ಇಂದಿನ ಕಾರ್ಯಕ್ರಮಗಳು ಉಡುಪಿ ಜಿಲ್ಲೆ
ಕಾರ್ಯಾಗಾರ: ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಆಶ್ರಯದಲ್ಲಿ ಮದ್ಯವ್ಯಸನಿಗಳ ಮಕ್ಕಳ ಮಾಸಿಕ ಸಭೆ ಹಾಗೂ ‘ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹದ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸುವುದು ಹೇಗೆ?’ ಎಂಬ ವಿಷಯದ ಕುರಿತು ಕಾರ್ಯಾಗಾರ. ಸಮಯ: ಅಪರಾಹ್ನ 2ಕ್ಕೆ. ಸ್ಥಳ: ಕಾರ್ಪೊರೇಷನ್ ಬ್ಯಾಂಕ್‌ನ ಹೆರಿಟೇಜ್ ಮ್ಯೂಸಿಯಂ ಉಡುಪಿ.
ತಿಂಗಳ ಚಿತ್ರ: ಉಡುಪಿ ಚಿತ್ರ ಸಮಾಜದಿಂದ ಅಕ್ಟೋಬರ್ ತಿಂಗಳ ಚಿತ್ರವಾಗಿ ಸತ್ಯಜಿತ್ ರೇ ಅವರ ರಬೀಂದ್ರನಾಥ್ ಠಾಗೋರ್ ಅವರ ಕಾದಂಬರಿ ಆಧಾರಿತ ಬಂಗಾಳಿ ಚಿತ್ರ ‘ಘರೇ ಬೈರೇ’ ಪ್ರದರ್ಶನ. ಸಮಯ: ಸಂಜೆ 5:15ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ಆಡಿಯೋ ವಿಜ್ಯುವೆಲ್ ಹಾಲ್, ಉಡುಪಿ.
ಧೋಲ್ ಬಾಜೆ: ರೋಟರ್ಯಾಕ್ಟ್ ಕ್ಲಬ್ ಮಣಿಪಾಲ ಹಾಗೂ ರೋಟರ್ಯಾಕ್ಟ್ ಕ್ಲಬ್ ಮಣಿಪಾಲ ವಿವಿ ಇವುಗಳ ವತಿಯಿಂದ ‘ಧೋಲ್‌ಬಾಜೆ’ ಕಾರ್ಯಕ್ರಮ. ಸಮಯ: ಸಂಜೆ: 7:30ರಿಂದ. ಸ್ಥಳ: ಕೆಎಂಸಿ ಗ್ರೀನ್ಸ್, ಮಣಿಪಾಲ.
ರಜತ ವೈಭವ: ಜೆಸಿಐ ಉಡುಪಿ ನಗರದ ವತಿಯಿಂದ ರಜತ ವೈಭವದ ಉದ್ಘಾಟನೆ. ಸಮಯ: ಸಂಜೆ 6ಕ್ಕೆ. ಸ್ಥಳ: ಯು.ಎಸ್. ನಾಯಕ್ ಎಸಿ ಹಾಲ್, ಚಿಟ್ಪಾಡಿ, ಉಡುಪಿ. ವಾರ್ಷಿಕೋತ್ಸವ: ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ. ಅತಿಥಿಗಳು- ಸಚಿವ ಪ್ರಮೋದ್ ಮಧ್ವರಾಜ್, ಜಿಪಂ ಅಧ್ಯಕ್ಷ ದಿನಕರ ಬಾಬು. ಸಮಯ: ಅಪರಾಹ್ನ 3ಕ್ಕೆ, ಸ್ಥಳ:ದೈವಜ್ಞ ಮಂದಿರ, ವಳಕಾಡು ಉಡುಪಿ. ಚಿಟ್ಟಾಣಿ ಸಪ್ತಾಹ: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸಿರುವ 9ನೆ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹದಲ್ಲಿ ಯಕ್ಷಗಾನ ‘ಚೂಡಾಮಣಿ-ರಾವಣವಧೆ’. ಸಮಯ: ಸಂಜೆ 6:30ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.
ಪೇಜಾವರ ಶ್ರೀಗಳ ಪರ್ಯಾಯದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ವಿದ್ವಾನ್ ಗುರುರಾಜ ಆಚಾರ್ಯ ಗುಡಿ ಇವರಿಂದ. ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 7ರಿಂದ ರಾಜಾಂಗಣದಲ್ಲಿ ಚಿಟ್ಟಾಣಿ ಯಕ್ಷಗಾನ ಸಪ್ತಾಹ.
ಉದ್ಘಾಟನೆ: ಕುಂದಾಪುರದ ನೂತನ ಅಗ್ನಿ ಟಿವಿ ಉದ್ಘಾಟನೆ ಬಾಳೆಕುದ್ರು ಮಠದ ಶ್ರೀನೃಸಿಂಹಾಶ್ರಮ ಮಹಾಸ್ವಾಮೀಜಿಯವರಿಂದ. ಸಮಯ: ಸಂಜೆ 6ಕ್ಕೆ. ಸ್ಥಳ: ಗಾಂಧಿ ಮೈದಾನ ಕುಂದಾಪುರ.





