ಇಮ್ರಾನ್‌ಖಾನ್‌ರನ್ನು ಬಂಧಿಸಲು ಕೋರ್ಟು ಆದೇಶ
ಇಸ್ಲಾಮಾಬಾದ್, ಅಕ್ಟೋಬರ್ 22: ಮಾಜಿ ಕ್ರಿಕೆಟ್ ತಾರೆ ತೆಹ್ರಿಕೆ ಇನ್ಸಾಫ್ ಪಾರ್ಟಿ ಅಧ್ಯಕ್ಷ ಇಮ್ರಾನ್ ಖಾನ್‌ರನ್ನು ಮತ್ತು ವಿದ್ವಾಂಸ ತಾಹಿರುಲ್ ಖಾದ್ರಿಯವರನ್ನು (ಪಾಕಿಸ್ತಾನ್ ಅವಾಮಿ ತೆಹ್ರಿಕ್ ನಾಯಕ) ಬಂಧಿಸಲು ಪಾಕ್ ಭಯೋತ್ಪಾದನಾ ವಿರೋಧಿ ಕೋರ್ಟು ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.
2014ರ ಸರಕಾರ ವಿರೋಧಿ ಜಾಥಾದ ವೇಳೆ ಪಾಕ್ ಟೆಲಿವಿಷನ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಕೋರ್ಟು ಹೊರಡಿಸಿದ್ದು, ಈವರೆಗೆ ಆರೆಸ್ಟ್ ವಾರಂಟ್ ಜಾರಿಗೆ ತರಲು ಪಾಕಿಸ್ತಾನ ಪೊಲೀಸರು ವಿಫಲರಾಗಿದ್ದಾರೆನ್ನಲಾಗಿದೆ. ಆದರೆ,ನವೆಂಬರ್ 17ಕ್ಕಿಂತ ಮೊದಲು ಇಬ್ಬರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಬೇಕೆಂದು ಕೋರ್ಟು ಪೊಲೀಸರಿಗೆ ಆದೇಶಿಸಿದೆ.
ಜಡ್ಜ್ ಕೌಸರ್ ಅಬ್ಬಾಸ್ ಝೈದಿ ಇಮ್ರಾನ್ ಮತ್ತು ತಾಹಿರುಲ್ ಖಾದ್ರಿ ಮಾತ್ರವಲ್ಲ ಅವರಿಬ್ಬರ ಎರಡು ಪಕ್ಷಗಳ 68 ಬೆಂಬಲಿಗರನ್ನು ಕೂಡಾ ಬಂಧಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಧಾನಿ ನವಾಝ್ ಶರೀಫ್ ಅಕ್ರಮವೆಸಗುತ್ತಿದ್ದಾರೆಂದು ಅವರನ್ನು ಪ್ರಧಾನಿಸ್ಥಾನದಿಂದ ಬದಲಾಯಿಸಬೇಕೆಂದು ಆಗ್ರಹಿಸಿಸಿ 500ರಷ್ಟು ಪಕ್ಷ ಕಾರ್ಯಕರ್ತರು ಟೆಲಿವಿಷನ್ ಕೇಂದ್ರಕ್ಕೆ ಮುತ್ತಿಗೆಹಾಕಿದ್ದು, ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.







