ಅ.24ರಂದು ರಸ್ತೆ ತಡೆ, ಪ್ರತಿಭಟನೆ
ಮಂಗಳೂರು, ಅ.21: ಹದಗೆಟ್ಟಿರವ ಸುರತ್ಕಲ್-ಕಾನ ಎಂಆರ್‌ಪಿಎಲ್ ರಸ್ತೆಯ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವತಿಯಿಂದ ಅ.24ರಂದು ಬೆಳಗ್ಗೆ 10ಕ್ಕೆ ಸಂಪೂರ್ಣ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದೆ.
ಕಳೆದ ಹಲವು ತಿಂಗಳಿಂದ ವಿವಿಧ ವಾಹನಗಳು ಹಾದು ಹೋಗುವ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಡಿಲ್ಲ. ಹೊಂಡಮಯವಾಗಿರುವ ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಎಚ್ಚರಿಸುವ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಪ್ರಕಟನೆ ತಿಳಿಸಿದೆ.
Next Story





