಂಜ್ಮೆಂಟಿನ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ,ಕೋಶಾಧಿಕಾರಿ ಮೆಟ್ರೊ ಶಾಹುಲ್ ಹವಿೂದ್ ಹಾಜಿ, ರೇಂಜ್ ಮದರಸ ಮ್ಯಾನೆಜ್ಮೆಂಟಿನ ಮಾಜಿ ಅಧ್ಯಕ್ಷರಾದ ಕೆ. ಹೆಚ್ ಹುಸೈನ್ ಕುಂಞ ಹಾಜಿ, ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಬಹು ಲತೀಫ್ ದಾರಿಮಿ ರೆಂಜಾಡಿ ಕಾರ್ಯದರ್ಶಿ ಬಹು ಫಾರೂಕ್ ದಾರಿಮಿ ಗ್ರಾಮಚಾವಡಿ. ಸ್ಥಳೀಯ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಹಾಗೂ ರೇಂಜ್ ವ್ಯಾಪ್ತಿಯಲ್ಲಿನ 30 ಮಿಕ್ಕ ಮದರಸದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ವರದಿ ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು. ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಇದೇ ಸಂದರ್ಭದಲ್ಲಿ 2016-17 ಹಾಗೂ 2017-18ನೇ ಸಾಲಿನ ನೂತನ ಪಧಾದಿಕಾರಿಗಳಾಗಿ:
1.ಅಬ್ಬಾಸ್ ಹಾಜಿ ಕೆ ಮಜಲ್-(ಗೌರವ ಅಧ್ಯಕ್ಷರು)
2.ಹಾಜಿ ಮೊದಿನ್ ಕುಂಞ ಮರಾಠಿಮೂಲೆ-(ಅಧ್ಯಕ್ಷರು)
3.ಇಬ್ರಾಹಿಂ ಕೊಣಾಜೆ- (ಪ್ರಧಾನಕಾರ್ಯದರ್ಶಿ)
4.ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್-(ಕೋಶಾಧಿಕಾರಿ)
5.ಹಾಜಿ ಅಬೂಬಕ್ಕರ್ ಸ್ಬಾಗತ್-(ಉಪಾಧ್ಯಕ್ಷರು)
6.ಹಾಜಿ ಎಮ್ ಎ ಅಬ್ದುಲ್ಲಾ ಬೆಳ್ಮ-(ಉಪಾಧ್ಯಕ್ಷರು)
7.ಹೆಚ್ ಎಮ್ ಮಹಮ್ಮದ್ ಮಾಸ್ಟರ್-(ಕಾರ್ಯದರ್ಶಿ)
8.ಹವಿೂದ್ ಮದ್ಪಾಡಿ-(ಪತ್ರಿಕಾ ಕಾರ್ಯದರ್ಶಿ)
ಹಾಗೂ ರೇಂಜಿನ ವ್ಯಾಪ್ತಿಯಲ್ಲಿನ 33 ಮದರಸದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳನ್ನೊಳಗೊಂಡ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯ್ತು.





