ಮೋದಿ ಅಸಹಾಯಕ: ಪರಿಶಿಷ್ಟಜಾತಿ ಆಯೋಗದ ಅಧ್ಯಕ್ಷರ ಹೇಳಿಕೆ

ಹೊಸದಿಲ್ಲಿ, ಅಕ್ಟೋಬರ್ 22: ದಲಿತರ ವಿರುದ್ಧ ದಾಳಿಗಳನ್ನು ತಡೆಯುವುದರಲ್ಲಿ ಪ್ರಧಾನಮಂತ್ರಿ ಮೋದಿ ಅಸಹಾಯಕರಾಗಿದ್ದಾರೆಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಡಾ.ಪಿ.ಎಲ್. ಪುನಿಯ ಹೇಳಿದ್ದಾರೆಂದುವರದಿಯಾಗಿದೆ. ದಲಿತರ ಮೇಲೆ ದಾಳಿ ಮಾಡುವ ಮೊದಲು ತನಗೆ ಗುಂಡುಹಾರಿಸಿ ಎಂದು ಮೋದಿಹೇಳಿಕೊಂಡಿರುವುದು ಅವರ ಅಸಹಾಯಕತೆಯನ್ನು ತೋರಿಸುತ್ತಿದೆ. ದಲಿತರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ಬಲವಾಗಿ ತಡೆಯುವ ಪ್ರಧಾನಿ ನಮಗೆ ಅಗತ್ಯವಿದ್ದಾರೆ ಎಂದು ಪುನಿಯ ಹೇಳಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತನಲ್ಲ ಎಂದು ವರದಿ ಸಲ್ಲಿಸಿದ ಜ್ಯೂಡಿಶಿಯಲ್ ಕಮೀಶನ್ ಸರಕಾರದ ಹಿತಾಸಕ್ತಿಯನ್ನು ಸಂರಕ್ಷಿಸುವ ಕೆಲಸವನ್ನು ಮಾಡಿತು. ಜಡ್ಜ್‌ರನ್ನು ಖರೀದಿಸಲಾಗಿತ್ತು ಎಂದು ಪುನಿಯ ಆರೋಪಿಸಿದ್ದಾರೆ.
ಪರಿಶಿಷ್ಟಜಾತಿ ಆಯೋಗದ ವರದಿಗಳಿಗೆ ಒಂದು ಶಿಫಾರಸಿನ ಗುಣ ಮಾತ್ರ ಇರುವುದು. ವರದಿಯಲ್ಲಿ ತಿಳಿಸುವ ವಿಷಯಗಳನ್ನು ಜಾರಿಗೆ ತರಬೇಕೆಂದು ಹೇಳಲು ಆಯೋಗಕ್ಕೆ ಅಧಿಕಾರವಿಲ್ಲ. ಆದ್ದರಿಂದ ಆಯೋಗ ಹೆಚ್ಚು ಟೀಕೆಗೆ ಗುರಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
2013-14ರಿಂದ 2016ರ ಸೆಪ್ಟಂಬರ್ ವರೆಗೆ 54.345 ದೂರುಗಳು ಆಯೋಗಕ್ಕೆ ಸಿಕ್ಕಿತ್ತು. ಈ ವರ್ಷ 8700 ದೂರುಗಳುಲಭಿಸಿದೆ. ದೂರುಗಳ ಹೆಚ್ಚಳಕ್ಕೆ ತಕ್ಕಂತೆ ಆಯೋಗಕ್ಕೆ ಹೆಚ್ಚಿನ ಉದ್ಯೋಗಿಗಳನ್ನು ನೇಮಕಗೊಳಿಸಬೇಕು. ಫೀಲ್ಡ್ ಆಫೀಸರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ ಎಂದುಪುನಿಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆಂದುವರದಿ ತಿಳಿಸಿದೆ.







